ಆ್ಯಪ್ನಗರ

ಯುವ ಜನತೆ ರಂಗಕಲೆ ಪ್ರೋತ್ಸಾಹಿಸಲಿ

ಇಂದಿನ ಯುವ ಜನತೆ ಮೊಬೈಲ್‌ ಗೀಳಿನಿಂದ ಹೊರಬಂದು ರಂಗಕಲೆ ಪ್ರೋತ್ಸಾಹಿಸುವಂತ ಕೆಲಸ ಮಾಡಬೇಕು ಎಂದು ಯುವ ರಂಗಕರ್ಮಿ ಹಳ್ಳಿಹಾಳ್‌ ವೆಂಕಟೇಶ್‌ ಹೇಳಿದರು.

Vijaya Karnataka 8 Dec 2018, 5:00 am
ಹೊಳಲ್ಕೆರೆ : ಇಂದಿನ ಯುವ ಜನತೆ ಮೊಬೈಲ್‌ ಗೀಳಿನಿಂದ ಹೊರಬಂದು ರಂಗಕಲೆ ಪ್ರೋತ್ಸಾಹಿಸುವಂತ ಕೆಲಸ ಮಾಡಬೇಕು ಎಂದು ಯುವ ರಂಗಕರ್ಮಿ ಹಳ್ಳಿಹಾಳ್‌ ವೆಂಕಟೇಶ್‌ ಹೇಳಿದರು.
Vijaya Karnataka Web young people encourage the theater
ಯುವ ಜನತೆ ರಂಗಕಲೆ ಪ್ರೋತ್ಸಾಹಿಸಲಿ


ತಾಲೂಕಿನ ತಾಳಿಕಟ್ಟೆ ಗ್ರಾಮದ ಬೀರಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೂಡಣರಂಗ ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಪಾಪು ಬಾಪು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೆರೆಯ ಮುಂದೆ ನಿಜ ಪ್ರತಿಭೆ ತೋರಿಸುವಂತಹದ್ದು ರಂಗಕಲೆ, ಆ ಕಲೆ ಪ್ರದರ್ಶಿಸುವುದೆಂದರೆ ಅದೊಂದು ಅದ್ಬುತವೇ ಸರಿ. ಅಂಥ ರಂಗಕಲೆ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡ ಅನೇಕ ಮಹನೀಯರು, ಹಿರಿಯ ನಟ, ನಟಿಯರನ್ನು ನಾವು ಕಂಡಿದ್ದೇವೆ. ಹೀಗಿದ್ದು ಕೂಡ ರಂಗಕಲೆ ನಶಿಸುತ್ತಿರುವುದು ವಿಷಾದನೀಯ ಎಂದರು.

ಕನಕ ಪ್ರಶಸ್ತಿ ಪುರಸ್ಕೃತ ಸಂದೀಪನಿ ಲೋಕೇಶ್‌ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ ನಮ್ಮ ದೇಶದ ಸಂಪತ್ತು. ಅದನ್ನು ಉಳಿಸಿ ಬೆಳೆಸುವ ಹೊಣೆ ಯುವ ಸಮುದಾಯ ಮೇಲಿದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಬೆ ಹೊರತರಲು ಇಂಥ ಸಂಘಗಳು ಸಹಕಾರಿ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್‌ ಮಾತನಾಡಿ, ತಾಳಿಕಟ್ಟೆ ಗ್ರಾಮವು ಅನೇಕ ಕಲೆಗಳ ಬೀಡು, ಐತಿಹಾಸಿಕ ಹಿನ್ನೆಲೆ ಹೊಂದಿರುವ, ಹಿರಿಯರ ಪರಂಪರೆ ಉಳಿಸಿಕೊಂಡು ಬಂದಿರು ಗ್ರಾಮವಾಗಿದ್ದು, ಇಲ್ಲಿ ಒಂದು ಸಾಂಸ್ಕೃತಿ ಕ ಸಂಘ ಉದ್ಘಾಟನೆ ಆಗುತ್ತಿರುವುದು ಸಂತಸದ ಸಂಗತಿ. ರಂಗಕಲೆ ಉಳಿಸುವಲ್ಲಿ ಸಂಘ ಸಾಕಷ್ಟು ಕೆಲಸ ಮಾಡಬೇಕು. ಯುವ ರಂಗಕರ್ಮಿಗಳನ್ನು ಹೊರತರುವಂತಾಗಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಸವಿತಾ ಅಜ್ಜಯ್ಯ, ತಾಪಂ ಸದಸ್ಯೆ ಸುಮಾ ಹಳ್ಳಪ್ಪ, ಗ್ರಾಪಂ ಸದಸ್ಯರಾದ ದೇವರಾಜಪ್ಪ, ಬಸವರಾಜಪ್ಪ, ಮಾಳಿಗೆಪ್ಪ, ಪ್ರಕಾಶ್‌, ಬಸಪ್ಪ, ಎಪಿಎಂಸಿ ಸದಸ್ಯ ಗೋವಿಂದಪ್ಪ, ಗುಡಿಗೌಡರಾದ ಜಿ.ಕೆ.ಕೆಂಚಪ್ಪ, ಬಿ.ಚಿಕ್ಕಣ್ಣ, ತಾಪಂ ಮಾಜಿ ಸದಸ್ಯ ಎಂ.ಎಸ್‌.ನಾಗಪ್ಪ, ಪ್ರೌಢಶಾಲೆ ಸಮಿತಿ ಕಾರ್ಯದರ್ಶಿ ಡಿ.ದೇವರಾಜಪ್ಪ, ಮುಖ್ಯಶಿಕ್ಷ ಕ ಎನ್‌.ಪಿ. ನಾಗರಾಜಪ್ಪ, ಯುವ ರಂಗಕರ್ಮಿ ಶ್ರೀನಿವಾಸ್‌, ಮಧು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಕೃಷ್ಣಮೂರ್ತಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಐಶ್ವರ್ಯ ಉಚ್ಚಂಗಿ, ಕಾರ್ಯದರ್ಶಿ ಎನ್‌.ಶ್ರೀಧರ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ