ಆ್ಯಪ್ನಗರ

ಅಶ್ಲೀಲ ಫೋಟೋ ಕಳುಹಿಸಿದವನಿಗೆ 2 ವರ್ಷ ಜೈಲು: CID ಸೈಬರ್ ಕ್ರೈಂನಲ್ಲಿ ಮೊದಲ ಶಿಕ್ಷೆ

ಪರಿಚಿತ ಯುವತಿಗೆ ಇ ಮೇಲ್‌ ಮೂಲಕ ಅಶ್ಲೀಲ ಫೋಟೋ, ಸಂದೇಶ ಕಳುಹಿಸಿ ಬೆದರಿಕೆಯೊಡ್ಡಿ ಕಿರುಕುಳ ನೀಡುತ್ತಿದ್ದ ಶಿವಪ್ರಸಾದ್‌ ಸಜ್ಜನ್‌ ಎಂಬಾತನಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿ-ಸಿ 1ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

Vijaya Karnataka 8 Sep 2018, 11:01 am
ಬೆಂಗಳೂರು: ಪರಿಚಿತ ಯುವತಿಗೆ ಇ ಮೇಲ್‌ ಮೂಲಕ ಅಶ್ಲೀಲ ಫೋಟೋ, ಸಂದೇಶ ಕಳುಹಿಸಿ ಬೆದರಿಕೆಯೊಡ್ಡಿ ಕಿರುಕುಳ ನೀಡುತ್ತಿದ್ದ ಶಿವಪ್ರಸಾದ್‌ ಸಜ್ಜನ್‌ ಎಂಬಾತನಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿ-ಸಿ 1ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
Vijaya Karnataka Web jail


10 ವರ್ಷಗಳ ಹಿಂದೆ ಈ ಪ್ರಕರಣ ದಾಖಲಾಗಿತ್ತ. 9 ವರ್ಷಗಳ ಹಿಂದೆ ನ್ಯಾಯಾಲಯದಲ್ಲಿವಿಚಾರಣೆ ಆರಂಭವಾಗಿತ್ತು. ಸುದೀರ್ಘ ವಿಚಾರಣೆಯ ಬಳಿಕ ಶಿವಪ್ರಸಾದ್‌ ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿಮಾಹಿತಿ ತಂತ್ರಜ್ಞಾನ ಕಾಯಿದೆಯ ಕಲಂ 67ರ ಅಡಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

2000ನೇ ಇಸವಿಯಲ್ಲಿಶಿವಪ್ರಸಾದ್‌ ಹಾಗೂ ಸಂತ್ರಸ್ತ ಯುವತಿ ನಗರದ ಖಾಸಗಿ ಕಾಲೇಜಿನಲ್ಲಿಟೆಲಿ ಕಮ್ಯುನಿಕೇಷನ್‌ ಕೋಸ್‌ರ್‍ ಮಾಡುತ್ತಿದ್ದರು. ಇಬ್ಬರು ಒಂದೇ ಕಾಲೇಜಿನಲ್ಲಿಓದುತ್ತಿದ್ದ ಕಾರಣ ಪರಿಚಯವಾಗಿತ್ತು. ತನ್ನ ಚಿಕ್ಕಪ್ಪನ ಮನೆಯಲ್ಲಿನೆಲೆಸಿದ್ದ ಯುವತಿ, ಶಿಕ್ಷಣ ಮುಗಿಸಿದ ಬಳಿಕ ನಗರದಲ್ಲಿಕೆಲಸ ಸಿಗದ ಕಾರಣ ತಂದೆಯ ಊರಾದ ದಿಲ್ಲಿಗೆ ಮರಳಿದ್ದಳು.

ಆದರೆ, ಆಕೆ ಬೆಂಗಳೂರು ಬಿಟ್ಟು ಹೋಗಿದ್ದಕ್ಕೆ ಕುಪಿತಗೊಂಡ ಶಿವಪ್ರಸಾದ್‌, ಆಕೆಯ ಚಿಕ್ಕಪ್ಪನ ಮನೆಗೆ ತೆರಳಿ ಗಲಾಟೆ ಮಾಡಿದ್ದ. ನನಗೆ ಮಾಹಿತಿ ನೀಡದೆ ಆಕೆ ಹೇಗೆ ಊರು ತೊರೆದಳು ಎಂದು ಜಗಳ ಮಾಡಿದ್ದ. ನಂತರ ಆಕೆಯ ಮತ್ತು ಪಾಲಕರ ದೂರವಾಣಿ ಸಂಖ್ಯೆ ಪಡೆದು ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ.

ಯುವತಿ ಲಂಡನ್‌ನಲ್ಲಿಕೆಲಸ ದೊರೆತ ಕಾರಣ ಅಲ್ಲಿಗೆ ಹೋಗಿದ್ದಳು. ಹೀಗಾಗಿ, ಆಕೆಯ ಇ ಮೇಲ್‌ ಐಡಿ ತಿಳಿದುಕೊಂಡ ಶಿವಪ್ರಸಾದ್‌, ನಗರದ ಖಾಸಗಿ ಸೈಬರ್‌ ಕಫೆಗಳಿಗೆ ತೆರಳಿ ಆಕೆಯ ಇ ಮೇಲ್‌ಗೆ ಅಶ್ಲೀಲ ಫೋಟೋಗಳು ಮತ್ತು ಸಂದೇಶಗಳನ್ನು ಕಳುಹಿಸಲು ಆರಂಭಿಸಿದ್ದ. ಶಿವಪ್ರಸಾದ್‌ ವರ್ತನೆಯಿಂದ ಬೇಸತ್ತ ಯುವತಿಯ ಚಿಕ್ಕಪ್ಪ, ಆತನ ಪಾಲಕರನ್ನು ಭೇಟಿ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ತಿಳಿಸಿದ್ದರು. ಅಲ್ಲದೇ, ಹಿರಿಯ ಪೊಲೀಸ್‌ ಅ-ಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದರು. ಆದರೂ, ಸರಿದಾರಿಗೆ ಬಾರದ ಶಿವಪ್ರಸಾದ್‌, ತನ್ನ ವರ್ತನೆ ಮುಂದುವರಿಸಿದ್ದ. ಈ ಹಿನ್ನೆಲೆಯಲ್ಲಿಯುವತಿ, ಕೋರಿಯರ್‌ ಮೂಲಕ ನೀಡಿದ ದೂರು ಆಧರಿಸಿ ಸಿಐಡಿ ಸೈಬರ್‌ ಕ್ರೈಂ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.

ಶಿವಪ್ರಸಾದ್‌ ಇ ಮೇಲ್‌ ಐಡಿಯಿಂದ ಬಂದಿದ್ದ ಅಶ್ಲೀಲ ಇ ಮೇಲ್‌ಗಳನ್ನು ಯುವತಿ, ಸಿಐಡಿ ಅ-ಕಾರಿಗಳಿಗೆ ಒದಗಿಸಿದ್ದಳು. ಪ್ರಕರಣದ ತನಿಖೆ ಮುಗಿಸಿದ ಪೊಲೀಸರು 2009ರ ಸೆಪ್ಟೆಂಬರ್‌ನಲ್ಲಿದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ