ಆ್ಯಪ್ನಗರ

ಜನವರಿಯಲ್ಲಿ ‘ಗೀತೋತ್ಸವ-2019’

ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನಿಂದ ಜನವರಿ 13, 14ರಂದು ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ 'ಗೀತೋತ್ಸವ-2019' ಆಯೋಜಿಸಲಾಗುತ್ತಿದೆ ಎಂದು ಪರಿಷತ್‌ನ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

Vijaya Karnataka 11 Dec 2018, 5:00 am
ಚಿತ್ರದುರ್ಗ: ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನಿಂದ ಜನವರಿ 13, 14ರಂದು ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ 'ಗೀತೋತ್ಸವ-2019' ಆಯೋಜಿಸಲಾಗುತ್ತಿದೆ ಎಂದು ಪರಿಷತ್‌ನ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
Vijaya Karnataka Web jubilee 2019 in january
ಜನವರಿಯಲ್ಲಿ ‘ಗೀತೋತ್ಸವ-2019’


ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಈಗಾಗಲೇ ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ ಸಮ್ಮೇಳನ ನಡೆಸಲಾಗಿದೆ. ಈ ಬಾರಿ ಕೋಟೆನಾಡು ಚಿತ್ರದುರ್ಗದಲ್ಲಿ ಆಯೋಜಿಸಲಿದ್ದು, ಮೂನ್ನೂರಕ್ಕೂ ಹೆಚ್ಚು ಸಂಗೀತ ದಿಗ್ಗಜರು ಭಾಗವಹಿಸಲಿದ್ದಾರೆ' ಎಂದರು.

ಹಿರಿಯ ಗಾಯಕಿ ಮಾಲತಿ ಶರ್ಮಾ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಡಾ.ಶಿವಮೂರ್ತಿ ಮುರುಘಾ ಶರಣರ ದಿವ್ಯ ಸಾನ್ನಿಧ್ಯದಲ್ಲಿ ಈ ಸಮ್ಮೇಳನ ನಡೆಯಲಿದೆ. ಶೀಘ್ರದಲ್ಲೇ ಸಮ್ಮೇಳನದ ಸ್ವರೂಪ ಮತ್ತಿತರ ವಿವರಗಳ ಮಾಹಿತಿ ನೀಡಲಾಗುವುದು ಎಂದರು.

ಎರಡು ದಿನ ನಡೆಯಲಿರುವ ಸಮ್ಮೇಳನದಲ್ಲಿ 150ಕ್ಕೂ ಹೆಚ್ಚು ಸುಗಮ ಸಂಗೀತ ಹಾಡುಗಾರರು, ಹೆಸರಾಂತ ಸಂಗೀತ ನಿರ್ದೇಶಕರು, 40ಕ್ಕೂ ಹೆಚ್ಚು ವಾದ್ಯಕಲಾವಿದರು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಕವನ ವಾಚನ ಹಾಗೂ ಸ್ವರ ಸಂಯೋಜಿಸಿ ಅವಕಾಶ ಮಾಡಿಕೊಡಲಾಗುವುದು ಎಂದರು.

ಸಮ್ಮೇಳನಕ್ಕೂ ಮೊದಲು ಜನವರಿ 4,5 ಮತ್ತು 6ನೇ ತಾರೀಖು ಹೆಸರಾಂತ ಗಾಯಕಿ ಬಿ.ಕೆ. ಸುಮಿತ್ರ, ಬಿ.ವಿ ಶ್ರೀನಿವಾಸ್‌ ಉಡುಪರ ನೇತೃತ್ವದಲ್ಲಿ 'ಗೀತ ಗಾಯನ' ಉಚಿತ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಇಲ್ಲಿನ ಸ್ಥಳೀಯ ಶಾಲಾ, ಕಾಲೇಜು ಹಾಗೂ ಸಂಗೀತ ಶಾಲೆಗಳ ವಿದ್ಯಾರ್ಥಿಗಳು, ಹವ್ಯಾಸಿ ಹಾಡುಗಾರರು ಭಾಗವಹಿಸಬಹುದು. ವಯೋಮಿತಿಯ ನಿರ್ಬಂಧ ಇಲ್ಲ ಎಂದರು. ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್‌, ಶ್ರೀನಿವಾಸ ಉಡುಪ, ಡಿ.ರವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ