ಆ್ಯಪ್ನಗರ

ಜಿಲ್ಲೆಗೆ ವಿಶೇಷ ಪ್ಯಾಕೇಜ್‌: ಸಿಎಂಗೆ ಮನವಿ

ಬಯಲುಸೀಮೆ ಚಿತ್ರದುರ್ಗ ಶಾಶ್ವತ ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ, ಇಲ್ಲಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಬಳಿ ಬೇಡಿಕೆ ಇಡಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ತಿಳಿಸಿದರು.

Vijaya Karnataka 1 Dec 2018, 5:00 am
ಚಳ್ಳಕೆರೆ : ಬಯಲುಸೀಮೆ ಚಿತ್ರದುರ್ಗ ಶಾಶ್ವತ ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ, ಇಲ್ಲಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಬಳಿ ಬೇಡಿಕೆ ಇಡಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ತಿಳಿಸಿದರು.
Vijaya Karnataka Web special package for district request for cm
ಜಿಲ್ಲೆಗೆ ವಿಶೇಷ ಪ್ಯಾಕೇಜ್‌: ಸಿಎಂಗೆ ಮನವಿ


ನಗರದ ರೈತ ಸಂಘದ ಕಚೇರಿಯಲ್ಲಿ ಶುಕ್ರವಾರ ಪತ್ರಿಕೆ ಜತೆ ಮಾತನಾಡಿದ ಅವರು, ಗುರುವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಕೃಷಿ ನೀತಿ ಜಾರಿಗೊಳಿಸುವ ಸಂಬಂಧ ಕೃಷಿ ವಿವಿಗಳ ಕುಲಪತಿಗಳು ಮತ್ತು ರೈತ ಪ್ರತಿನಿಧಿಗಳ ಜತೆ ನಡೆಸಿದ ಸಮಾಲೋನಾ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಅನೇಕ ಬೇಡಿಕೆಗಳ ಕುರಿತು ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.

ಹೊಸ ಕೃಷಿ ನೀತಿ ಜಾರಿಗೊಳಿಸುವ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲು ಸರಕಾರ ರೈತ ಪ್ರತಿನಿಧಿಗಳನ್ನು ಕಳಿಸುವಂತೆ ಸರಕಾರ ಸೂಚನೆಯಂತೆ, ಜಿಲ್ಲಾಡಳಿತ ನನ್ನನ್ನು ಮತ್ತು ಕೆ.ಬಿ.ಸಿದ್ದವೀರಪ್ಪರನ್ನು ಜಿಲ್ಲೆಯಿಂದ ತಲಾ ಇಬ್ಬರು ರೈತ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸಭೆಗೆ ಕಳಿಸಿತ್ತು. ಅಲ್ಲಿ ನಡೆದ ಸಭೆಯಲ್ಲಿ ಶೇಂಗಾ ಬೆಳೆಗಾರರಿಗೆ ಆಂಧ್ರ ಮಾದರಿಯಲ್ಲಿ ಬೆಳೆ ಪರಿಹಾರ ನೀಡುವಂತೆ ಒತ್ತಾಯ ಮಾಡಲಾಗಿದೆ. ಇದು ಬಹಳ ವರ್ಷಗಳ ಬೇಡಿಕೆಯಾಗಿದ್ದು, ಆಂಧ್ರದಿಂದ ಮಾಹಿತಿ ಪಡೆಯುವಂತೆಯೂ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಚಳ್ಳಕೆರೆ-ಮೊಳಕಾಲ್ಮುರಿನಲ್ಲಿ ಗೋಶಾಲೆಗಳನ್ನು ತೆರೆಯುವುದು, ತೆಂಗು ಬೆಳೆಗಾರರಿಗೆ ಮರವೊಂದಕ್ಕೆ 400 ರೂ. ಬದಲು ಎರಡು ಸಾವಿರಕ್ಕೆ ಹೆಚ್ಚಿಸುವುದು ಮತ್ತು ಈರುಳ್ಳಿ, ಶೇಂಗಾ, ಮೆಕ್ಕೆಜೋಳ ಖರೀದಿಸಲು ಕೇಂದ್ರಗಳನ್ನು ತೆರೆಯಬೇಕು ಎಂಬ ಬೇಡಿಕೆಗಳನ್ನು ಮುಂದಿಡಲಾಗಿದೆ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಕೂಡಲೇ ವಿವಿ ಸಾಗರಕ್ಕೆ ನೀರು ತುಂಬಿಸುವುದು ಹಾಗೂ ಜಿಲ್ಲೆಯ ಎಲ್ಲ ಕೆರೆಗಳ ಜಂಗಲ್‌ ತೆಗೆಸಿ, ಹೂಳೆತ್ತಿಸಿ ಅಂತರ್ಜಲ ಹೆಚ್ಚಿಸುವುದು. ಜಿಲ್ಲೆಯಲ್ಲಿ ಎಸ್‌ಟಿ ಜನಸಂಖ್ಯೆ ಜಾಸ್ತಿಯಿದ್ದು, ಹೈಟೆಕ್‌ ಕೃಷಿ ಉಪಕರಣ ಮತ್ತು ಹನಿ ನೀರಾವರಿ ಘಟಕಗಳಿಗೆ ಅನುದಾನ ಕೊರತೆ ಬಗೆಹರಿಸುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆಯಲ್ಲಿ ಕೆಲ ವರ್ಷಗಳಿಂದ ಗ್ರಾಮ ಸೇವಕರು ಮತ್ತು ಕೃಷಿ ಸಹಾಯಕರನ್ನು ತೆಗೆದುಹಾಕಿದ್ದು, ಈಗ ಕೃಷಿ ಡಿಪ್ಲೋಮಾ ಮಾಡಿದವರನ್ನು ಗ್ರಾಪಂಗೊಬ್ಬರಂತೆ ನೇಮಕ ಮಾಡುವುದು. ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಪಂಚಾಯಿತಿಗೆ ಒಬ್ಬರಂತೆ ಸೇವಾ ಕೇಂದ್ರ ತೆರೆಯುವುದು. ಬೆಳೆ ವಿಮೆ ರೈತರ ಅಹವಾಲು ಮತ್ತು ಸಮಸ್ಯೆ ಬಗೆಹರಿಸಲು ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಒಬ್ಬ ನುರಿತ ಸಿಬ್ಬಂದಿಯೊಂದಿಗೆ ಸೇವಾ ಕೇಂದ್ರ ತೆರೆಯಬೇಕೆಂದು ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ