ಆ್ಯಪ್ನಗರ

ಎಸ್‌ಆರ್‌ಎಸ್‌ ಕಾಲೇಜು: 125 ಡಿಸ್ಟಿಂಕ್ಷನ್‌

ನಗರದ ಹೊರವಲಯ ಪಿಳ್ಳೆಕೇರನಹಳ್ಳಿ ಎಸ್‌ಆರ್‌ಎಸ್‌ ಪಿಯು ಕಾಲೇಜು 2017-18ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 125 ಡಿಸ್ಟಿಂಕ್ಷ ನ್‌ ಪಡೆದುಕೊಳ್ಳುವುದರ ಮೂಲಕ ಉತ್ತಮ ಫಲಿತಾಂಶ ಪಡೆದುಕೊಂಡಿದೆ.

Vijaya Karnataka 1 May 2018, 4:22 pm
ಚಿತ್ರದುರ್ಗ: ನಗರದ ಹೊರವಲಯ ಪಿಳ್ಳೆಕೇರನಹಳ್ಳಿ ಎಸ್‌ಆರ್‌ಎಸ್‌ ಪಿಯು ಕಾಲೇಜು 2017-18ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 125 ಡಿಸ್ಟಿಂಕ್ಷ ನ್‌ ಪಡೆದುಕೊಳ್ಳುವುದರ ಮೂಲಕ ಉತ್ತಮ ಫಲಿತಾಂಶ ಪಡೆದುಕೊಂಡಿದೆ.
Vijaya Karnataka Web srs college 125 distinction
ಎಸ್‌ಆರ್‌ಎಸ್‌ ಕಾಲೇಜು: 125 ಡಿಸ್ಟಿಂಕ್ಷನ್‌


ಸೋಮವಾರ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಕಾಲೇಜಿನ ವಿದ್ಯಾರ್ಥಿ ಪಿ.ಬಿ.ರಿತೀನ್‌ ವಿಜ್ಞಾನ ವಿಭಾಗದಲ್ಲಿ 600ಕ್ಕೆ 585 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಎಸ್‌.ಸಚಿನ್‌ 582 ದ್ವಿತೀಯ ಸ್ಥಾನ, ಎಚ್‌.ಎನ್‌.ಚಂದನ 581 ತೃತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಆಯಷಿ ಪಿ.ಹರಣ್‌ 580 ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ದಾರೆ.

ಉಳಿದಂತೆ ವಿಜ್ಞಾನ ವಿಭಾಗದಲ್ಲಿ ಜಿ.ಆರ್‌.ಪ್ರವಲಿಕ 578, ಸಿ.ಎಸ್‌.ಶುಭಾಂಗ್‌ 577, ಎ.ಎಸ್‌.ಸ್ಪಂದನ 577, ಕೆ.ಎಸ್‌.ಅಜಿತ್‌ 576, ಡಿ.ಸಿಮ್ರಾನ್‌ 575, ಜೆ.ರಕ್ಷಿತ 573, ಜಿ.ಎಂ.ಕಿರಣ್‌ಕುಮಾರ್‌ 571, ಆರ್‌.ಅನುಷ 571, ಮಹ್ಮದ್‌ ನಯೀಮ್‌ ಅಫ್ಜಲ್‌ 571, ಎಸ್‌.ಎಸ್‌.ಚಂದನ 569, ಜಿ.ಎಂ.ಸಹನ 566, ಬಿ.ಜೆ.ರಕ್ಷಿತ 565. ಎಚ್‌.ಎಂ.ಆದಿತ್ಯ ಕಶಪ್‌ 563 ಅಂಕಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕಾಜಲ್‌ ಕೆ ಜೈನ್‌ 569, ಎಲ್‌.ಶ್ವೇತಾ 566, ದಿವ್ಯ ಎಲ್‌ ಜೈನ್‌ 560 ಅಂಕಗಳೊಂದಿಗೆ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. 66 ವಿದ್ಯಾರ್ಥಿಗಳು ನಾನಾ ವಿಷಯಗಳಲ್ಲಿ 100ಕ್ಕೆ 100 ಹಾಗೂ 99 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸಂಸ್ಠೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್‌.ಅಮೋಘ್‌, ಪ್ರಾಚಾರ್ಯ ಈ.ಗಂಗಾಧರ್‌ ಹಾಗೂ ಎಲ್ಲಾ ಉಪನ್ಯಾಸಕರು ಅಭಿನಂದಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದ ವಿದ್ಯಾರ್ಥಿ ಪಿ.ಬಿ.ರಿತಿನ್‌ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ 600ಕ್ಕೆ 585 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಚಿನ್ಮೂಲಾದ್ರಿ ಕಾಲೇಜು :
ಚಿತ್ರದುರ್ಗ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಗರದ ರಾಷ್ಟ್ರೀಯ ಹೆದ್ದಾರಿ ಚಿನ್ಮೂಲಾದ್ರಿ ರಾಷ್ಟ್ರೀಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ 112 ವಿದ್ಯಾರ್ಥಿಗಳಲ್ಲಿ 40 ಅತ್ಯುನ್ನತ ಶ್ರೇಣಿ, 53 ಪ್ರಥಮ ದರ್ಜೆ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಾಲೇಜಿನ ವಿದ್ಯಾರ್ಥಿನಿ ಎಚ್‌.ಜಿ.ಪದ್ಮಿನಿ ಚಿನಿವಾರ್‌ ವಿಜ್ಞಾನ ವಿಭಾಗದಲ್ಲಿ 600ಕ್ಕೆ 584 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ