ಆ್ಯಪ್ನಗರ

ಬರೀ ಬಾತ್‌ ಮೆನು, ದೋಸೆಗೆ ಹೆಂಚೇ ಇಲ್ಲ

ಪುಳಿಯೊಗರೆ, ಚಿತ್ರಾನ್ನ, ಟೊಮೇಟೊ ಬಾತ್‌, ಫÜಲಾವ್‌, ಅನ್ನ ಸಾಂಬಾರ್‌ ಆಗಾಗ ರಿಪೀಟ್‌ ಆಗುವ ಊಟ ತಿಂಡಿ.. ಆದರೆ ಇಲ್ಲಿ ದೋಸೆ, ಪಡ್ಡು, ಇಡ್ಲಿ, ಇತರೆ ವೆರೈಟಿ ತಿಂಡಿಗಳ ಸುಳಿವಿಲ್ಲ. ಕಾರಣ, ದೋಸೆ ಮಾಡಲು ಹೆಂಚೇ ಇಲ್ಲ..!

Vijaya Karnataka 15 Dec 2018, 5:00 am
ಮೊಳಕಾಲ್ಮುರು : ಪುಳಿಯೊಗರೆ, ಚಿತ್ರಾನ್ನ, ಟೊಮೇಟೊ ಬಾತ್‌, ಫÜಲಾವ್‌, ಅನ್ನ ಸಾಂಬಾರ್‌ ಆಗಾಗ ರಿಪೀಟ್‌ ಆಗುವ ಊಟ ತಿಂಡಿ.. ಆದರೆ ಇಲ್ಲಿ ದೋಸೆ, ಪಡ್ಡು, ಇಡ್ಲಿ, ಇತರೆ ವೆರೈಟಿ ತಿಂಡಿಗಳ ಸುಳಿವಿಲ್ಲ. ಕಾರಣ, ದೋಸೆ ಮಾಡಲು ಹೆಂಚೇ ಇಲ್ಲ..!
Vijaya Karnataka Web only the bath menu doshe has no hesitation
ಬರೀ ಬಾತ್‌ ಮೆನು, ದೋಸೆಗೆ ಹೆಂಚೇ ಇಲ್ಲ


ಇದು ರಾಷ್ಟ್ರೀಯ ಹೆದ್ದಾರಿಯಂಚಿನ ಊರು ಹಾನಗಲ್‌ನ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್‌ ಪೂರ್ವ ಬಾಲಕರ ನಿಲಯದ ಕಥೆ.

ಹಾಸ್ಟೆಲ್‌ಗಳಲ್ಲಿ ವಾರ್ಡನ್‌ ಇದ್ದರೂ ಸಮಸ್ಯೆಗಳು ಸಾಕಷ್ಟಿರುತ್ತವೆ. ಆದರೆ ಈ ಹಾಸ್ಟೆಲ್‌ಗೆ ವಾರದಿಂದ ವಾರ್ಡನ್‌ ಇಲ್ಲ. ಇದ್ದ ವಾರ್ಡನ್‌ ಬೇರೆಡೆಗೆ ವರ್ಗಾವಾಗಿದ್ದಾರೆ. ಇವರ ಸ್ಥಾನಕ್ಕೆ ಯಾರೂ ನಿಯೋಜನೆ ನಡೆದಿಲ್ಲ.

ಅಕ್ಕಿ ಹೆಚ್ಚಾಗಿ ಬೇಕೆಂದು 27 ಚೀಲ ಅಕ್ಕಿ ಸ್ಟಾಕ್‌ ಇದೆ. ಆದರೆ ತರಕಾರಿ ಅಷ್ಟಕ್ಕಷ್ಟೇ, ಇದನ್ನು ಕೇಳೋಬೇಕು ಅಂದ್ರೆ ಇಲ್ಲಿ ವಾರ್ಡನ್ನೇ ಇಲ್ಲ. ಎರಡು ದಿನಗಳ ಹಿಂದಷ್ಟೇ ಚಳ್ಳಕೆರೆಯಿಂದ ಒಬ್ಬ ವಾರ್ಡನ್‌ ನಿಯೋಜನೆಯಾಗಿದ್ದಾರೆ.

ಚರಂಡಿ, ಸೊಳ್ಳೆ

ವಿಶಾಲವಾದ ಆವರಣದಲ್ಲಿ ಚರಂಡಿ ಸ್ವಚ್ಛಗೊಳಿಸದ ಕಾರಣ ಸೊಳ್ಳೆಗಳ ನಾದ ಹಗಲು ಕೇಳಿಸುವಂತಿದೆ. ನೀರಿನ ಕೊರತೆ ಹೆಚ್ಚಾಗಿದೆ. ಗ್ರಾಪಂ ಹದಿನೈದು ದಿನಕ್ಕೊಮ್ಮೆ ಅರ್ಧ ಗಂಟೆ ಲೆಕ್ಕದಲ್ಲಿ ಬಿಡುವ ನೀರೇ ಇಲ್ಲಿ ಜೀವಾಮೃತ. ಶೌಚಾಲಯಗಳು

ಗಬ್ಬು ನಾಥ ಬೀರುತ್ತಿವೆ. ಮಕ್ಕಳಿಗೆ ಶೌಚಕ್ಕೂ ನೀರಿನ ಬರ ಇದೆ. ಐದಾರು ದಿನಕ್ಕೊಮ್ಮೆ ಸಾನ್ನ ..!

ಸೋಲಾರ್‌, ಫಿಲ್ಟರ್‌

ಕಳೆದ ಮೂರು ವರ್ಷದಿಂದ ಮೂರು ಸೋಲಾರ್‌ ಒಡೆದು ಹಾಳಾಗಿದ್ದರೂ ಯಾರೂ ಗಮನ ಹರಿಸಿಲ್ಲ. ಶುದ್ಧ ಕುಡಿವ ನೀರು ಮಕ್ಕಳಿಗೆ ಗೊತ್ತಿಲ್ಲ. ವಾಟರ್‌ ಫಿಲ್ಟರ್‌ ಕೆಟ್ಟಿದೆ. ಇಡ್ಲಿ ತಯಾರಿಸುವ ಸಲಕರಣೆಗಳು ಮೂಲೆ ಸೇರಿವೆ. ಆವರಣದ ಲೈಟ್‌ ಹಾಳಾಗಿ ತಿಂಗಳು ಕಳೆದಿದೆ. ಕತ್ತಲೆ ಇದ್ದರೂ ದೀಪ ಸರಿಪಡಿಸಿಲ್ಲ. ಮಕ್ಕಳು ರಾತ್ರಿ ಹೊತ್ತು ಹೊರಬರಲು ಭಯ ಪಡುತ್ತಾರೆ.

ಮಂಚ ಇವೆ, ಬೆಡ್‌ ಇಲ್ಲ

ಇಲ್ಲಿನ ಮಕ್ಕಳಿಗೆ ಮಂಚ ನೀಡಲಾಗಿದೆ ಆದರೆ ಬೆಡ್‌ ಇಲ್ಲ, ಕೆಲ ಕೊಠಡಿಯಲ್ಲಿ ಫ್ಯಾನ್‌ಗಳು ತಿರುಗುತ್ತಿಲ್ಲ, ಇರುವ ಒಂದು ಕನ್ನಡಿ ಹೊಡೆದು ಚೂರಾಗಿದೆ. ಮಕ್ಕಳಿಗೆ ವಿತರಿಸಬೇಕಿದ್ದ ಎರಡು ಜತೆ ಬಟ್ಟೆ ಇದುವರೆಗೂ ನೀಡಿಲ್ಲ, ಆರೋಗ್ಯ ತಪಾಸಣೆ ನಡೆಸಿಲ್ಲ, ಇಲ್ಲಿಗೆ ಬಂದಿದ್ದ ವೈದ್ಯರು ಅಂದು ಹಾಸ್ಟೆಲ್‌ನಲ್ಲಿ ಹಾಜರಿದ್ದ ಮಕ್ಕಳ ಬ್ಲಡ್‌ ಗ್ರೂಪ್‌ ಚೆಕಪ್‌ ಮಾಡಿದ್ದಾರೆ. ಉಳಿದವರ ಗ್ರೂಪ್‌ ಗೊತ್ತಿಲ್ಲ.

ವಾರಕ್ಕೊಮ್ಮೆ ಸ್ನಾನ

ನೀರಿನ ಸಮಸ್ಯೆ ಹೆಚ್ಚಿದ್ದರೂ ಹಾಗೂ ಗ್ರಾಪಂ ಬಿಡುವ ನೀರನ್ನೇ ಇಲ್ಲಿನ ಮಕ್ಕಳು ಕುಡಿಯುತ್ತಾರೆ. ನೀರು ಶೇಖರಣಾ ತೊಟ್ಟಿಯ ಮುಚ್ಚುಳ ಹಾಳಾಗಿ ದೂಳು ನೀರಿಗೆ ಬೀಳುತ್ತದೆ. ಮುಚ್ಚುಳ ಸರಿಪಡಿಸಿಲ್ಲ. ತಣ್ಣೀರಲ್ಲಿ ಬೆಳಗ್ಗೆ 6 ಗಂಟೆಗೆ ಮಕ್ಕಳು ಸ್ನಾನ ಮಾಡಲಾಗದೆ ವಾರಕ್ಕೊಮ್ಮೆ ನಟ್ಟನಡು ಹಗಲು ಸ್ನಾನ ಮಾಡುತ್ತಿದ್ದಾರೆ. ಹಾನಗಲ್‌ ಮಾತ್ರವಲ್ಲ ಸುತ್ತಲಿನ ರಾಯಾಪುರ, ತಳವಾರಹಳ್ಳಿ, ಕಾಟನಾಯಕನಳ್ಳಿ, ಜೆ.ಬಿ.ಹಳ್ಳಿ, ಭಟ್ರಹಳ್ಳಿ, ಮೋದ್ಲಗುಂಟೆ, ಗುಡೇಕೋಟೆ, ಮೇಗಳಹಟ್ಟಿ, ರಾಂಪರ ಭಾಗದ ಸುಮಾರು 35 ವಿದ್ಯಾರ್ಥಿಗಳು ಇಲ್ಲಿದ್ದಾರೆ.

ಕೋಟ್‌:

ಇಲ್ಲಿದ್ದ ವಾರ್ಡನ್‌ ರಮೇಶ್‌ ಬೇರೆಡೆಗೆ ಡಿ.6ಕ್ಕೆ ರಿಲೀವ್‌ ಆಗಿದ್ದಾರೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಜತೆ ಆರು ಹಾಸ್ಟೆಲ್‌ಗಳ ವಾರ್ಡನ್‌ ಹುದ್ದೆಗಳು ಖಾಲಿ ಇವೆ. ಚಳ್ಳಕೆರೆಯಿಂದ ಇಬ್ಬರು, ಮೈಸೂರಿನಿಂದ ಒಬ್ಬರನ್ನು ನಿಯೋಜಿಸಲಾಗಿದೆ. ರೆಗ್ಯೂಲರ್‌ ವಾರ್ಡನ್‌ ಇದ್ದರೆ ಸಮಸ್ಯೆ ಕಡಿಮೆ. ನಿಯೋಜನೆಗೊಂಡವರು ಇವೆಲ್ಲವನ್ನೂ ನಿರ್ವಹಣೆ ಮಾಡಬೇಕು. ಈ ಸಮಸ್ಯೆ ಬಗೆಹರಿಸಲಾಗುವುದು.

-ಡಿ.ಟಿ.ಜಗನ್ನಾಥ್‌, ಪ್ರಭಾರ ಬಿಸಿಎಂ ಅಧಿಕಾರಿ, ಮೊಳಕಾಲ್ಮುರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ