ಆ್ಯಪ್ನಗರ

ಈಶಾನ್ಯ ಭಾರತ ವಿದ್ಯಾರ್ಥಿ ಮೇಲೆ ಹಲ್ಲೆ: ಮೊಬೈಲ್‌ ದರೋಡೆ

ಈಶಾನ್ಯ ಭಾರತ ಮೂಲದ ಕಾಲೇಜು ವಿದ್ಯಾರ್ಥಿ ಮೇಲೆ ಹಾಡಹಗಲೇ ಹಲ್ಲೆ ಮಾಡಿದ ದುಷ್ಕರ್ಮಿಗಳು ಮೊಬೈಲ್‌ ಫೋನ್‌ ದೋಚಿದ್ದಾರೆ.

Vijaya Karnataka 10 Jan 2019, 5:00 am
ಬೆಂಗಳೂರು : ಈಶಾನ್ಯ ಭಾರತ ಮೂಲದ ಕಾಲೇಜು ವಿದ್ಯಾರ್ಥಿ ಮೇಲೆ ಹಾಡಹಗಲೇ ಹಲ್ಲೆ ಮಾಡಿದ ದುಷ್ಕರ್ಮಿಗಳು ಮೊಬೈಲ್‌ ಫೋನ್‌ ದೋಚಿದ್ದಾರೆ.
Vijaya Karnataka Web attack on north east student
ಈಶಾನ್ಯ ಭಾರತ ವಿದ್ಯಾರ್ಥಿ ಮೇಲೆ ಹಲ್ಲೆ: ಮೊಬೈಲ್‌ ದರೋಡೆ


ಸೇಂಟ್‌ ಜೋಸೆಫ್ಸ್‌ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಮಣಿಪುರ ಮೂಲದ ಸೀಲೆನ್‌ತಾಂಗ್‌ ಕೋಮ್‌ (20) ಹಲ್ಲೆಗೊಳಗಾದವರು. ಜ.3ರಂದು ಬೆಳಗ್ಗೆ 8.45ರ ಸುಮಾರಿಗೆ ಆಸ್ಟಿನ್‌ಟೌನ್‌ ಬಸ್‌ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಘಟನೆ ಕುರಿತು ಮಾತನಾಡಿದ ಕೋಮ್‌ ಸಹೋದರ ಸಂಬಂಧಿ, ''ಬಸ್‌ ನಿಲ್ದಾಣದ ಎದುರಿನಲ್ಲೇ ಕೋಮ್‌ ಮೇಲೆ ಹಲ್ಲೆ ನಡೆದಿದ್ದು, ಯಾರೊಬ್ಬರೂ ನೆರವಿಗೆ ಧಾವಿಸಿಲ್ಲ. ಬಲ ಕಿವಿಗೆ ಬಲವಾಗಿ ಹೊಡೆದ ಕಾರಣ 2 ದಿನ ಸರಿಯಾಗಿ ಕಿವಿ ಕೇಳಿಸಿಲ್ಲ. ಹೊರ ರಾಜ್ಯದಿಂದ ಬಂದ ನಾವು ಇಂತಹ ಘಟನೆ ನಿರೀಕ್ಷಿಸಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ'' ಎಂದರು.

''ಗಾಯಾಳು ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಗಂಭೀರವಾದ ಗಾಯಗಳು ಆಗಿಲ್ಲ. ಹಲ್ಲೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು'' ಎಂದು ಅಶೋಕ ನಗರ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ