ಆ್ಯಪ್ನಗರ

ಟಿಪ್ಪು ಜಯಂತಿ ರದ್ದು ವಿರೋಧಿಸಿ ಪ್ರತಿಭಟನೆ

ಸಿಎಂ ಬಿ.ಎಸ್‌. ಯಡಿಯೂರಪ್ಪ ಟಿಪ್ಪು ಜಯಂತಿ ರದ್ದು ಪಡಿಸಿರುವುದನ್ನು ವಿರೋಧಿಸಿ ರಾಜ್ಯ ಟಿಪ್ಪು ಸುಲ್ತಾನ್‌ ಅಭಿಮಾನಿ ಮಹಾವೇದಿಕೆಯಿಂದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿ, ಮನವಿ ಸಲ್ಲಿಸಲಾಯಿತು.

Vijaya Karnataka 7 Aug 2019, 5:00 am
ಚಿತ್ರದುರ್ಗ : ಸಿಎಂ ಬಿ.ಎಸ್‌. ಯಡಿಯೂರಪ್ಪ ಟಿಪ್ಪು ಜಯಂತಿ ರದ್ದು ಪಡಿಸಿರುವುದನ್ನು ವಿರೋಧಿಸಿ ರಾಜ್ಯ ಟಿಪ್ಪು ಸುಲ್ತಾನ್‌ ಅಭಿಮಾನಿ ಮಹಾವೇದಿಕೆಯಿಂದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿ, ಮನವಿ ಸಲ್ಲಿಸಲಾಯಿತು.
Vijaya Karnataka Web tipu jayanthi protests against cancellation
ಟಿಪ್ಪು ಜಯಂತಿ ರದ್ದು ವಿರೋಧಿಸಿ ಪ್ರತಿಭಟನೆ


ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಅಲಿ ಮಾತನಾಡಿ, 'ಟಿಪ್ಪುಜಯಂತಿ ರದ್ದುಪಡಿಸಿದಂತೆ ಇತರೆ ಜಯಂತಿ ರದ್ದುಪಡಿಸಲಿ. ಟಿಪ್ಪು ಮುಸ್ಲಿಂ ಜನಾಂಗಕ್ಕೆ ಸೇರಿದವನು ಎನ್ನುವ ಏಕೈಕ ಕಾರಣಕ್ಕಾಗಿ ಟಿಪ್ಪು ಜಯಂತಿ ರದ್ದುಪಡಿಸಲಾಗಿದೆ' ಎಂದರು.

ಜಾತಿ, ಧರ್ಮಗಳ ನಡುವೆ ಸಂಘರ್ಷ ಹುಟ್ಟು ಹಾಕುವ ದ್ವೇಷದ ರಾಜಕಾರಣ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ. ಟಿಪ್ಪು ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವತನಕ ಹೋರಾಡುತ್ತೇವೆ ಎಂದರು.

'ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಟಿಪ್ಪು ಜಯಂತಿ ರದ್ದುಪಡಿಸಿದಂತೆ ಬಸವ ಜಯಂತಿ ರದ್ದುಪಡಿಸಲಿ ಎಂದು ರಾಜ್ಯ ಸರಕಾರಕ್ಕೆ ಸವಾಲು ಹಾಕಿರುವುದನ್ನು ಸ್ವಾಗತಿಸುತ್ತೇವೆ. ದೂರದೃಷ್ಟಿ, ಆಧುನಿಕ ಚಿಂತನೆಯ ಟಿಪ್ಪು ಸುಲ್ತಾನ್‌ ಈ ನಾಡಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ' ಎಂದರು.

ನಗರಸಭೆ ಮಾಜಿ ಉಪಾಧ್ಯಕ್ಷ ಎನ್‌.ಬಿ.ಟಿ.ಜಮೀರ್‌ ಮಾತನಾಡಿ, 'ಟಿಪ್ಪು ಮತಾಂಧ, ದೇಶದ್ರೋಹಿಯೆಂದು ಅಪಪ್ರಚಾರ ಮಾಡುತ್ತಿರುವ ಸಂಘಪರಿವಾರ ಸಿಎಂ ಯಡಿಯೂರಪ್ಪ ಏಕಪಕ್ಷಿಯವಾಗಿ ಟಿಪ್ಪುಜಯಂತಿ ರದ್ದುಪಡಿಸಿರುವುದು ಯಾವ ನ್ಯಾಯ?' ಎಂದು ಪ್ರಶ್ನಿಸಿದರು. ದಲಿತ ಮುಖಂಡ ಎಂ.ಜಯಣ್ಣ, ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್‌, ಎಚ್‌.ಶಬ್ಬೀರ್‌ಬಾಷಾ, ರಾಜಣ್ಣ, ಗಣೇಶ್‌, ಮಂಜಣ್ಣ, ನಜ್ಮತಾಜ್‌, ಮುನಿರಾ ಎ.ಮಕಾಂದಾರ್‌, ಮೆಹಬೂಬ್‌ಖಾತೂನ್‌, ಬಾಳೆಕಾಯಿ ಶ್ರೀನಿವಾಸ್‌, ಕರುನಾಡ ರಕ್ಷ ಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಯದ್‌ ಇಸ್ಮಾಯಿಲ್‌, ಕೆಪಿಸಿಸಿ ಕಾರ್ಮಿಕ ವಿಭಾಗದ ಎ.ಜಾಕೀರ್‌ಹುಸೇನ್‌ ಭಾಗವಹಿಸಿದ್ದರು. ಕರ್ನಾಟಕ ಕೊಳಗೇರಿಗಳ ನಿವಾಸಿಗಳ ಸಂಯುಕ್ತ ಸಂಘಟನೆ, ಸ್ಲಂ ಜನಾಂದೋಲನ ಸಂಘಟನೆ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ