ಆ್ಯಪ್ನಗರ

ಬುರುಡೇಕಟ್ಟೆ ಗ್ರಾಮದ ಸರಕಾರಿ ಶಾಲೆ| 1ರಿಂದ 7ನೇ ತರಗತಿಯಲ್ಲಿ 63 ಮಕ್ಕಳ ಅಧ್ಯಯನ

ಸ್ವಾತಂತ್ರ್ಯಪೂರ್ವದಲ್ಲೆ ನಿರ್ಮಾಣಗೊಂಡಿರುವ ತಾಲೂಕಿನ ಬುರುಡೇಕಟ್ಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಶಾಲಾ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕೇಳುವಂತಾಗಿದೆ.

Vijaya Karnataka 18 Aug 2018, 5:00 am
ಹೊಸದುರ್ಗ: ಸ್ವಾತಂತ್ರ್ಯಪೂರ್ವದಲ್ಲೆ ನಿರ್ಮಾಣಗೊಂಡಿರುವ ತಾಲೂಕಿನ ಬುರುಡೇಕಟ್ಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಶಾಲಾ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕೇಳುವಂತಾಗಿದೆ.
Vijaya Karnataka Web the british school of education is a must
ಬುರುಡೇಕಟ್ಟೆ ಗ್ರಾಮದ ಸರಕಾರಿ ಶಾಲೆ| 1ರಿಂದ 7ನೇ ತರಗತಿಯಲ್ಲಿ 63 ಮಕ್ಕಳ ಅಧ್ಯಯನ


ಈ ಕಟ್ಟಡವನ್ನು ಬ್ರಿಟ್ರಿಷ್‌ರ ಕಾಲದಲ್ಲೆ (1935ರಲ್ಲಿ) ನಿರ್ಮಿಸಲಾಗಿದೆ. 83 ವರ್ಷಗಳ ಹಿಂದೆ ನಿರ್ಮಿಸಿದ ಶಾಲಾ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಹೆಂಚುಗಳು, ಚಾವಣಿ ತೋಲೆಗಳು ಮುರಿದಿವೆ. ಶಾಲಾ ಕೊಠಡಿ ಗೋಡೆಗಳು ಸಡಿಲಗೊಂಡು ಬಿರುಕು ಬಿಟ್ಟಿದೆ. ಇಡೀ ಕಟ್ಟಡ ದುಸ್ಥಿತಿಗೆ ತಲುಪಿದ್ದು, ದುರಸ್ತಿಗಾಗಿ ಕಾದಿದೆ.

ಶಿಥಿಲಾವಸ್ಥೆ

ಈ ಶಾಲೆಯಲ್ಲಿ 1ರಿಂದ 7ನೇ ತರಗತಿಗಳು ನಡೆಯುತ್ತಿವೆ. ಸದ್ಯ 63 ಮಕ್ಕಳಿದ್ದಾರೆ. ನಾಲ್ವರು ಶಿಕ್ಷಕರೂ ಇದ್ದಾರೆ. ಶಾಲೆಯ ಐದು ಕೊಠಡಿಗಳ ಪೈಕಿ ಮೂರು ಶಿಥಿಲಗೊಂಡಿವೆ. ಇನ್ನುಳಿದ ಎರಡು ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ವಿಷಯವಾರು ಬೋಧನೆ ಮಾಡಲು ಸಮಸ್ಯೆಯಾಗುತ್ತಿದೆ. ಸೌಲಭ್ಯಗಳ ಕೊರತೆಯಿಂದ ಮಕ್ಕಳ ಸಂಖ್ಯೆ ಪ್ರತಿ ವರ್ಷ ಕ್ಷೀಣಿಸುತ್ತಿದೆ.

ಶೌಚಾಲಯ ಕೊರತೆ

ಶಾಲಾ ಆವರಣ, ಹಿಂಭಾಗ ಗಿಡಗಂಟೆಗಳು ಬೆಳೆದಿದ್ದು, ಮಕ್ಕಳ ಆಟಕ್ಕೂ ಬ್ರೇಕ್‌ ಬಿದ್ದಿದೆ. ದೈಹಿಕ ಶಿಕ್ಷ ಕರನ್ನೂ ನಿಯೋಜನೆ ಮಾಡಲಾಗಿಲ್ಲ. ಹೀಗಾಗಿ ಶಾಲಾ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಶಾಲೆಯಲ್ಲಿ ಶೌಚಾಲಯ ಇಲ್ಲದಾಗಿದ್ದು, ಬಯಲೇ ಗತಿಯಾಗಿದೆ. ಶಾಲೆಗೆ ಮೂಲಭೂತ ಸೌಕರ್ಯ ಹಾಗೂ ಕಟ್ಟಡ ದುರಸ್ತಿ ಮಾಡುವಂತೆ ಶಿಕ್ಷ ಣ ಇಲಾಖೆಗೆ ಪತ್ರ ಬರೆದರೂ ಈವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಇಲ್ಲಿನ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು.

ಕೋಟ್‌1:

ಶಾಲಾ ಕೊಠಡಿ ದುರಸ್ತಿಗೆ ಹಲವಾರು ಬಾರಿ ಬಿಇಒಗೆ ಪತ್ರ ಬರೆಯಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ಕೊಠಡಿ ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳ ಶೈಕ್ಷ ಣಿಕ ದೃಷ್ಟಿಯಿಂದ ಆದಷ್ಟು ಬೇಗ ಕಟ್ಟಡ ದುರಸ್ತಿಗೆ ಮುಂದಾಗಬೇಕು.

ನಾಗರಾಜ್‌, ಶಾಲಾ ಎಸ್‌ಡಿಎಂಸಿ ಸದಸ್ಯ. ಬುರುಡೇಕಟೆ.

ಕೋಟ್‌2:


ಕೊಠಡಿಗಳು ಸಂಪೂರ್ಣವಾಗಿ ಹಾಳಾಗಿವೆ. ಕಟ್ಟಡ ಕುಸಿಯುವ ಹಂತಕ್ಕೆ ತಲುಪಿವೆ. ಹೀಗಾದರೇ ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೂ ಹೇಗೆ? ಸ್ಥಳೀಯ ಶಾಸಕರು, ಶಿಕ್ಷ ಣ ಇಲಾಖೆ ಈ ಬಗ್ಗೆ ಗಮನಹರಿಸಿ, ಹೊಸ ಕಟ್ಟಡ ನಿರ್ಮಿಸಬೇಕು.

ವೆಂಕಟೇಶ್‌, ರಮೇಶ್‌, ವಿದ್ಯಾರ್ಥಿಗಳ ಪೋಷಕರು, ಬುರುಡೇಕಟ್ಟೆ.

ಕೋಟ್‌3:


ಸರ್ವ ಶಿಕ್ಷ ಣ ಅಭಿಯಾನದಿಂದ ಸಿವಿಲ್‌ ಕಾಮಗಾರಿಗಳಿಗಾಗಿ ಬರುತ್ತಿದ್ದ ಅನುದಾನ ಕಳೆದ 5 ವರ್ಷಗಳಿಂದ ನಿಂತಿದೆ. ತಾಲೂಕಿನಲ್ಲಿ ಹೊಸ ಕಟ್ಟಡ, ದುರಸ್ತಿ, ಕಾಂಪೌಂಡ್‌, ಶೌಚಾಲಯ ಕಾಮಗಾರಿ ಕೈಗೊಳ್ಳಬೇಕಾದ ಶಾಲೆಗಳ ಪಟ್ಟಿಯನ್ನು ಶಾಸಕರಿಗೆ ಸಲ್ಲಿಸಲಾಗಿದೆ. ಶೀಘ್ರ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕೆಡಿಪಿ ಸಭೆಯಲ್ಲಿ ಶಾಲೆಗಳ ದುಸ್ಥಿತಿಗಳ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದೆ.

ಉಮಾಮಹೇಶ್‌, ಬಿಇಒ, ಹೊಸದುರ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ