ಆ್ಯಪ್ನಗರ

ಸ್ಮಾರ್ಟ್‌ ಕಾರ್ಡ್‌ ಮೂಲಕ ವಿಶೇಷಚೇತರಿಗೆ ಪಿಂಚಣಿ ಕೊಡಿ

ವಿಶೇಷಚೇತನರಿಗೆ ಸರಿಯಾದ ಸಮಯಕ್ಕೆ ಸ್ಮಾರ್ಟ್‌ ಕಾರ್ಡ್‌ ಮುಖಾಂತರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಅಂಗವಿಕಲರ ಕ್ಷೇಮಾಭಿದ್ಯೋದಯ ಜಿಲ್ಲಾ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮುಖಾಂತರ ಸಿಎಂಗೆ ಮನವಿ ಸಲ್ಲಿಸಲಾಯಿತು.

Vijaya Karnataka 21 Jun 2019, 5:00 am
ಚಿತ್ರದುರ್ಗ : ವಿಶೇಷಚೇತನರಿಗೆ ಸರಿಯಾದ ಸಮಯಕ್ಕೆ ಸ್ಮಾರ್ಟ್‌ ಕಾರ್ಡ್‌ ಮುಖಾಂತರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಅಂಗವಿಕಲರ ಕ್ಷೇಮಾಭಿದ್ಯೋದಯ ಜಿಲ್ಲಾ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮುಖಾಂತರ ಸಿಎಂಗೆ ಮನವಿ ಸಲ್ಲಿಸಲಾಯಿತು.
Vijaya Karnataka Web pay pension to specialist through smart card
ಸ್ಮಾರ್ಟ್‌ ಕಾರ್ಡ್‌ ಮೂಲಕ ವಿಶೇಷಚೇತರಿಗೆ ಪಿಂಚಣಿ ಕೊಡಿ


ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರಾರ‍ಯಲಿ ನಡೆಸಿದ ವಿಶೇಷಚೇತನರು, ಗ್ರಾಪಂನಿಂದ ಮೀಸಲಿರುವ ಶೇ.5ರ ಅನುದಾನ ಸರಿಯಾದ ರೀತಿಯಲ್ಲಿ ಬಳಕೆಯಾಗದೇ ನಮಗೆ ಅನ್ಯಾಯ ಆಗುತ್ತಿದೆ ಎಂದು ಆಕ್ಷೇಪಿಸಿದರು.

ಸರಕಾರ ಹೊಸದಾಗಿ ಜಾರಿ ಮಾಡಿರುವ ಯುಡಿಐಬಿ ಕಾರ್ಡಿಗಾಗಿ ಸುಮಾರು ನಾಲ್ಕೈದು ಸಾವಿರ ವಿಶೇಷಚೇತನರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದು, ನಿಮ್ಮ ಸಲಹೆಯಂತೆ ಬೆರಳಚ್ಚು ಗುರುತು ನೀಡಲು ಜಿಲ್ಲಾ ಆಸ್ಪತ್ರೆಗೆ ಹೋದರೆ ಅಲ್ಲಿನ ವೈದ್ಯರು ಈ ಹಿಂದೆ ನಮಗೆ ವೈದ್ಯಕೀಯ ಪ್ರಮಾಣಪತ್ರವೇ ನೀಡಿಲ್ಲ ಎನ್ನುತ್ತಾರೆ. ಅಲ್ಲದೇ ನಮ್ಮ ಖಾಸಗಿ ಕ್ಲಿನಿಕ್‌ಗೆ ಬಂದು ಪಡೆದುಕೊಳ್ಳಿ ಎಂದು ಸುಮ್ಮನೆ ಅಲೆದಾಡಿಸುತ್ತಾರೆ ಎಂದು ಆರೋಪಿಸಿದರು.

ವಿಶೇಷಚೇತನರು, ವಿಧÜವೆಯರು, ಹಿರಿಯ ನಾಗರೀಕರು ಸೇರಿದಂತೆ ಸಾಮಾಜಿಕ ಭದ್ರತೆಯಡಿ ಪಿಂಚಣಿ ಪಡೆದುಕೊಳ್ಳುವವರಿಗೆ ನಾಲ್ಕೈದು ತಿಂಗಳಿನಿಂದ ಪಿಂಚಣಿ ಲಭಿಸಿಲ್ಲ, ಹಾಗಾಗಿ ಸ್ಮಾರ್ಟ್‌ಕಾರ್ಡ್‌ ರದ್ದುಪಡಿಸಿ ಈ ಹಿಂದೆ ನೀಡುತ್ತಿದ್ದ ಮಾದರಿಯಲ್ಲೇ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ಎಲ್ಲ ವಸತಿ ನಿಗಮಗಳ ಯೋಜನೆಗಳಡಿ ವಿಶೇಷಚೇತನರಿಗೆ ಮೀಸಲಾತಿ ಕಲ್ಪಿಸಿ ವಸತಿ ಸೌಕರ್ಯ ಒದಗಿಸಬೇಕು, ಜಿಲ್ಲಾಡಳಿತವು ತಿಂಗಳಿಗೊಮ್ಮೆ ವಿಶೇಷಚೇತನರ ಕುಂದುಕೊರತೆ ಸಭೆ ನಡೆಸಬೇಕು. ತ್ರಿಚಕ್ರ ಮೋಟಾರ್‌ ಸೈಕಲ್‌ ಕೊಡಬೇಕು, ಸಾಮಾನ್ಯ ವ್ಯಕ್ತಿಗಳು ವಿಶೇಷ ಚೇತನರನ್ನು ಮದುವೆಯಾದರೆ ಈಗ ನೀಡುತ್ತಿರುವ ಸಹಾಯಧನವನ್ನು 50 ಸಾವಿರದಿಂದ 4 ಲಕ್ಷ ಕ್ಕೆ ಹೆಚ್ಚಿಸಬೇಕು, ವಿಶೇಷ ಚೇತನರನ್ನು ವಿಶೇಷ ಚೇತನರೇ ಮದುವೆಯಾದರೆ ಅವರಿಗೂ 4 ಲಕ್ಷ ಸಹಾಯಧನ ಕೊಡಬೇಕು ಎಂದು ಒತ್ತಾಯಿಸಿದರು.

ಗ್ರಾಪಂ, ತಾಪಂ ಹಾಗೂ ಜಿಪಂಗಳಲ್ಲಿ ವಿಶೇಷ ಚೇತನರಿಗೆ ಮೀಸಲಿರುವ ಶೇ.5ರಷ್ಟು ಅನುದಾನ ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗುತ್ತಿಲ್ಲ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ವಿಶೇಷಚೇತನರು ವಲಸೆ ಹೋಗುವುದನ್ನು ತಡೆಗಟ್ಟಲು ಉದ್ಯೋಗ ಖಾತ್ರಿ ಅತ್ಯಂತ ಸಮರ್ಪಕವಾಗಿ ಅನುಷ್ಟಾನ ಆಗುವಂತೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಕೆ.ವೆಂಕಟೇಶ್‌, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆನಂದ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಪಾಪಣ್ಣ, ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ, ವಾಗೀಶ್‌ ಕುಮಾರ್‌, ಕೆಕೆಎನ್‌ಎಸ್‌ಎಸ್‌ ಜಿಲ್ಲಾಧ್ಯಕ್ಷ ಗಣೇಶ್‌ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ