ಆ್ಯಪ್ನಗರ

ಚಿತ್ರದುರ್ಗ: ಕೊರೊನಾ ಸೋಂಕಿತರನ್ನು ಭೇಟಿ ಮಾಡಿದ್ದ ವ್ಯಕ್ತಿ ಸಾವು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಚಿತ್ರದುರ್ಗದಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಗುಜರಾತ್‌ನಿಂದ ಬಂದಿದ್ದ ತಬ್ಲಿಘಿಗಳನ್ನು ಭೇಟಿ ಮಾಡಿದ್ದರು.

Vijaya Karnataka Web 17 May 2020, 1:39 pm
ಚಿತ್ರದುರ್ಗ: ಕೊರೊನಾ ಸೋಂಕು ಪೀಡಿತರನ್ನು ಭೇಟಿ ಮಾಡಿ ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು 53 ವರ್ಷದ ಅತೀಕ್ ಉರ್ ರೆಹಮಾನ್ ಎಂದು ಗುರುತಿಸಲಾಗಿದೆ.
Vijaya Karnataka Web coronavirus bccl


ಮೇ 05 ರಂದು ಗುಜರಾತ್ನ ಅಹಮದಾಬಾದ್‌ನಿಂದ ಚಿತ್ರದುರ್ಗಕ್ಕೆ ಬಂದಿರುವ 15 ಮಂದಿ ತಬ್ಲಿಘಿಗಳನ್ನು ಭೇಟಿ ಮಾಡಿದ್ದರು. ಮೇ 08 ರಂದು ತಬ್ಲಿಘಿಗಳ ಗಂಟಲು ದ್ರವದ ಪ್ರಯೋಗಾಲಯದ ವರದಿಯಲ್ಲಿ 06 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಆ ನಂತರ ತಬ್ಲಿಘಿಗಳನ್ನು ಸಂಪರ್ಕ ಮಾಡಿದ್ದ ಹಲವರನ್ನು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು.

ಅವರಲ್ಲಿ ಅತೀಕ್ ಉರ್ ರೆಹಮಾನ್ ಎಂಬ ವ್ಯಕ್ತಿಗೆ ಮೇ 17, 2020ರ ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆ ದಾಖಲು ಮಾಡುವ ಮುನ್ನವೇ ಅತೀಕ್ ಉರ್ ರೆಹಮಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ನಡುವೆ ಮೃತನ ಗಂಟಲು ದ್ರವ ಸಂಗ್ರಹಿಸಿರುವ ಆರೋಗ್ಯಾಧಿಕಾರಿಗಳು, ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.

ಅಹಮದಾಬಾದ್‍ನಿಂದ ಚಿತ್ರದುರ್ಗಕ್ಕೆ ಮರಳಿದ 15 ತಬ್ಲಿಘಿಗಳಿಗೆ ಸಾಂಸ್ಥಿಕ ಕ್ವಾರಂಟೈನ್!

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್‌ನೊಂದಿಗೆ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದು, ಅಂತ್ಯ ಸಂಸ್ಕಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಚಿತ್ರದುರ್ಗ ಜಿಲ್ಲಾಡಳಿತ ಸೂಚನೆ ನೀಡಿದೆ.

ಚಿತ್ರದುರ್ಗಕ್ಕೂ ಕಾಲಿಟ್ಟ ಕೊರೊನಾ ವೈರಸ್‌, 35 ವರ್ಷದ ಮಹಿಳೆಯಲ್ಲಿ ಸೋಂಕು ದೃಢ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ