ಆ್ಯಪ್ನಗರ

ಆಫ್ರಿಕಾ ಪ್ರಜೆಗಳ ಬಂಧನ

ಯಲಹಂಕ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಆಫ್ರಿಕಾ ಸೇರಿದಂತೆ ನಾನಾ ದೇಶಗಳ ವಿದೇಶಿ ಪ್ರಜೆಗಳು ಬಂಧನಕ್ಕೆ ಒಳಗಾಗಿದ್ದಾರೆ. ಶಿಕ್ಷಣ, ವ್ಯಾಪಾರ, ಪ್ರವಾಸ ವೀಸಾದಡಿ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಇವರು, ವೀಸಾ ಅವಧಿ ಮುಗಿದಿದ್ದರೂ ತಮ್ಮ ದೇಶಕ್ಕೆ ಹಿಂತಿರುಗಿರಲಿಲ್ಲ.

Vijaya Karnataka 17 Jun 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web african citizens arrested
ಆಫ್ರಿಕಾ ಪ್ರಜೆಗಳ ಬಂಧನ


ವೀಸಾ ಅವಧಿ ಮುಗಿದಿದ್ದರೂ ನಿಯಮಬಾಹಿರವಾಗಿ ನಗರದಲ್ಲೇ ನೆಲೆಸುವ ಮೂಲಕ ಕಾನೂನು ವಿರೋಧಿ ಚಟುವಟಿಕೆ ನಡೆಸುತ್ತಿದ್ದವರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ನಗರ ಪೊಲೀಸರು, ಈ ಸಂಬಂಧ ಶನಿವಾರ 12 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಯಲಹಂಕ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಆಫ್ರಿಕಾ ಸೇರಿದಂತೆ ನಾನಾ ದೇಶಗಳ ವಿದೇಶಿ ಪ್ರಜೆಗಳು ಬಂಧನಕ್ಕೆ ಒಳಗಾಗಿದ್ದಾರೆ. ಶಿಕ್ಷಣ, ವ್ಯಾಪಾರ, ಪ್ರವಾಸ ವೀಸಾದಡಿ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಇವರು, ವೀಸಾ ಅವಧಿ ಮುಗಿದಿದ್ದರೂ ತಮ್ಮ ದೇಶಕ್ಕೆ ಹಿಂತಿರುಗಿರಲಿಲ್ಲ. ವೀಸಾ ನವೀಕರಣಗೊಳಿಸಿಕೊಂಡಿರಲೂ ಇಲ್ಲ ಎನ್ನುವುದು ಬಂಧಿತರ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಈ ಬಗ್ಗೆ ಎಫ್‌ಆರ್‌ಆರ್‌ಓ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಅವರು ಕೊಟ್ಟ ದಾಖಲೆಗಳು ಹಾಗೂ ಮಾಹಿತಿ ಆಧರಿಸಿ ವಿಶೇಷ ಕಾರ್ಯಾಚರಣೆ ನಡೆಸಿದ ಯಲಹಂಕ ಪೊಲೀಸರು, ಶನಿವಾರ ರಾತ್ರಿ ಅವರು ನೆಲೆಸಿದ್ದ ಸುಮಾರು 35 ಬಾಡಿಗೆ ಮನೆಗಳ ಮೇಲೆ ದಾಳಿ ನಡೆಸಿದ್ದರು.

ಆ ಮನೆಗಳಲ್ಲಿ ಇದ್ದವರೆಲ್ಲರ ದಾಖಲೆಗಳನ್ನು ಪರಿಶೀಲಿಸಿದಾಗÜ 12 ಮಂದಿ ಕಾನೂನು ಉಲ್ಲಂಘಿಸಿ ನೆಲೆಸಿರುವುದು ಬೆæಳಕಿಗೆ ಬಂದಿತ್ತು. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ