ಆ್ಯಪ್ನಗರ

ದುರ್ಗದ ಜನೋತ್ಸವ ನಾಳೆಯಿಂದ

ಅಧಃ ಪತನಗೊಳ್ಳುತ್ತಿರುವ ಸಾಂಸ್ಕೃತಿಕ ಮೌಲ್ಯಗಳ ಪುನಃಸ್ಥಾಪನೆ ಹಾಗೂ ಕಲೆ, ಸಂಸ್ಕೃತಿಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ವ್ಯಕ್ತಪಡಿಸುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಆವಿಷ್ಕಾರ ವೇದಿಕೆಯಿಂದ ಆ.3, 4ರಂದು 'ದುರ್ಗದ ಜನೋತ್ಸವ' ಆಯೋಜಿಸಲಾಗಿದೆ ಎಂದು ವಿಜಯಕುಮಾರ್‌ ತಿಳಿಸಿದರು.

Vijaya Karnataka 2 Aug 2019, 5:00 am
ಚಿತ್ರದುರ್ಗ : ಅಧಃ ಪತನಗೊಳ್ಳುತ್ತಿರುವ ಸಾಂಸ್ಕೃತಿಕ ಮೌಲ್ಯಗಳ ಪುನಃಸ್ಥಾಪನೆ ಹಾಗೂ ಕಲೆ, ಸಂಸ್ಕೃತಿಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ವ್ಯಕ್ತಪಡಿಸುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಆವಿಷ್ಕಾರ ವೇದಿಕೆಯಿಂದ ಆ.3, 4ರಂದು 'ದುರ್ಗದ ಜನೋತ್ಸವ' ಆಯೋಜಿಸಲಾಗಿದೆ ಎಂದು ವಿಜಯಕುಮಾರ್‌ ತಿಳಿಸಿದರು.
Vijaya Karnataka Web tomorrows bad luck
ದುರ್ಗದ ಜನೋತ್ಸವ ನಾಳೆಯಿಂದ


ಆವಿಷ್ಕಾರ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಆಧುನಿಕತೆಯತ್ತ ಸಾಗುತ್ತಿರುವ ಸಮಾಜದಲ್ಲಿ ಸಾಮಾಜಿಕ ಅಸಮಾನತೆ, ಜಾತೀಯತೆ, ಲಿಂಗ ತಾರತಮ್ಯ, ಮೌಢ್ಯ ಕಂದಾಚಾರ, ಕೋಮುವಾದಿ ಭಾವನೆಗಳು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿನ ಮೌಲ್ಯ ಪ್ರಜ್ಞೆ ಜಾಗೃತಗೊಳಿಸುವ ನಿಟ್ಟಿನಲ್ಲಿ ನಮ್ಮ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಬೇಕಿದೆ' ಎಂದರು.

'ಆವಿಷ್ಕಾರ' ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್‌ ಸಂಘಟನೆಗಳಿಂದ ಪ್ರತಿ ವರ್ಷ 'ದುರ್ಗದ ಜನೋತ್ಸವ' ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಸದಭಿರುಚಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಜನರ ನಡುವೆ ಹರಡುವ ಪ್ರಯತ್ನದ ಭಾಗವಾಗಿ 'ದುರ್ಗದ ಜನೋತ್ಸವ' ನಡೆಯುತ್ತಿದೆ ಎಂದರು.

ಎಐಎಂಎಸ್‌ಎಸ್‌ನ ಸುಜಾತ ಮಾತನಾಡಿ,'ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರಗಳಿಗೆ ಮಾಧ್ಯಮಗಳ ಪ್ರಭಾವವೇ ಪ್ರಧಾನವಾಗಿದೆ. ಎಷ್ಟೋ ಪ್ರಕರಣಗಳಲ್ಲಿ ಅಪರಾಧಿಗಳೇ ಇದನ್ನು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಮೌಲ್ಯಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಚಳವಳಿಗೆ ಬೆಂಬಲಿಸುತ್ತಿದ್ದೇವೆ' ಎಂದು ಹೇಳಿದರು.

ಎಐಡಿವೈಒ ರವಿಕುಮಾರ್‌ ಮಾತನಾಡಿ, 'ಕೇವಲ ಮನರಂಜನೆಗಾಗಿ ಕಲೆ ಎಂಬುದು ಸಮಾಜಕ್ಕೆ ಮಾರಕವಾದುದು. ಟಿವಿ, ಸಾಮಾಜಿಕ ಜಾಲತಾಣಗಳ ವಾಣಿಜ್ಯ ಹಿತಾಸಕ್ತಿಯ ಕಾರ್ಯಕ್ರಮಗಳು ಯುವಜನರನ್ನು ದಿಕ್ಕು ತಪ್ಪಿಸುತ್ತಿವೆ. ದುರ್ಗದ ಜನೋತ್ಸವದಂತ ಕಾರ್ಯಕ್ರಮಗಳು ಮೌಲ್ಯಪ್ರಜ್ಞೆ ಅಳವಡಿಸಿಕೊಳ್ಳಲು ಸಹಾಯವಾಗಲಿವೆ' ಎಂದರು.

**

ಗಣ್ಯರು, ಸಾಂಸ್ಕೃತಿಕ ಚಿಂತಕರು ಭಾಗಿ

'ದುರ್ಗದ ಜನೋತ್ಸವ'ದ ಎರಡು ದಿನದ ಕಾರ್ಯಕ್ರಮಗಳಲ್ಲಿ ಪ್ರೊ.ಮಲ್ಲಿಕಾರ್ಜುನ ಹಲಸಂಗಿ, ಕಥೆಗಾರ ಎಸ್‌.ಆರ್‌. ಗುರುನಾಥ್‌, ಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ್‌ ಭಾಗವಹಿಸಲಿದ್ದಾರೆ. ಕೋಲಾಟ, ಪ್ರಗತಿಪರ ಗೀತೆಗಳ ಹಾಡುಗಾರಿಕೆ, ರಂಗ ಗೀತೆಗಳು, ನಾಟಕ ಪ್ರದರ್ಶನ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಸಂಘಟನೆಗಳು, ಪ್ರತಿಭೆಗಳನ್ನು ಒಳಗೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ