ಆ್ಯಪ್ನಗರ

3 ವರ್ಷಗಳ ಹಿಂದಿನ ಮನೆಗಳ್ಳತನ ಕೇಸ್‌ ಪತ್ತೆ, ಆರೋಪಿ ಬಂಧನ

ತಮಿಳುನಾಡಿನ ಹೊಸೂರು ಮೂಲದ ಆದಿಲ್‌ (23) ಬಂಧಿತ ಆರೋಪಿ. ಹೆಬ್ಬಾಳದ ಕನಕನಗರದಲ್ಲಿರುವ ಇಫ್ತಿಕಾರ್‌ ಅಹಮ್ಮದ್‌ ಎಂಬುವರ ಮನೆಯಲ್ಲಿ ಈತ ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka 19 Jul 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web arrest


ಮೂರು ವರ್ಷಗಳ ಹಿಂದೆ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಹೆಬ್ಬಾಳ ಪೊಲೀಸರು, 1 ಕಾರು ಮತ್ತು 30 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಹೊಸೂರು ಮೂಲದ ಆದಿಲ್‌ (23) ಬಂಧಿತ ಆರೋಪಿ. ಹೆಬ್ಬಾಳದ ಕನಕನಗರದಲ್ಲಿರುವ ಇಫ್ತಿಕಾರ್‌ ಅಹಮ್ಮದ್‌ ಎಂಬುವರ ಮನೆಯಲ್ಲಿ ಈತ ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇಫ್ತಿಕಾರ್‌ ಅವರು ಕುಟುಂಬ ಸಮೇತ ರಂಜಾನ್‌ ಹಬ್ಬ ಆಚರಣೆಗಾಗಿ ಹರಿದ್ವಾರಕ್ಕೆ 2016ರ ಜು.6ರಂದು ಹೋಗಿದ್ದರು. ವಾಪಸ್‌ ಜು.21ರಂದು ಬಂದು ನೋಡಿದಾಗ ಮನೆ ಮುಂದೆ ನಿಲ್ಲಿಸಿದ್ದ ಕಾರು ಇರಲಿಲ್ಲ. ಬಾಗಿಲು ತೆಗೆದು ಮನೆಯೊಳಗೆ ನೋಡಿದಾಗ ಚಿನ್ನಾಭರಣ, ಲ್ಯಾಪ್‌ಟಾಪ್‌, ಕ್ಯಾಮೆರಾ ಮತ್ತು ಕಾರಿನ ಕೀಲಿ ಕೂಡ ಇರಲಿಲ್ಲ. ಈ ಸಂಬಂಧ ಅವರು ಹೆಬ್ಬಾಳ ಠಾಣೆಗೆ ದೂರು ನೀಡಿದ್ದರು.

ನಿಂತಿದ್ದ ಕಾರಿನಿಂದ ಪತ್ತೆ

ಕಳ್ಳತನ ಮಾಡಿಕೊಂಡು ಹೋಗಿದ್ದ ಕಾರನ್ನು ಆರೋಪಿ ಆದಿಲ್‌, ತನ್ನ ಮನೆ ಮುಂದೆ ನಿಲ್ಲಿಸಿಕೊಂಡಿದ್ದ. ಕಳೆದ ಮೂರು ವರ್ಷಗಳಿಂದ ಬಳಕೆ ಮಾಡುತ್ತಿರಲಿಲ್ಲ. ಈ ಕುರಿತು ಹೆಬ್ಬಾಳ ಪೊಲೀಸರಿಗೆ ಖಚಿತ ಮೂಲಗಳಿಂದ ಮಾಹಿತಿ ಲಭಿಸಿತ್ತು. ಆರೋಪಿ ಮನೆಗೆ ತೆರಳಿದ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೂರು ವರ್ಷಗಳ ಹಿಂದಿನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ ಸುಮಾರು 9 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ