ಆ್ಯಪ್ನಗರ

11 ಚುನಾವಣೆ ಗೆದ್ದ ನಾಯಕ ಖರ್ಗೆ, ಬಿಜೆಪಿಯಲ್ಲಿ ಯಾರಾದರೂ ಗೆದ್ದಿದ್ದರೆ ಹೇಳಿ: ಕಟೀಲ್‌ಗೆ ಮುನಿಯಪ್ಪ ತಿರುಗೇಟು

“ಖರ್ಗೆ ಬಗ್ಗೆ ಮಾತನಾಡಲು ಕಟೀಲ್ ಬಹಳ ಚಿಕ್ಕವರು. ಪಕ್ಷದ ಧೋರಣೆಗಳನ್ನು ಹೇಳಿ ಚುನಾವಣೆ ಮಾಡಲಿ. ವೈಯಕ್ತಿಕವಾಗಿ ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು,” ಎಂದು ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 10 Feb 2020, 1:56 pm

ಚಿತ್ರದುರ್ಗ: ಮಲ್ಲಿಕಾರ್ಜುನ ಖರ್ಗೆ ಆರಿದ ದೀಪ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರದ ಮಾಜಿ ಸಚಿವ ಕೆಎಚ್‌ ಮುನಿಯಪ್ಪ, “ದೇಶದಲ್ಲಿ 11 ಚುನಾವಣೆ ಗೆದ್ದ ನಾಯಕ ಖರ್ಗೆ. ಬಿಜೆಪಿಯಲ್ಲಿ ಯಾರಾದರೂ ಗೆದ್ದಿದ್ದರೆ ಹೇಳಿ,” ಎಂದು ಸವಾಲು ಹಾಕಿದ್ದಾರೆ.
Vijaya Karnataka Web KH Muniyappa Nalin Kumar Kateel


“ಬಾಬು ಜಗಜೀವನ್ ರಾಮ್ ನಂತರ ನಿರಂತರವಾಗಿ ಸೋಲಿಲ್ಲದೆ ಬಂದವರು ಖರ್ಗೆ. ಕಾಂಗ್ರೆಸ್ ಸಿದ್ಧಾಂತದಿಂದ ನಿರಂತರವಾಗಿ ಸೋಲಿಲ್ಲದೆ ಗೆದ್ದಿರುವ ನಾಯಕ ಅವರು. ವಾಜಪೇಯಿ, ಅಡ್ವಾಣಿ ಸೋತಿಲ್ವಾ? ಸೋಲು ಗೆಲುವು ರಾಜಕೀಯದಲ್ಲಿ ಇರುತ್ತೆ,” ಎಂದು ಹೇಳಿದರು.

“ಖರ್ಗೆ ಬಗ್ಗೆ ಮಾತನಾಡಲು ಕಟೀಲ್ ಬಹಳ ಚಿಕ್ಕವರು. ಪಕ್ಷದ ಧೋರಣೆಗಳನ್ನು ಹೇಳಿ ಚುನಾವಣೆ ಮಾಡಲಿ. ವೈಯಕ್ತಿಕವಾಗಿ ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ 1000 ವೋಲ್ಟ್‌ನ ಹ್ಯಾಲೋಜಿನ್‌ ಲೈಟ್‌ ಇದ್ದ ಹಾಗೆ: ನಳಿನ್‌ ಕುಮಾರ್‌ ಕಟೀಲ್‌

ಕಟೀಲ್ ಅವರಿಗೆ ಅನುಭವದ ಕೊರತೆ ಇದೆ, ಹೀಗಾಗಿ ಮಾತನಾಡುತ್ತಾರೆ ಎಂದ ಮುನಿಯಪ್ಪ, “ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇದೆ. ಉತ್ತರ ಭಾರತದಲ್ಲಿ ಒಂದಲ್ಲ ಒಂದು ಕಡೆ ಬಿಜೆಪಿ ಸೋಲುತ್ತಿದೆ. ಇದನ್ನು ಕಟೀಲ್ ಅರ್ಥ ಮಾಡಿಕೊಳ್ಳಬೇಕು,” ಎಂದು ಕುಟುಕಿದರು.

ಮೋದಿಯವರ ಎಲ್ಲಾ ತೀರ್ಮಾನಗಳು ಜನ ವಿರೋಧಿಯಾಗಿವೆ. ಜಿಎಸ್‌ಟಿ, ನೋಟ್‌ಬ್ಯಾನ್ ಮಾಡಿದರು. ಹಿಂದೂ- ಮುಸ್ಲಿಂರನ್ನು ಬೇರ್ಪಡಿಸಲು ಸಿಎಎ, ಎನ್‌ಆರ್‌ಸಿ ಜಾರಿಗೆ ತಂದಿದ್ದಾರೆ. ಇಡೀ ದೇಶದಲ್ಲಿ ಮೋದಿ ಕೋಮು ಗಲಭೆಗೆ ಕಾರಣಕರ್ತರಾಗಿದ್ದಾರೆ. ಮೋದಿಯವರಿಗೆ ಪಾಠ ಕಲಿಸುವ ಸಮಯ ಬಂದಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ