ಆ್ಯಪ್ನಗರ

ವ್ಯಕ್ತಿ ಕೊಲೆ ಆರೋಪಿ ಪತ್ತೆಗೆ ತಂಡ ರಚನೆ

ಹಿರಿಯೂರು ಹೊರವಲಯದ 70 ಕಣ್ಣಿನ ಸೇತುವೆ ಬಳಿಯ ಹೊಲದಲ್ಲಿ ಬುಧವಾರ ಸಂಜೆ ನಡೆದಿರುವ ಶರವಣ(45)ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷ ಕ ಡಾ.ಕೆ.ಅರುಣ್‌ ತಿಳಿಸಿದರು.

Vijaya Karnataka 26 Jul 2019, 5:00 am
ಚಿತ್ರದುರ್ಗ : ಹಿರಿಯೂರು ಹೊರವಲಯದ 70 ಕಣ್ಣಿನ ಸೇತುವೆ ಬಳಿಯ ಹೊಲದಲ್ಲಿ ಬುಧವಾರ ಸಂಜೆ ನಡೆದಿರುವ ಶರವಣ(45)ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷ ಕ ಡಾ.ಕೆ.ಅರುಣ್‌ ತಿಳಿಸಿದರು.
Vijaya Karnataka Web team formation for the detection of the mans murder
ವ್ಯಕ್ತಿ ಕೊಲೆ ಆರೋಪಿ ಪತ್ತೆಗೆ ತಂಡ ರಚನೆ


ನಗರದ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮಿಳು ಗೌಂಡರ್‌ ಜನಾಂಗಕ್ಕೆ ಸೇರಿದ ಶರವಣ ವೇಲುಸ್ವಾಮಿ ನಿತ್ಯ ಸಂಜೆ ವಾಕಿಂಗ್‌ ಹೋಗುತ್ತಿದ್ದರು. ಅದೇ ರೀತಿ ಬುಧವಾರ ಸಂಜೆ ಸುಮಾರು 6ಕ್ಕೆ ವಾಕಿಂಗ್‌ ಹೋಗಿದ್ದಾರೆ. ರಾತ್ರಿ 8 ಗಂಟೆಯಾದರೂ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಅವರಿಗೆ ಫೋನ್‌ ಮಾಡಿದಾಗ ನಾಟ್‌ ರೀಚೆಬಲ್‌ ಬಂದಿದ್ದರಿಂದ ಅನುಮಾನಗೊಂಡು, ಸಂಬಂಧಿಯವರ ಜತೆಗೂಡಿ ಹೊಲಕ್ಕೆ ತೆರಳಿ ನೋಡಿದಾಗ ಶರವಣ ಅವರ ಕೊಲೆ ಆಗಿರುವುದು ಗೊತ್ತಾಗಿದೆ ಎಂದರು.

ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅಲ್ಲಿರುವ ವಸ್ತು ವಶಪಡಿಸಿಕೊಳ್ಳಲಾಗಿದೆ. ಅವರ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಹಣಕಾಸು ಅಥವಾ ಬೇರೆ ವಿಚಾರವಾಗಿ ಕೊಲೆ ಮಾಡಿದ್ದಾರಾ ಎಂಬ ಕುರಿತು ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಹಿರಿಯೂರು ನಗರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಿ, ತಂಡ ರಚಿಸಿ ತನಿಖೆ ಕೈಗೊಂಡಿದ್ದೇವೆ. ವ್ಯವಸಾಯ ಮಾಡುತ್ತಿದ್ದ ಶರವಣ ಅವರು ಪರಿಚಯ ಇರುವ ಸ್ಥಳೀಯರಿಗೆ ಸಾಲ ನೀಡುತ್ತಿದ್ದರು ಎಂದು ಗೊತ್ತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಲಾಗುತ್ತದೆ. ಮನೆಯವರು ಯಾರ ಮೇಲೂ ಅನುಮಾನ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆ ಮಾಡಿದಾಗ ಎಲ್ಲವೂ ತಿಳಿಯಲಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ