ಆ್ಯಪ್ನಗರ

ಶಿವಲಿಂಗಾನಂದ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಅದ್ದೂರಿ

ನಗರದ ಶ್ರೀ ಸದ್ಗುರು ಕಬೀರಾನಂದ ಮಠದಲ್ಲಿ ನಡೆಯುತ್ತಿರುವ 89ನೇ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ಸೋಮವಾರ ಶ್ರೀ ಶಿವಲಿಂಗಾನಂದ ಸ್ವಾಮೀಜಿಯ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ಅದ್ಧೂರಿಯಾಗಿ ನೆರವೇರಿತು.

Vijaya Karnataka 5 Mar 2019, 5:00 am
ಚಿತ್ರದುರ್ಗ : ನಗರದ ಶ್ರೀ ಸದ್ಗುರು ಕಬೀರಾನಂದ ಮಠದಲ್ಲಿ ನಡೆಯುತ್ತಿರುವ 89ನೇ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ಸೋಮವಾರ ಶ್ರೀ ಶಿವಲಿಂಗಾನಂದ ಸ್ವಾಮೀಜಿಯ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ಅದ್ಧೂರಿಯಾಗಿ ನೆರವೇರಿತು.
Vijaya Karnataka Web shivalinganand swamiji palakki festival is a lavish
ಶಿವಲಿಂಗಾನಂದ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಅದ್ದೂರಿ


ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವಕ್ಕೆ ಕರಡಿ ಚಮ್ಮಾಳ ಬಾರಿಸಿ ಚಾಲನೆ ನೀಡಿದರು. ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ ಪಲ್ಲಕ್ಕಿಯನ್ನು ನಾನಾ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಪಲ್ಲಕ್ಕಿಯಲ್ಲಿ ಶಿವಲಿಂಗಾನಂದ ಸ್ವಾಮೀಜಿ ಆಸಿನರಾಗಿ ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆಯಲ್ಲಿ ಕಿಲುಕುದುರೆ, ಕಮಟೆ, ಕಿನ್ನರಿಜೋಗಿ, ಲಂಬಾಣಿ ನೃತ್ಯ, ಖಾಸಾಬೇಡರ ಪಡೆ, ಡೊಳ್ಳು ಕುಣಿತ, ಭಜನೆ, ಶಾರದ ಬ್ರಾಸ್‌ ಬ್ಯಾಂಡ್‌ನಿಂದ ವಾದ್ಯಗೋಷ್ಠಿ ನೋಡುಗರನ್ನು ಸೆಳೆದವು. ರಸ್ತೆಯ ಎರಡು ಇಕ್ಕೆಲ್ಲಗಳಲ್ಲಿ ಜನ ನಿಂತು ಮೆರವಣಿಗೆ ಕಣ್ಣು ತುಂಬಿಕೊಂಡರು. ಭಕ್ತರು ಶಿವಲಿಂಗಾನಂದ ಸ್ವಾಮೀಜಿಯ ಪಲ್ಲಕ್ಕಿ ತಮ್ಮ ಮನೆಗಳ ಮುಂದೆ ಬರುತ್ತಿದಂತೆ ಹೂ ಹಣ್ಣುಗಳನ್ನು ನೀಡಿ ಭಕ್ತಿ ಅರ್ಪಿಸಿದರು.

ಶ್ರೀ ಮಠದಿಂದ ಪ್ರಾರಂಭವಾದ ಮೆರವಣಿಗೆ ಚಿಕ್ಕಪೇಟೆ, ದೊಟ್ಟಪೇಟೆ, ಕೋಟೆ ರಸ್ತೆ, ಆನೆ ಬಾಗಿಲು, ಗಾಂಧಿ ವೃತ್ತದ ಮಾರ್ಗ ಬಿಡಿ ರಸ್ತೆಯ ಮೈಸೂರು ಬ್ಯಾಂಕ್‌ ವೃತ್ತ, ಅಂಬೇಡ್ಕರ್‌ ವೃತ್ತ, ಮದಕರಿ ವೃತ್ತದ ಮೂಲಕ ಶ್ರೀ ಮಠಕ್ಕೆ ಮರಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ