ಆ್ಯಪ್ನಗರ

ಚಿತ್ರದುರ್ಗದಲ್ಲಿ ಲಾಕಪ್‌ ಡೆತ್‌: ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶದಲ್ಲೇ ಸಾವು...

ಇದು ಲಾಕಪ್‌ನಲ್ಲೇ ಸಂಭವಿಸಿರುವ ಪ್ರಕರಣವಾಗಿರುವುದರಿಂದ ಸಿಐಡಿ ಪೊಲೀಸರು ಲಾಕಪ್‌ ಡೆತ್‌ ಪ್ರಕರಣ ದಾಖಲಿಸಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ ಯಾರನ್ನೂ ಆರೋಪಿಗಳೆಂದು ಗುರುತಿಸಿಲ್ಲ ಎಂದು ತಿಳಿದುಬಂದಿದೆ.

Vijaya Karnataka Web 14 Jan 2021, 1:24 pm
ಚಿತ್ರದುರ್ಗ: ಗಾಂಜಾ ಮಾರಾಟದ ಆರೋಪದ ಮೇಲೆ ಆಂತರಿಕ ಭದ್ರತಾ ಪಡೆಯ ವಶದಲ್ಲಿದ್ದ ಆರೋಪಿಯೊಬ್ಬರು ಮೃತಪಟ್ಟಿದ್ದಾರೆ.
Vijaya Karnataka Web dead body1
Representative image


ಚಿತ್ರದುರ್ಗ ನಗರದ ಅಗಳೇರಿ ಬಡಾವಣೆಯ ಶಿವಾಜಿರಾವ್ ‌(47) ಮೃತ ವ್ಯಕ್ತಿ. ಮಂಗಳವಾರ ಸಂಜೆ ಪೊಲೀಸರು ವಶಕ್ಕೆ ಪಡೆದ ನಂತರ ನಗರ ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ. ಕರೆ ತಂದ ಹತ್ತು ನಿಮಿಷದಲ್ಲೇ ಕುಸಿದು ಬಿದ್ದ ಶಿವಾಜಿರಾವ್‌ರನ್ನು ಜಿಲ್ಲಾಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಆರೋಪಿ ಶಿವಾಜಿ ರಾವ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಇದು ಲಾಕಪ್‌ನಲ್ಲೇ ಸಂಭವಿಸಿರುವ ಪ್ರಕರಣವಾಗಿರುವುದರಿಂದ ಸಿಐಡಿ ಪೊಲೀಸರು ಲಾಕಪ್‌ ಡೆತ್‌ ಪ್ರಕರಣ ದಾಖಲಿಸಿದ್ದಾರೆ. ಆದ್ರೆ, ಈ ಪ್ರಕರಣದಲ್ಲಿ ಯಾರನ್ನೂ ಆರೋಪಿಗಳೆಂದು ಗುರುತಿಸಿಲ್ಲ.

ರಾಯಚೂರು ಲಾಕಪ್ ಡೆತ್ ಪ್ರಕರಣ: ಪಿಎಸ್‌ಐ, ಕಾನ್ಸ್‌ಟೇಬಲ್ ಸಸ್ಪೆಂಡ್
ಜೆಎಂಎಫ್‌ಸಿ ನ್ಯಾಯಾಧೀಶರ ಆದೇಶದ ಮೇರೆಗೆ ವೈದ್ಯರ ತಂಡ ಶವ ಪರೀಕ್ಷೆ ನಡೆಸಿದ್ದು, ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಬುಧವಾರ ಸಂಜೆ ಅಂತ್ಯಕ್ರಿಯೆ ಕೂಡಾ ನಡೆದಿದೆ.

ಲಾಕಪ್ ಡೆತ್ ಆರೋಪ- ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ - ಉದ್ವಿಗ್ನ ವಾತಾವರಣ
ಪ್ರಕರಣ ದಾಖಲಿಸಿರುವ ಸಿಐಡಿ ಪೊಲೀಸರು ಸಿಸಿಟಿವಿ ಫೂಟೇಜ್‌ ಹಾಗೂ ಶವ ಪರೀಕ್ಷೆಯ ವರದಿ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಎಸ್ಪಿ ಜಿ. ರಾಧಿಕಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ