ಆ್ಯಪ್ನಗರ

ಯೋಧರ ಸ್ಮರಿಸುವ ಕೆಲಸ ಆಗಲಿ

ದೇಶದ ಜನರ ರಕ್ಷ ಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಯೋಧರಿಗೆ ಗೌರವ ನೀಡುವ, ಸ್ಮರಿಸುವ ಕೆಲಸ ಆಗಬೇಕು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ತಿಳಿಸಿದರು.

Vijaya Karnataka 27 Jul 2019, 5:00 am
ಚಿತ್ರದುರ್ಗ : ದೇಶದ ಜನರ ರಕ್ಷ ಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಯೋಧರಿಗೆ ಗೌರವ ನೀಡುವ, ಸ್ಮರಿಸುವ ಕೆಲಸ ಆಗಬೇಕು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ತಿಳಿಸಿದರು.
Vijaya Karnataka Web let the warriors remembrance work
ಯೋಧರ ಸ್ಮರಿಸುವ ಕೆಲಸ ಆಗಲಿ


ನಗರದ ಬಿಡಿ ರಸ್ತೆಯ ಸ್ಟೇಡಿಯಂ ತಿರುವಿನ ಚೈತನ್ಯ ವೃತ್ತದಲ್ಲಿ ವೀರ ಯೋಧ ಚೈತನ್ಯ ಅಭಿಮಾನಿಗಳ ಬಳಗದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್‌ ವಿಜಯೋತ್ಸವ ಮತ್ತು ವೀರ ಯೋಧ ಚೈತನ್ಯ ಸ್ತಂಭ ನಿರ್ಮಾಣ ಕುರಿತು ಬೃಹತ್‌ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದರೆ, ಅದಕ್ಕೆ ಗಡಿಯಲ್ಲಿ ಕಷ್ಟಪಟ್ಟು ದೇಶ ರಕ್ಷ ಣೆ ಮಾಡುತ್ತಿರುವ ಸೈನಿಕರ ಶ್ರಮವೇ ಕಾರಣ. ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸಬೇಕು ಎಂದು ಹೇಳಿದರು.

ದೇಶ ಕಾಯುವ ಯೋಧರು ತಂದೆ, ತಾಯಿ, ಪತ್ನಿ ಸೇರಿದಂತೆ ಕುಟುಂಬದವರಿಂದ ದೂರವಿದ್ದು, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಗಡಿಯಲ್ಲಿ ಮೈನಸ್‌ ನಲವತ್ತು ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಊಟ, ತಿಂಡಿ, ನಿದ್ದೆ ಇವುಗಳ ಹಂಗೇ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸೈನಿಕರ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯರಾದ ನಮಗೆ ದೇಶ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶತ್ರು ರಾಷ್ಟ್ರಗಳ ಬಗ್ಗೆ ಎಚ್ಚರಿಕೆ


ಸಾನ್ನಿಧ್ಯ ವಹಿಸಿದ್ದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಕಾರ್ಗಿಲ್‌ ವಿಜಯೋತ್ಸವಕ್ಕೆ 20 ವರ್ಷ ಸಂದಿದೆ. ಈ ಯುದ್ಧದಲ್ಲಿ ಹೋರಾಡಿ ಮಡಿದ ಯೋಧರನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ಮರಿಸಬೇಕು. 1962ರಲ್ಲಿ ಚೀನಾ ಹಾಗೂ 1999ರಲ್ಲಿ ಪಾಕಿಸ್ತಾನ ಭಾರತಕ್ಕೆ ದ್ರೋಹ ಬಗೆದವು. ಹಾಗಾಗಿ ನಾವು ಈ ಎರಡು ಶತ್ರು ರಾಷ್ಟ್ರಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾರತೀಯ ಸೇನೆ ಸ್ಪೇಷಲ್‌ ಫೋರ್ಸ್‌ ಪ್ಯಾರಾಚೂಟ್‌ ಕಮಾಂಡರ್‌ ವಿನಯ್‌ ಕುಮಾರ್‌, ನಿವೃತ್ತ ಸೇನಾ ಅಧ್ಯಕ್ಷ ಕ್ಯಾಪ್ಟನ್‌ ಮಹೇಶ್ವರಪ್ಪ, ನಿವೃತ್ತ ಸೈನಿಕ ಬಸವರಾಜ್‌, ನಗರಸಭೆ ಸದಸ್ಯೆ ಶ್ರೀದೇವಿ, ಕರವೇ ಜಿಲ್ಲಾಧ್ಯಕ್ಷ ಟಿ.ರಮೇಶ್‌, ಮಲ್ಲಾಪುರ ನಾಗರಾಜ್‌, ವೀರ ಯೋಧ ಚೈತನ್ಯ ಅಭಿಮಾನಿಗಳ ಬಳಗದ ಮುಖ್ಯಸ್ಥ ನಟರಾಜ್‌, ಚೈತನ್ಯ ಅವರ ತಾಯಿ ಸರೋಜಮ್ಮ ಮತ್ತಿತರರು ಉಪಸ್ಥಿತರಿದ್ದರು.


===== ಬಾಕ್ಸ್‌..

ದೇಶದ ಮೊದಲ ಶತ್ರು


ಚೀನಾ ನಮ್ಮ ದೇಶಕ್ಕೆ ಮೊದಲ ಶತ್ರು ಚೀನಾ. ಹಾಗಾಗಿ ಚೀನಾದ ವಿರುದ್ಧ ಕೇವಲ ಸೈನಿಕರು ಹೋರಾಟ ಮಾಡಿದರೆ ಸಾಲದು. ದೇಶದ ಪ್ರಜೆಗಳಾದ ನಾವೂ ಹೋರಾಟ ಮಾಡಬೇಕು. ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಚೀನಾ ಉತ್ಪನ್ನಗಳನ್ನು ಖರೀದಿಸಬಾರದು. ದೇಶದ ಜನರು ಅವುಗಳನ್ನು ತಿರಸ್ಕರಿಸಿದಲ್ಲಿ ಚೀನಾಗೆ ಆರ್ಥಿಕ ದೊಡ್ಡ ಹೊಡೆತ ಬೀಳಲಿದೆ. ಆ ಮೂಲಕ ನಮ್ಮ ಸೈನಿಕರಿಗೆ ನೈತಿಕ ಬೆಂಬಲ ನೀಡಬೇಕು ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕರೆ ನೀಡಿದರು.

-

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ