ಆ್ಯಪ್ನಗರ

ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನಿಂದ 1.56 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್‌ ಜಪ್ತಿ

ದಿಲ್ಲಿಯಿಂದ ರೈಲಿನಲ್ಲಿ ಬೆಂಗಳೂರಿಗೆ ತರಲಾಗಿದ್ದ 7.80 ಲಕ್ಷ ವಿದೇಶಿ ಸಿಗರೇಟುಗಳನ್ನು ಕೇಂದ್ರ ಸೀಮಾ ಸುಂಕ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನ.12ರಂದು ರಾತ್ರಿ 8ರ ಸುಮಾರಿಗೆ ಈ ಜಪ್ತಿ ಕಾರ್ಯಾಚರಣೆ ನಡೆದಿದೆ.

Vijaya Karnataka Web 14 Nov 2019, 8:16 am
ಬೆಂಗಳೂರು: ರೈಲು ಮೂಲಕ ದಿಲ್ಲಿಯಿಂದ ಬೆಂಗಳೂರಿಗೆ ತರಲಾಗಿದ್ದ 1.56 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟುಗಳನ್ನು ಕೇಂದ್ರ ಸೀಮಾ ಸುಂಕ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Vijaya Karnataka Web 1 5 crore worth of illegally transported foreign cigarettes were seized from the karnataka express train
ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನಿಂದ 1.56 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್‌ ಜಪ್ತಿ


ನ.12ರಂದು ರಾತ್ರಿ 8ರ ಸುಮಾರಿಗೆ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ನಗರ ರೈಲು ನಿಲ್ದಾಣಕ್ಕೆ ಬಂದಿತ್ತು. ಅದರ ಲಗೇಜ್‌ ಬೋಗಿಯಲ್ಲಿ ವಿನ್‌ ಎಂದು ಬರೆಯಲಾಗಿದ್ದ 26 ಅನುಮಾನಾಸ್ಪದ ಪಾರ್ಸೆಲ್‌ಗಳು ಪತ್ತೆಯಾದವು. ಒಳಗೆ ವಿನ್‌ ಬ್ರ್ಯಾಂಡ್‌ ಹೆಸರಿನ 78 ಕಾರ್ಟನ್‌ ಬಾಕ್ಸ್‌ಗಳಲ್ಲಿಸಿಗರೇಟ್‌ ಪ್ಯಾಕ್‌ಗಳಿದ್ದವು. ಪರಿಶೀಲಿಸಿದಾಗ ಒಟ್ಟು 1.56 ಕೋಟಿ ರೂ. ಮೌಲ್ಯದ 7.80 ಲಕ್ಷ ಸಿಗರೇಟುಗಳು ಇರುವುದು ಕಂಡು ಬಂದಿದೆ.

ಜಪ್ತಿ ಮಾಡಿರುವ ಸಿಗರೇಟು ಪ್ಯಾಕೆಟ್‌ಗಳ ಮೇಲೆ ಎಚ್ಚರಿಕೆಯ ಯಾವುದೇ ಚಿತ್ರ ಮತ್ತು ಬರಹ ಇಲ್ಲ. ಭಾರತದಲ್ಲಿ ಮಾರಾಟವಾಗುವ ಸಿಗರೇಟ್‌ಗಳ ಮೇಲೆ ಕಡ್ಡಾಯವಾಗಿ ಎಚ್ಚರಿಕೆಯ ಸಂದೇಶಗಳು ಇರಲೇಬೇಕು. ಅಲ್ಲದೆ, ಅವುಗಳನ್ನು ಅಕ್ರಮವಾಗಿ ಭಾರತಕ್ಕೆ ತರಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಕರ್ನಾಟಕ ವಲಯಕ್ಕೆ ಪ್ರವೇಶಿಸುವ ಎಲ್ಲ ರೈಲುಗಳ ಪಾರ್ಸೆಲ್‌ಗಳ ಮೇಲೆ ಕಣ್ಣಿಟ್ಟಿರುವುದಾಗಿ ಸೀಮಾ ಸುಂಕ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ