ಆ್ಯಪ್ನಗರ

ನಮ್ಮಣ್ಣ ಓಡಿ ಹೋದ, ನನ್ನ ಕಾರಿನಲ್ಲಿ ಹಾಕೊಂಡು ಹೋದ್ರು..!

ನಾನು, ನಮ್ಮ ಚಿಕ್ಕಪ್ಪನ ಮಗ ಶಿವಕುಮಾರ ಹೊಲಕ್ಕೆ ಹೋಗಿ ವಾಪಾಸ್‌ ಬರ್ತಾ ಇದ್ದಾಗ ಮಾರಮ್ಮಜ್ಜಿ ಗುಡಿ ಬಳಿ ಕಾರೊಂದು ನಿಂತಿತ್ತು. ನಮ್ಮ ಪಾಡಿಗೆ ನಾವು ಮೊಬೈಲ್‌ನಲ್ಲಿ ಹಾಡು ಕೇಳುತ್ತಾ ಬರ್ತಿದ್ವಿ, ಕಾರ್ನಲ್ಲಿದ್ದ ಒಬ್ಬ ಚಡ್ಡಿ ಹಾಕ್ಕೊಂಡ ಅಣ್ಣ ಇಳಿದು ಬಂದು ಯಾಕ್ರೋ ಕಾರ್‌ ಫೋಟೋ ತೆಗದ್ರಿ ಎಂದು ಗದರಿಸಿದ್ದಕ್ಕೆ ನಮ್ಮಣ್ಣ ಓಡಿ ಹೋದ, ನಾನು ಅವರ ಕೈಗೆ ಸಿಕ್ಕದ್ದಕ್ಕೆ ಕಾರನಲ್ಲಿ ನನ್ನ ಹಾಕೊಂಡು ಹೋಗಿಬಿಟ್ರು''...

Vijaya Karnataka Web 30 Oct 2017, 9:05 am
ಕೊಂಡ್ಲಹಳ್ಳಿ ಮಹಾದೇವ ಮೊಳಕಾಲ್ಮುರು : ''ನಾನು, ನಮ್ಮ ಚಿಕ್ಕಪ್ಪನ ಮಗ ಶಿವಕುಮಾರ ಹೊಲಕ್ಕೆ ಹೋಗಿ ವಾಪಾಸ್‌ ಬರ್ತಾ ಇದ್ದಾಗ ಮಾರಮ್ಮಜ್ಜಿ ಗುಡಿ ಬಳಿ ಕಾರೊಂದು ನಿಂತಿತ್ತು. ನಮ್ಮ ಪಾಡಿಗೆ ನಾವು ಮೊಬೈಲ್‌ನಲ್ಲಿ ಹಾಡು ಕೇಳುತ್ತಾ ಬರ್ತಿದ್ವಿ, ಕಾರ್ನಲ್ಲಿದ್ದ ಒಬ್ಬ ಚಡ್ಡಿ ಹಾಕ್ಕೊಂಡ ಅಣ್ಣ ಇಳಿದು ಬಂದು ಯಾಕ್ರೋ ಕಾರ್‌ ಫೋಟೋ ತೆಗದ್ರಿ ಎಂದು ಗದರಿಸಿದ್ದಕ್ಕೆ ನಮ್ಮಣ್ಣ ಓಡಿ ಹೋದ, ನಾನು ಅವರ ಕೈಗೆ ಸಿಕ್ಕದ್ದಕ್ಕೆ ಕಾರನಲ್ಲಿ ನನ್ನ ಹಾಕೊಂಡು ಹೋಗಿಬಿಟ್ರು''...
Vijaya Karnataka Web the story of abducted child in chitradurga
ನಮ್ಮಣ್ಣ ಓಡಿ ಹೋದ, ನನ್ನ ಕಾರಿನಲ್ಲಿ ಹಾಕೊಂಡು ಹೋದ್ರು..!


ಇದು ತಾಲೂಕಿನ ಬಿ.ಜಿ.ಕೆರೆಯಲ್ಲಿ ಶನಿವಾರ ಸಂಜೆ ಅಪಹರಣವಾಗಿ ಪೊಲೀಸರ ಆಶ್ರಯದಿಂದ ಮನೆ ಸೇರಿದ ಜಗದೀಶ್‌ ಘಟನೆ ವಿವರಿಸಿದ ಪರಿ...

''ನಾವು ಬಿ.ಜಿ.ಕೆರೆ ಬಸವೇಶ್ವರ ಬಡಾವಣೆಯಲ್ಲಿ ವಾಸವಿದ್ದೇವೆ. ನನಗೆ ತಾಯಿ ಇಲ್ಲ, ನನ್ನಪ್ಪ ಮಾರಣ್ಣ ಹಮಾಲಿ ಕೆಲ್ಸ ಮಾಡ್ತಾರೆ. ನಾನೊಬ್ಬನೇ ಮಗ. ನನ್ನ ಜತೆ ಬಂದೋವ್ನು ನಮ್ಮ ಚಿಕ್ಕಪ್ಪನ ಮಗ''.

ನಾವು ಫೋಟೋ ತೆಗಿಲಿಲ್ಲ, ಹಾಡು ಕೇಳ್ತಿದ್ವಿ ಎಂದು ಹೇಳಿದರೂ ನನ್ನ ಕೈ ಹಿಡಿದು ಎಳೆದರು. ನಾನು ತಪ್ಪಿಸಿಕ್ಕೊಂಡು ಪಕ್ಕದ ಹೊಲದೊಳಕ್ಕೆ ಓಡಿ ಹೋದೆ, ಅಲ್ಲಿ ಹುರುಳಿ ಬಳ್ಳಿ ಕಾಲಿಗೆ ಸುತ್ತಿ ಬಿದ್ದು ಬಿಟ್ಟೆ. ಆಗ ಕಾರಿಂದ ಡ್ರೈವರ್‌ ಓಡಿ ಬಂದು ನನ್ನ ಹಿಡುಕ್ಕೊಂಡು ಕಾರೊಳಗೆ ಹಾಕ್ಕೊಂಡು ಹೊರಟುಬಿಟ್ರು, ನಮ್ಮಣ್ಣ ತಪ್ಪಿಸಿಕೊಂಡುಬಿಟ್ಟ ಎನ್ನುತ್ತಾನೆ ಬಾಲಕ.

ಕಾರ್ನಲ್ಲಿ ಆರು ಜನ ಇದ್ರು, ನಮ್ಮೂರು ಮುಗಿಯುವರೆಗೂ ನನ್ನ ಬಾಯಿ ಬಿಗಿಯಾಗಿ ಮುಚ್ಚಿದ್ರು, ನಾನು ಕಿರಿಚೋಕು ಆಗ್ದಷ್ಟು ಬಿಗಿ ಆಗಿ ಹಿಡಿದಿದ್ರು, ಮತ್ತೆ ಸಲ್ಪ ದೂರ ಬಂದಮೇಲೆ ಬಾಯಿ ಬಿಟ್ರು ನಿನಗೆ ಊಟ ಕೊಡಿಸ್ತೀವಿ, ನಮ್ಮ ಜತೆ ಸುಮ್ಮನಿರಬೇಕು ಎಂದೆಲ್ಲ ಹೇಳಿದ್ರು. ಆದ್ರೆ ನನಗೆ ಹೊಡೀಲಿಲ್ಲ ಸಾರ್‌, ಕಾರ್ನಲ್ಲಿ ಹೋಗ್ವಾಗ ಯಾವುದಾದ್ರು ಊರು ಬಂದ್ರೆ ನನ್ನ ಬಾಯಿ ಮುಚ್ತಿದ್ರು ಹಿಂಗೇ ಆಂಧ್ರಾ ರಾಯದುರ್ಗದವರೆಗೂ ಕರೆದೊಯ್ದುರು...

ಅಲ್ಲಾಗಲೇ ಆಂಧ್ರಾ ಪೊಲೀಸರು ಬಂದು ಇವರನ್‌ ಹಿಡಿದು ಬಿಟ್ರು... ನಾನು ನಡ್ದಿದ್ದೆಲ್ಲಾ ಹೇಳದೆ ಸಾರ್‌ ಆ ಮೇಲೆ ನನ್ನ ಇಲ್ಲಿಗೆ ಕರ್ಕೊಂಡು ಬಂದ್ರು ಎಂದು ಅಂದು ನಡೆದ ಘಟನೆ ವಿವರಿಸಿದ ಬಾಲಕ ಜಗದೀಶ್‌.

ಬಾಲಕಿ ಸುಳಿವಿಲ್ಲ: ಈ ಹಿಂದೆ ಇದೇ ಗ್ರಾಮದ ಬಾಲಕಿಯೊಬ್ಬಳನ್ನು ಐದು ವರ್ಷಗಳ ಹಿಂದೆ ಅಪಹರಿಸಲಾಗಿತ್ತು. ಆಕೆ ಸುಳಿವು ಇದುವರೆಗೂ ಸಿಕ್ಕಿಲ್ಲ. ಈಕೆ ತಂದೆ ಮಗಳ ನೆನಪಿನ ಕೊರಗಿನಲ್ಲಿಯೇ ಮೃತರಾಗಿದ್ದರು. ಈ ವಿಷಯ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ಶನಿವಾರ ನಡೆದ ಈ ಅಪಹರಣ ಪ್ರಕರಣಕ್ಕೆ ಗ್ರಾಮದಲ್ಲಿ ರೆಕ್ಕೆ ಪುಕ್ಕಗಳು ಬಂದು ನಾನಾ ಊಹಾಪೋಹಗಳು ಹರಿದಾಡುತ್ತಿವೆ.

ಪ್ರಸ್ತುತವಾಗಿ ಬಂಧಿತರಾಗಿರುವ ಆರು ಜನ ವ್ಯಕ್ತಿಗಳು ಕಳೆದ ಮೂರು ದಿನಗಳಿಂದಲೂ ಗ್ರಾಮದಲ್ಲಿ ಸಂಚರಿಸುತ್ತಿದ್ದರು. ಯಾವುದೋ ನಿಧಿ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬನೇ ಮಗನಿರುವ ಈ ಹುಡುಗನನ್ನು ಅಪಹರಿಸಿದ್ದಾರೆ. ಇವರು ಕಾರಿನಲ್ಲಿ ಓಡಾಡುವುದು ನಾನು ನೋಡಿದ್ದೆ ಎಂಬುದು ಕೆಲ ಗ್ರಾಮಸ್ಥರ ಮಾತು.


ಬಾಲಕ ಅಪಹರಣಕ್ಕೆ ಕಾರಣ ತಿಳಿದಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಗ್ರಾಮದ ಬಾಲಕಿಯೊಬ್ಬಳನ್ನು ಆಂಧ್ರ ಮೂಲದವರು ಅಪಹರಿಸಿದ್ದರಂತೆ. ಈ ಬಾಲಕಿ ಇದುವರೆಗೂ ಪತ್ತೆಯಾಗಿಲ್ಲ. ಕೆಲವು ನಿಧಿಗಳ್ಳರು ಮಕ್ಕಳನ್ನು ಬಲಿಕೊಡಲು ಈ ರೀತಿ ಮಾಡುತ್ತಿರುವ ಬಗ್ಗೆ ಅನುಮಾನ ಮೂಡಿದೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

- ಡಾ.ಬಿ.ಯೋಗೇಶ್‌ ಬಾಬು, ಜಿಪಂ ಸದಸ್ಯ, ಬಿ.ಜಿ.ಕೆರೆ.


ಬಾಲಕನ್ನು ಅಪಹರಣ ಮಾಡಿದ ಆರು ಜನರನ್ನು ಈಗಾಗಲೇ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ನಂತರವೇ ಅಪಹರಣದ ಕಾರಣ ತಿಳಿಯಲಿದೆ.

-ಬಿ.ಎನ್‌.ಮಂಜುನಾಥ್‌, ಪಿಎಸ್‌ಐ, ಮೊಳಕಾಲ್ಮುರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ