ಆ್ಯಪ್ನಗರ

ಚಿಕಿತ್ಸೆ ಸಿಗದೆ ನರಳುವ ಮಾನಸಿಕ ಅಸ್ವಸ್ಥ

ಎಂಟು ಹಾಸಿಗೆಗಳ ವಿಶಾಲ ವಾರ್ಡ್‌ನಲ್ಲಿ ಮಾನಸಿಕ ಅಸ್ವಸ್ಥನೊಬ್ಬ ನೆಲದ ಮೇಲೆ ಬಿದ್ದು ಸೂಕ್ತ ಚಿಕಿತ್ಸೆ ದೊರೆಯದೆ ಕಳೆದ ಹದಿನೆಂಟು ದಿನಗಳಿಂದ ಪರಿತಪಿಸುವ ದೃಶ್ಯ ಮನಕಲಕುವಂತಿದೆ.

Vijaya Karnataka 23 May 2019, 5:00 am
ಮೊಳಕಾಲ್ಮುರು : ಎಂಟು ಹಾಸಿಗೆಗಳ ವಿಶಾಲ ವಾರ್ಡ್‌ನಲ್ಲಿ ಮಾನಸಿಕ ಅಸ್ವಸ್ಥನೊಬ್ಬ ನೆಲದ ಮೇಲೆ ಬಿದ್ದು ಸೂಕ್ತ ಚಿಕಿತ್ಸೆ ದೊರೆಯದೆ ಕಳೆದ ಹದಿನೆಂಟು ದಿನಗಳಿಂದ ಪರಿತಪಿಸುವ ದೃಶ್ಯ ಮನಕಲಕುವಂತಿದೆ.
Vijaya Karnataka Web mental illness that suffers from healing
ಚಿಕಿತ್ಸೆ ಸಿಗದೆ ನರಳುವ ಮಾನಸಿಕ ಅಸ್ವಸ್ಥ


ಇದು ತಾಲೂಕಿನ ರಾಂಪುರ ಸಮುದಾಯ ಆರೋಗ್ಯಕ್ಕೆ ಕೇಂದ್ರದಲ್ಲಿನ ಮನೋರೋಗಿಯೊಬ್ಬನ ಕತೆ.

'ಇಲ್ಲಿನ ವೈದ್ಯರು ಈತ ನಮಗೆ ಸ್ಪಂದಿಸುತ್ತಿಲ್ಲ, ಇರುವ ಸ್ಥಳದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಾನೆ, ಈತನ ಸಂಗಡ ಸಹಾಯಕರಿಲ್ಲ' ಎನ್ನುವ ಕಾರಣ ತಿಳಿಸುತ್ತಾ ಈತನನ್ನು ಒಬ್ಬಂಟಿಯಾಗಿ ಬಿಟ್ಟು ಆಗೊಮ್ಮೆ ಈಗೊಮ್ಮೆ ಊಟ, ಚಿಕಿತ್ಸೆ ನೀಡುತ್ತಿದ್ದಾರೆ. ಅವರಿವರು ಒಳ ಹೋಗುತ್ತಾರೆ ಎಂದು ಈತನಿರುವ ಕೊಠಡಿಯನ್ನು ಸದಾ ಮುಚ್ಚಿರುತ್ತಾರೆ.

ತಾನ್ಯಾರೆಂದು ತಿಳಿಯದೆ ಊರೂರು ತಿರುಗಿ ಅವರಿವರು ಭಿಕ್ಷೆಯ ರೂಪದಲ್ಲಿ ನೀಡುವ ತಿನಿಸುಗಳನ್ನು ತಿಂದು ಅನೇಕ ತಿಂಗಳಿನಿಂದ ರಾಂಪುರದಲ್ಲಿ ಓಡಾಡುತ್ತಿದ್ದ. ಕಳೆದ ಮೇ 5 ರಂದು ಲಾರಿ ಅಪಘಾತದಲ್ಲಿ ತನ್ನ ಎಡಗಾಲಿನ ತೊಡೆ ಮೂಳೆ ಮುರಿದುಕೊಂಡು ಆಸ್ಪತ್ರೆಯ ಮೂಲೆಯಲ್ಲಿ ಒಂಟಿಯಾಗಿದ್ದಾನೆ.

ಮಾನಸಿಕ ತಜ್ಞ ಹಾಗೂ ಮೂಳೆ ತಜ್ಞರಿಲ್ಲದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಕಳೆದ ಹದಿನೆಂಟು ದಿನದಿಂದ ಆಸ್ಪತ್ರೆಯಲ್ಲಿ ಕೊಳೆ ಹಾಕಿದ್ದಾರೆ. ಆರೋಗ್ಯ ಇಲಾಖೆಯು ಪೊಲೀಸ್‌ ಇಲಾಖೆ ಕಡೆ ಬೆಟ್ಟು ಮಾಡಿದೆ.

ಇದು ಅಪಘಾತದ ಕೇಸ್‌. ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಾಗದ ಕಾರಣ ನಾವು ಪೊಲೀಸ್‌ ಪೇದೆ ಜತೆ ಹೆಚ್ಚಿನ ಚಿಕಿತ್ಸೆಗೆಂದು ಮೇ 6 ರಂದು ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ರೆಫರ್‌ ಮಾಡಿದ್ದೆವು, ಆದರೆ ಇನ್ನೂ ಹೆಚ್ಚಿನ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗೆ ಕಳಿಸಬೇಕೆಂದು ಮೇ 7 ರಂದು ವಾಪಾಸ್‌ ಇಲ್ಲಿಗೇ ಕರೆತಂದು ಬಿಟ್ಟಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪೊಲೀಸ್‌ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಇನ್ನೆರಡು ದಿನದಲ್ಲಿ ಈತನನ್ನು ಬೇರೆ ಕಡೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತೇವೆ ಎಂಬುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸುತ್ತಾರೆ ಎಂದು ಟಿಎಚ್‌ಒ ಡಾ.ತುಳಸಿರಂಗನಾಥ್‌ ಪತ್ರಿಕೆಗೆ ಮಾಹಿತಿ ನೀಡಿದರು.

=========ಕೋಟ್‌:

ಅಪಘಾತಕ್ಕೀಡಾದ ವ್ಯಕ್ತಿಯ ಹೇಳಿಕೆ ಪಡೆದು ಕೇಸು ದಾಖಲಿಸಲಾಗಿದೆ. ಈತ ತಿಳಿಸಿದ ವಿಳಾಸಗಳಲ್ಲಿ ಈತನ ಪೊಟೋ ಹಿಡಿದು ಈತನ ಸಂಬಂಧಿಕರು, ಕುಟುಂಬದವರಿಗೆ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈತ ಹೇಳುವಾಗ ಆಗಾಗ್ಗೆ ವಿಳಾಸ ಬದಲಿಸುತ್ತಾನೆ. ಮಾನವೀಯತೆ ದೃಷ್ಟಿಯಿಂದ ಊಟ, ತಿಂಡಿ ವೆಚ್ಚ ನಾವೇ ಭರಿಸುತ್ತಿದ್ದೇವೆ.

-ಕಿರಣ್‌ ಕುಮಾರ್‌, ಪಿಎಸ್‌ಐ, ರಾಂಪುರ.

======ಕೋಟ್‌:


ಕೂಡಲೇ ಈತನನ್ನು ಬೆಂಗಳೂರು ನಿಮಾನ್ಸ್‌ ಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈತನಿಗೆ ಚಿಕಿತ್ಸೆ ನೀಡುವುದು ನಮಗೆ ಸವಾಲಾಗಿದೆ. ಈತ ಬಟ್ಟೆ ಹರಿದುಕೊಂಡು, ಮಹಿಳಾ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುತ್ತಾನೆ. ಬಳ್ಳಾರಿ ಆಸ್ಪತ್ರೆಯ ಚಿಕಿತ್ಸೆಯನ್ನೇ ಫಾಲೋ ಅಪ್‌ ಮಾಡುತ್ತಿದ್ದೇವೆ.

ಡಾ.ಮಧುಕುಮಾರ್‌, ರಾಂಪುರ ಆಸ್ಪತ್ರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ