ಆ್ಯಪ್ನಗರ

‘ಸವರ್ಣ ದೀರ್ಘ ಸಂಧಿ’ಯಿಂದ ವ್ಯಾಕರಣ ಪುಸ್ತಕ!

ತಾಲೂಕಿನ ರಂಗೇನಹಳ್ಳಿ ಗ್ರಾಮದ ಶ್ರೀಭಗವತಿ ಆಂಜನೇಯ ಪಪೂ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ 'ಸವರ್ಣ ದೀರ್ಘ ಸಂಧಿ' ಚಲನಚಿತ್ರ ತಂಡ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪುಸ್ತಕ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿಪ್ರಚಾರ ನಡೆಸಿತು.

Vijaya Karnataka 11 Oct 2019, 5:00 am
ಹಿರಿಯೂರು: ತಾಲೂಕಿನ ರಂಗೇನಹಳ್ಳಿ ಗ್ರಾಮದ ಶ್ರೀಭಗವತಿ ಆಂಜನೇಯ ಪಪೂ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ 'ಸವರ್ಣ ದೀರ್ಘ ಸಂಧಿ' ಚಲನಚಿತ್ರ ತಂಡ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪುಸ್ತಕ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿಪ್ರಚಾರ ನಡೆಸಿತು.
Vijaya Karnataka Web grammar book by golden long sandhi
‘ಸವರ್ಣ ದೀರ್ಘ ಸಂಧಿ’ಯಿಂದ ವ್ಯಾಕರಣ ಪುಸ್ತಕ!


ಚಿತ್ರದ ಹೆಸರೇ ತಿಳಿಸುವಂತೆ ಅದು ಕನ್ನಡ 'ಸಂಧಿ'ಗಳ ಪೈಕಿ ಒಂದು ಹೆಸರು. ಜತೆಗೆ ಕಿರುತೆರೆ ಹಾಗೂ ಸಿನೆಮಾಗಳಲ್ಲಿನಟಿಸಿರುವ ಪೋಷಕ ನಟ ಅಂಬರೀಶ್‌ ಸಾರಂಗಿ ರಂಗೇನಹಳ್ಳಿ ಗ್ರಾಮದವರು. ಚಿತ್ರದ ನಾಯಕ ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಚಿತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಪೋಷಕ ನಟ ರವಿಭಟ್‌ ಚಿತ್ರತಂಡದವರನ್ನು ಸಭೆಗೆ ಪರಿಚಯಿಸಿದರು. ತಮ್ಮ ಪಾತ್ರದ ಬಗ್ಗೆ ವಿವರಿಸಿದ ಚಿತ್ರದ ನಾಯಕಿ ನಟಿ ಕೃಷ್ಣಭಟ್‌ ಹಾಡು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.

ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪುಸ್ತಕ ವಿತರಿಸಿದ ಪೋಷಕ ನಟ ಅಂಬರೀಶ್‌ ಸಾರಂಗಿ, ಕನ್ನಡ ವ್ಯಾಕರಣದಲ್ಲಿಸವರ್ಣ ದೀರ್ಘ ಸಂಧಿಯ ಮಹತ್ವ ವಿವರಿಸುತ್ತಾ ಚಲನ 'ಚಿತ್ರದ ಗ್ರಾಮರ್‌' ಏನೆಂಬುದನ್ನು ವಿವರಿಸಿದರು.

ಈ ಸಂದರ್ಭದಲ್ಲಿಗ್ರಾಮದ 'ಸಹೃದಯಿ ಗ್ರಾಮೀಣಾಭಿವೃದ್ಧಿ ಸಂಘ'ದ ಅಧ್ಯಕ್ಷ ಹುಸೇನ್‌ಪೀರ್‌, ಮಂಜುನಾಥ್‌, ಶಿಕ್ಷಕ ಗಿರೀಶ್‌, ರುದ್ರಮುನಿ, ಸಂಸ್ಥೆ ಅಧ್ಯಕ್ಷ ವೀರಮುದಿಯಪ್ಪ, ಕಾರ್ಯದರ್ಶಿ ಶಿವಣ್ಣ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ