ಆ್ಯಪ್ನಗರ

ಗಣಿತಕ್ಕೆ 'ಲ್ಯಾಬ್‌' ಕಲಿಕೆಗೆ ಸ್ಪ್ಯಾಬ್‌

'ಲ್ಯಾಬ್‌' ಎಂದಾಕ್ಷ ಣ ವಿಜ್ಞಾನದ ಪ್ರಯೋಗಾಲಯ ನೆನಪಾಗುತ್ತವೆ. ಆದರೆ ಗಣಿತಕ್ಕೂ ಲ್ಯಾಬ್‌ ಇದೆ. ಗಣಿತವನ್ನೂ ಆಕ್ಟಿವಿಟಿಗಳಿಂದ ಕಲಿಯಬಹುದು. ಇದು ಕಬ್ಬಿಣದ ಕಡಲೆ ಅಲ್ಲ ಎಂದು ಇಲ್ಲಿನ ಶಿಕ್ಷಕರೊಬ್ಬರು ಸಾಬೀತುಗೊಳಿಸಿದ್ದಾರೆ.

Vijaya Karnataka 8 Aug 2019, 5:00 am
ನಾಯಕನಹಟ್ಟಿ: 'ಲ್ಯಾಬ್‌' ಎಂದಾಕ್ಷ ಣ ವಿಜ್ಞಾನದ ಪ್ರಯೋಗಾಲಯ ನೆನಪಾಗುತ್ತವೆ. ಆದರೆ ಗಣಿತಕ್ಕೂ ಲ್ಯಾಬ್‌ ಇದೆ. ಗಣಿತವನ್ನೂ ಆಕ್ಟಿವಿಟಿಗಳಿಂದ ಕಲಿಯಬಹುದು. ಇದು ಕಬ್ಬಿಣದ ಕಡಲೆ ಅಲ್ಲ ಎಂದು ಇಲ್ಲಿನ ಶಿಕ್ಷಕರೊಬ್ಬರು ಸಾಬೀತುಗೊಳಿಸಿದ್ದಾರೆ.
Vijaya Karnataka Web spab for math lab learning
ಗಣಿತಕ್ಕೆ 'ಲ್ಯಾಬ್‌' ಕಲಿಕೆಗೆ ಸ್ಪ್ಯಾಬ್‌


ಹೌದು, ರೇಖಲಗೆರೆ ಲಂಬಾಣಿಹಟ್ಟಿಯ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷ ಕ ಜಿ.ರಂಗನಾಥ್‌ ಇಂಥಾದ್ದೊಂದು ಸೃಜನಶೀಲ ಪ್ರಯೋಗಕ್ಕೆ ಇಳಿದಿದ್ದಾರೆ. ಗ್ರಾಮೀಣ ಸರಕಾರಿ ಶಾಲೆಯಲ್ಲಿ ಗಣಿತ ಲ್ಯಾಬ್‌ ತೆರೆದು ಗಮನ ಸೆಳೆದಿದ್ದಾರೆ.

ಸುಮಾರು 150ಕ್ಕೂ ಹೆಚ್ಚು ಚಟುವಟಿಕೆಗಳಿಂದ ಗಣಿತ ಕಲಿಸುವುದು ಇದರ ಉದ್ದೇಶ. ಈ ಲ್ಯಾಬ್‌ ವಿದ್ಯಾರ್ಥಿಗಳಿಗೆ ವಿಭಿನ್ನ ಅನುಭವ ನೀಡುತ್ತಿದೆ. ವಿಜ್ಞಾನಕ್ಕೆ ಸೀಮಿತವಾಗಿದ್ದ ಲ್ಯಾಬ್‌ ಇದೀಗ ಗಣಿತಕ್ಕೂ ವಿಸ್ತರಣೆಯಾಗಿದೆ.

ಚಟುವಟಿಕೆ ಗಣಿತ :

'ನಾನು ಕೇಳಿದೆ, ನಾನು ಮರೆತೆ, ನಾನು ನೋಡಿದೆ, ನಾನು ನೆನಪಿಟ್ಟುಕೊಂಡೆ, ನಾನೇ ಮಾಡಿದೆ, ನಾನು ಅರ್ಥ ಮಾಡಿಕೊಂಡೆ' ಎಂಬ ಚೀನೀ ಮಾತು ಗಣಿತಕ್ಕೆ ಪೂರ್ಣ ಪ್ರಮಾಣದಲ್ಲಿ ಅನ್ವಯಿಸುತ್ತದೆ. ಗಣಿತದ ಸೂತ್ರ, ಪ್ರಮೇಯದ ಜತೆ ಜಿಯೋ ಬೋರ್ಡ್‌ನಿಂದ ಹಲವು ಚಟುವಟಿಕೆ ರೂಪಿಸಲಾಗಿದೆ.

ರೇಖಾಗಣಿತ ಪೈಥಾಗೊರಸ್‌ನ ಪ್ರಮೇಯ, ಥೇಲ್ಸ್‌ನ ಪ್ರಮೇಯ, ರೇಖಾಗಣಿತದ ಆಕೃತಿಗಳ ವಿಸ್ತೀರ್ಣ, ಘನಫಲ, ಸುತ್ತಳತೆ ಕಂಡುಹಿಡಿಯುವ ಚಟುವಟಿಕೆ ರಚಿಸಲಾಗಿದೆ. ಪ್ರಯೋಗಾಲಯದಲ್ಲಿ ಆಯುತಾಕಾರ, ವೃತ್ತಾಕಾರದ ಟೇಬಲ್‌ ಹಾಕಲಾಗಿದೆ. ಈ ಚಟುವಟಕೆಗಳನ್ನು ಶಿಕ್ಷ ಕರ ಸಹಾಯದಿಂದ ವಿದ್ಯಾರ್ಥಿಗಳು ನಿರ್ವಹಿಸುತ್ತಾರೆ.

ಆಧುನಿಕ ಉಪಕರಣ :

ಗಣಿತ ಪ್ರಯೋಗಾಲಯಕ್ಕೆ ಎಲ್‌ಸಿಡಿ ಪ್ರೊಜೆಕ್ಟರ್‌ ಅಳವಡಿಸಿದ್ದು ವೀಡಿಯೋ ಪ್ರದರ್ಶಿಸಲಾಗುತ್ತಿದೆ. ಜತೆಗೆ ಆಡಿಯೋ ವಿಡಿಯೋ ಪಾಠ ಕೇಳಿಸಲಾಗುವುದು. ಎಲ್ಲ ವಿದ್ಯಾರ್ಥಿಗಳಿಗೆ ಧ್ವನಿ ತಲುಪಲೆಂದು ಹೆಚ್ಚುವರಿ ಸ್ಪೀಕರ್‌ ಅಳವಡಿಸಲಾಗಿದೆ. ಕಪ್ಪು ಹಲಗೆ ಜತೆ ಜಿಯೋ ಬೋರ್ಡ್‌, ಮ್ಯಾಗ್ನಟಿಕ್‌ ಬೋರ್ಡ್‌ ಅಳವಡಿಸಿರುವುದು ವಿಶೇಷ. ಇದರ ಮೂಲಕ ರೇಖಾ ಗಣಿತದ ಆಕೃತಿಗಳ ವಿಸ್ತೀರ್ಣ/ಗ್ರಾಫ್‌ ವಿವರಿಸಲಾಗುತ್ತಿದೆ.

ಮಾದರಿ ತಯಾರಿ :

ರಬ್ಬರ್‌, ಪ್ಲಾಸ್ಟಿಕ್‌ ವಸ್ತುಗಳಿಂದ ನೂರಾರು ಚಟುವಟಿಕೆ ತಯಾರಾಗಿವೆ. ಫೋಮ್‌ ಶೀಟ್‌ ಬಳಸಿ ರೇಖಾ ಗಣಿತದ ಮಾಡೆಲ್‌ ರಚಿಸಲಾಗಿದೆ. ಶಿಕ್ಷ ಕರೇ ತಯಾರಿಸಿರುವ ಚಲನಶೀಲ ಉಪಕರಣಗಳು ವಿಶೇಷ ಗಮನ ಸೆಳೆಯುತ್ತವೆ.

ಸಂಪನ್ಮೂಲ ವ್ಯಕ್ತಿ :

ಗಣಿತ ಶಿಕ್ಷ ಕ ಜಿ. ರಂಗನಾಥ್‌ ರಾಜ್ಯ ಮಟ್ಟದ ಗಣಿತ ಸಂಪನ್ಮೂಲ ವ್ಯಕ್ತಿ ಕೂಡ. ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ವಿಷಯವನ್ನು ಸುಲಭವಾಗಿಸಲು ಪ್ರಯೋಗಕ್ಕೆ ಇಳಿದಿದ್ದಾರೆ. ಇಂಥ ಪ್ರಯತ್ನ ಎಲ್ಲ ಶಾಲೆಗಳಲ್ಲಿ ನಡೆದರೆ ಗಣಿತ ಕಠಿಣ ಎಂಬ ಪ್ರಾಬ್ಲಿಮ್ಮಿನಿಂದ ವಿದ್ಯಾರ್ಥಿಗಳು ನಿರಾಳರಾಗಲಿದ್ದಾರೆ.

ಕೋಟ್‌ ===

ಹೈಸ್ಕೂಲು ಗಣಿತ ಪಠ್ಯಪುಸ್ತಕದ ವಿಷಯಗಳನ್ನು ಲ್ಯಾಬ್‌ನಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ. ರಾಷ್ಟ್ರೀಯ ಶಿಕ್ಷಾ ಅಭಿಯಾನ್‌ ಅಡಿ ಗಣಿತ ಲ್ಯಾಬ್‌ಗೆ ಆದ್ಯತೆ ನೀಡಲಾಗಿದೆ. ಇದರಿಂದ ಸಂತಸದ ಕಲಿಕೆ ಸಾಧ್ಯವಾಗುತ್ತದೆ. ತಾಲೂಕಿನ 250 ಪ್ರಾಥಮಿಕ ಶಾಲೆಗಳಿಗೆ ಗಣಿತದ ಕಿಟ್‌ ನೀಡಲಾಗಿದೆ. ಓಬಳಾಪುರ ಹಾಗೂ ಬೇಡರೆಡ್ಡಿಹಳ್ಳಿಯಲ್ಲಿ ಈ ಪ್ರಯತ್ನ ಕೈಗೊಳ್ಳಲಾಗಿದೆ. ತಾಲೂಕಿನ ಎಲ್ಲ ಶಾಲೆಗಳಲ್ಲಿ ಇಂಥ ಲ್ಯಾಬ್‌ ಆರಂಭಿಸಲಾಗುವುದು.

-ಸಿ.ಎಸ್‌. ವೆಂಕಟೇಶಪ್ಪ, ಬಿಇಒ, ಚಳ್ಳಕೆರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ