ಆ್ಯಪ್ನಗರ

ಅಕ್ಕನ ಸ್ಕೂಲ್‌ ಬಸ್‌ ಹರಿದು ಮಗು ಸಾವು

ಶಾಲೆಗೆ ಹೊರಟಿದ್ದ ಅಕ್ಕನಿಗೆ ಬಾಯ್‌ ಹೇಳಲು ಬಂದಿದ್ದ ಎರಡೂವರೆ ವರ್ಷದ ಮಗುವಿನ ಮೇಲೆ ಸ್ಕೂಲ್‌ ಬಸ್ ಹರಿದ ಘಟನೆ ನಡೆದಿದೆ

ಟೈಮ್ಸ್ ಆಫ್ ಇಂಡಿಯಾ 8 Feb 2017, 12:50 pm
ಚೆನ್ನೈ: ಶಾಲೆಗೆ ಹೊರಟಿದ್ದ ಅಕ್ಕನಿಗೆ ಬಾಯ್‌ ಹೇಳಲು ಬಂದಿದ್ದ ಎರಡೂವರೆ ವರ್ಷದ ಮಗುವಿನ ಮೇಲೆ ಸ್ಕೂಲ್‌ ಬಸ್ ಹರಿದ ಘಟನೆ ಮೆಡವಕ್ಕಂನಲ್ಲಿ ನಡೆದಿದೆ.
Vijaya Karnataka Web  child run over by sisters school bus
ಅಕ್ಕನ ಸ್ಕೂಲ್‌ ಬಸ್‌ ಹರಿದು ಮಗು ಸಾವು


ಶಾಲೆ ಬಸ್‌ ಹತ್ತಲು ಮನೆ ಮುಂದೆ ನಿಂತಿದ್ದ ಅಕ್ಕನ ಜತೆ ಇದ್ದ ಮಗು ಸಮೀಕ್ಷಾ, ಬಸ್‌ ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ.

'ಎಂದಿನಂತೆ ಮಂಗಳವಾರ ಬೆಳಗ್ಗೆ 8.50ಕ್ಕೆ ಮನೆ ಮುಂದೆ ಬಸ್‌ ಬಂದಿತ್ತು. ದೊಡ್ಡಮಗಳನ್ನು ಬಸ್‌ ಹತ್ತಿಸಲು ಹೊರಗೆ ಬಂದೆ. ಸಾಮಾನ್ಯವಾಗಿ ಗೇಟ್‌ ಹಾಕಿ ಹೊರಬರುತ್ತಿದ್ದೆ. ಆ ದಿನ ಮರೆತು ಹೊರಗೆ ಬಂದಿದ್ದೆ. ಮಗು ಹೊರಗೆ ಇರುವುದನ್ನು ಗಮನಿಸಿರಲಿಲ್ಲ. ಬಸ್‌ ಮುಂದೆ ಸಾಗಿದಾಗ ಮಗು ಚಕ್ರದಡಿ ಸಿಲುಕಿತು,'ಎಂದು ಮಗುವಿನ ತಾಯಿ ಈಶ್ವರಿ ಹೇಳಿದ್ದಾರೆ.

ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ, ಆ ವೇಳೆಗಾಗಲೇ ಮಗು ಕೊನೆಯುಸಿರೆಳೆದಿತ್ತು.

ಹಿಡಿದು ಥಳಿಸಲು ಯತ್ನಿಸಿದ ಸ್ಥಳೀಯರಿಂದ ಬಿಡಿಸಿಕೊಂಡ ಬಸ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಂತರ ಪ್ರಕರಣ ದಾಖಲಿಸಿರುವ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಚಾಲಕನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ