ಆ್ಯಪ್ನಗರ

ಕೆಎಸ್‌ಆರ್‌ಪಿ ಬಸ್‌ ಹರಿದು 2 ವರ್ಷದ ಮಗು ಸಾವು

ಕೆಎಸ್‌ಆರ್‌ಪಿ (ರಾಜ್ಯ ಮೀಸಲು ಪಡೆ) ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 24 May 2018, 5:00 am
ಬೆಂಗಳೂರು: ಕೆಎಸ್‌ಆರ್‌ಪಿ (ರಾಜ್ಯ ಮೀಸಲು ಪಡೆ) ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web  1 2
ಕೆಎಸ್‌ಆರ್‌ಪಿ ಬಸ್‌ ಹರಿದು 2 ವರ್ಷದ ಮಗು ಸಾವು


ಬುಧವಾರ ಬೆಳಗ್ಗೆ ಆರ್‌ಎಂಸಿ ಯಾರ್ಡ್‌ನ ಆಶ್ರಯ ನಗರದಲ್ಲಿ ತಂದೆ ಜತೆ ಅಂಗಡಿಗೆ ಬಂದಿದ್ದ ಗಿರಿಪ್ರಕಾಶ್‌ ಎನ್ನುವ ಬಾಲಕ ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಇಲ್ಲಿನ ಸ್ಥಳೀಯ ನಿವಾಸಿ ವಿಕ್ಟರಿ ವೇಲು ಮತ್ತು ಲತಾ ದಂಪತಿ ಪುತ್ರ ಗಿರಿಪ್ರಕಾಶ್‌ ಏಕಾಏಕಿ ರಸ್ತೆಗೆ ಓಡಿ ಬಂದಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಅಂಗಡಿಯಲ್ಲಿ ತಿಂಡಿ ಕೊಡಿಸುವಂತೆ ಬಾಲಕ ಅಳತೊಡಗಿದ್ದ. ತಂದೆ ವಿಕ್ಟರಿ ವೇಲು, ಪುತ್ರನನ್ನು ಕರೆದುಕೊಂಟಡು ಸಮೀಪದ ಅಂಗಡಿಗೆ ತೆರಳಿದ್ದರು. ತಿಂಡಿ ಕೊಡಿಸಿದ ಬಳಿಕ ಹಣ ಪಾವತಿಸಲು ಎತ್ತಿಕೊಂಡಿದ್ದ ಮಗುವನ್ನು ತಂದೆ ಕೆಳಗಿಳಿಸಿದ್ದರು. ಜೇಬಿನಿಂದ ಹಣ ತೆಗೆಯುವ ವೇಳೆಗೆ ಬಾಲಕ ಸೀದಾ ರಸ್ತೆಗೆ ಓಡಿ ಬಂದಿದ್ದ. ಅದೇ ವೇಳೆಗೆ ಕೆಎಸ್‌ಆರ್‌ಪಿ ವಾಹನ ಎದುರು ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರ್‌.ಆರ್‌.ನಗರ ಚುನಾವಣಾ ಭದ್ರತೆಗಾಗಿ ನಿಯೋಜಿಸಲಾಗಿದ್ದ ಮೀಸಲು ಪಡೆ ವಾಹನ ಅಲ್ಲೇ ನಿಂತಿತ್ತು. ಮೇಲಧಿಕಾರಿಗಳ ಸೂಚನೆಯಂತೆ ವಾಹನವನ್ನು ಬೇರೊಂದು ಸ್ಥಳದಲ್ಲಿ ನಿಲ್ಲಿಸಲು ಚಾಲಕ ಆಗಷ್ಟೇ ವಾಹನವನ್ನು ಸ್ಟಾರ್ಟ್‌ ಮಾಡಿ ಹೊರಟಿದ್ದರು. ಅಷ್ಟೊತ್ತಿಗೆ ಅಂಗಡಿ ಬಳಿ ನಿಂತಿದ್ದ ಬಾಲಕ ಏಕಾಏಕಿ ರಸ್ತೆಗೆ ಬಂದು ಬಿಟ್ಟ. ವಾಹನ ವೇಗದಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಕೆಎಸ್‌ಆರ್‌ಪಿ ವಾಹನದ ಚಾಲಕನನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಯಶವಂತಪುರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ವಿಕ ಕಳಕಳಿ

* ಮಕ್ಕಳನ್ನು ಅಂಗಡಿಗೆ ಕರೆದೊಯ್ದಾಗ ಕೈಬಿಟ್ಟರೆ ದಿಢೀರನೆ ರಸ್ತೆಗೆ ಓಡಿ ಹೋಗುವ ಅಪಾಯ ಇರುತ್ತದೆ

* ರಸ್ತೆ ಬದಿಯಲ್ಲಿ ನಡೆಯುವಾಗ, ರಸ್ತೆ ದಾಟುವಾಗ ಪೋಷಕರು ಮಕ್ಕಳ ಕೈ ಹಿಡಿದುಕೊಂಡು ನಡೆಯಬೇಕು

* ಪೋಷಕರು ಮಕ್ಕಳನ್ನು ಯಾವಾಗಲೂ ಎಡಬದಿಯಲ್ಲಿ ಕೈ ಹಿಡಿದು ಕರೆದೊಯ್ಯಬೇಕು

* ರಸ್ತೆ ಬದಿ ಖರೀದಿ ವೇಳೆಯಲ್ಲಿ , ಬಿಲ್‌ ಪಾವತಿಸುವಾಗ ಮಕ್ಕಳ ಕಡೆ ಗಮನವಿರಲಿ

* ಮಕ್ಕಳ ಕೈಯಲ್ಲಿ ತಿಂಡಿ ಇದ್ದಾಗ ಬೀದಿ ನಾಯಿಗಳೂ ದಾಳಿ ಮಾಡುವ ಅಪಾಯವಿರುತ್ತದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ