ಆ್ಯಪ್ನಗರ

ಚಿತ್ರದುರ್ಗದಲ್ಲಿ ಪದ್ಮನಾಭ ಭಂಡಾರ ಪತ್ತೆ?

ಚಿತ್ರದುರ್ಗದ ಪದ್ಮನಾಭ ದೇವಾಲಯದಲ್ಲೂ ಚಿನ್ನಾಭರಣಗಳ ಆರು ಭಂಡಾರಗಳು ಪತ್ತೆಯಾಗಿವೆ ಎಂಬ ವದಂತಿಗಳು ಹರಡಿವೆ.

ವಿಕ ಸುದ್ದಿಲೋಕ 12 Aug 2017, 9:57 pm
ಚಿತ್ರದುರ್ಗ: ಕೇರಳದ ಅನಂತ ಪದ್ಮನಾಭ ದೇವಾಲಯದಲ್ಲಿ ಪತ್ತೆಯಾದ ವಜ್ರಾಭರಣಗಳನ್ನೊಳಗೊಂಡ ಆರು ಕೋಣೆಗಳು ಪತ್ತೆಯಾದ ಮಾದರಿಯಲ್ಲೇ ಚಿತ್ರದುರ್ಗದ ಪದ್ಮನಾಭ ದೇವಾಲಯದಲ್ಲೂ ಚಿನ್ನಾಭರಣಗಳ ಆರು ಭಂಡಾರಗಳು ಪತ್ತೆಯಾಗಿವೆ ಎಂಬ ವದಂತಿಗಳು ಹರಡಿವೆ.
Vijaya Karnataka Web treasure chamber discovered at chitradurga
ಚಿತ್ರದುರ್ಗದಲ್ಲಿ ಪದ್ಮನಾಭ ಭಂಡಾರ ಪತ್ತೆ?


ಕೋಟೆ ನಾಡಿನಲ್ಲಿ ಉತ್ಖನನದ ಸಂದರ್ಭದಲ್ಲಿ ಪದ್ಮನಾಭ ದೇವಾಲಯ ಪತ್ತೆಯಾಗಿದೆ.

ಈ ಕುರಿತು ತುಮಕೂರಿನ ಶಿರಾದಲ್ಲಿ ವ್ಯಕ್ತಿಯೊಬ್ಬರು ಸುದ್ದಿಗೋಷ್ಠಿ ನಡೆಸಿದ್ದರು ಎಂಬ ಮಾಹಿತಿಯೂ ಬಂದಿದೆ. ಆದರೆ ಈ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದು ಹೇಳಲಾಗಿದೆ.

ದೇವಾಲಯವನ್ನು ಸಂಪೂರ್ಣ ತಪಾಸಣೆ ನಡೆಸಿದಾಗ ದೇಗುಲದ ಆವರಣದಲ್ಲಿ ಆರು ಕೋಣೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಭಂಡಾರಗಳು ಪತ್ತೆಯಾಗಿರುವ ಬಗ್ಗೆ ಕೇಂದ್ರ ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೇರಳದ ಅನಂತಪದ್ಮನಾಭ ದೇವಾಲಯದ ಆರು ಕೋಣೆಗಳಲ್ಲಿ ಪತ್ತೆಯಾದ ವಜ್ರ, ವೈಢೂರ್ಯಗಳು ಈ ದೇವಾಲಯದ ಕೋಣೆಗಳಲ್ಲೂ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ದೇವಾಲಯಕ್ಕೆ ಸಂಬಂಧಿಸಿದ ಒಂದು ಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಹಾಗೂ ಕೋಣೆಗಳಲ್ಲಿ ಪತ್ತೆಯಾಗಿರುವ ಸಕಲ ಸಂಪತ್ತುಗಳು ಸದ್ಯದಲ್ಲೇ ಬಹಿರಂಗಗೊಳ್ಳಲಿವೆ.

ಕೇಂದ್ರ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ್ ಇದನ್ನು ನಿರಾಕರಿಸಿದ್ದಾರೆ. ಇದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವಲಯದ ಅಧಿಕಾರಿ ಕೆ. ಮೂರ್ತೇಶ್ವರಿಯವರು ಇದನ್ನು ವದಂತಿ ಎಂದು ಹೇಳಿದ್ದಾರೆ.

Treasure Chamber Discovered at Chitradurga?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ