ಆ್ಯಪ್ನಗರ

ವಿಮಾನ ನಿಲ್ದಾಣದ ಡಿಜಿಟಲೀಕರಣಕ್ಕೆ ಸೀಮೆನ್ಸ್‌ ಒಪ್ಪಂದ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಡಿಜಿಟಲ್‌ ವ್ಯವಸ್ಥೆ ಅಳವಡಿಸಲು ಸೀಮೆನ್ಸ್‌ ಪೋಸ್ಟಲ್‌, ಪಾರ್ಸಲ್‌ ಆ್ಯಂಡ್‌ ಏರ್‌ಪೋರ್ಟ್‌ ಲಾಜಿಸ್ಟಿಕ್ಸ್‌ (ಎಸ್‌ಪಿಪಿಎಎಲ್‌) ಜತೆಗೆ ವಿಮಾನ ನಿಲ್ಡಾಣ ಆಡಳಿತ ಮಂಡಳಿ ಒಪ್ಪಂದ ಮಾಡಿಕೊಂಡಿವೆ.

Vijaya Karnataka 15 Sep 2018, 5:00 am
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಡಿಜಿಟಲ್‌ ವ್ಯವಸ್ಥೆ ಅಳವಡಿಸಲು ಸೀಮೆನ್ಸ್‌ ಪೋಸ್ಟಲ್‌, ಪಾರ್ಸಲ್‌ ಆ್ಯಂಡ್‌ ಏರ್‌ಪೋರ್ಟ್‌ ಲಾಜಿಸ್ಟಿಕ್ಸ್‌ (ಎಸ್‌ಪಿಪಿಎಎಲ್‌) ಜತೆಗೆ ವಿಮಾನ ನಿಲ್ಡಾಣ ಆಡಳಿತ ಮಂಡಳಿ ಒಪ್ಪಂದ ಮಾಡಿಕೊಂಡಿವೆ.
Vijaya Karnataka Web agreement between kial and seemens
ವಿಮಾನ ನಿಲ್ದಾಣದ ಡಿಜಿಟಲೀಕರಣಕ್ಕೆ ಸೀಮೆನ್ಸ್‌ ಒಪ್ಪಂದ


ಬ್ಯಾಗೇಜ್‌ ಹ್ಯಾಂಡ್ಲಿಂಗ್‌, ನಿರ್ವಹಣೆ ಸೇರಿದಂತೆ ವಿಮಾನ ನಿಲ್ದಾಣದಲ್ಲಿನ ನಾನಾ ಸೇವೆಗಳು ಮತ್ತು ಪೂರೈಕೆದಾರರ ವಿನಿಮಯ ನಡೆಸುವವರ ನಡುವೆ ಮಾಹಿತಿ ವಿನಿಮಯ, ಡೇಟಾ ಸಂಗ್ರಹ, ಇಂಟರ್ನೆಟ್‌ ಅಪ್ಲಿಕೇಷನ್‌ ಮತ್ತಿತರ ಕಾರ್ಯಗಳ ಡಿಜಿಟಲೀಕರಣಕ್ಕೆ ಸೀಮೆನ್ಸ್‌ ನೆರವು ನೀಡಲಿದೆ.

''ದಕ್ಷತೆ ಹೆಚ್ಚಿಸಿ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡುವುದಕ್ಕೆ ಡಿಜಿಟಲೀಕರಣ ನೆರವಾಗಲಿದೆ',' ಎಂದು ಎಸ್‌ಪಿಪಿಎಎಲ್‌ ಸಿಇಒ ಮೈಕೆಲ್‌ ರೈಚ್ಲೆ ತಿಳಿಸಿದರು.

''ಹೊಸ ಸೇವೆಗಳನ್ನು ಪರಿಚಯಿಸಿ ಭವಿಷ್ಯದ ತಂತ್ರಜ್ಞಾನದ ಅನುಭವವನ್ನು ಪ್ರಯಾಣಿಕರಿಗೆ ನೀಡುವ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ,'' ಎಂದು ಕೆಐಎ ಸಿಇಒ ಹರಿ ಮರಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ