ಆ್ಯಪ್ನಗರ

ಬೆಳ್ಳಂಬೆಳಗ್ಗೆ ಇಬ್ಬರು ರೌಡಿಗಳ ಕಾಲಿಗೆ ಗುಂಡು ತೂರಿಸಿದ ಬೆಂಗಳೂರು ಪೊಲೀಸರು!

ಎರಡು ಕೊಲೆ ಮತ್ತು ಇತರ ಐದಾರು ಗಂಭೀರ ಪ್ರಕರಣಗಳ ಪ್ರಮುಖ ಆರೋಪಿಗಳಾದ ಸತೀಶ್‌ ಮತ್ತು ಹಂದಿ ಮಹೇಶ್‌ ಅವರ ಕಾಲುಗಳಿಗೆ ಸೋಮವಾರ ಬೆಳಗ್ಗೆ ಮೈಕೋಲೇಔಟ್‌ನ ಪೊಲೀಸರು ಕಾಡತೂಸು ನುಗ್ಗಿಸಿದ್ದಾರೆ. ಶರಣಾಗಲು ತಿರಸ್ಕರಿಸಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾದಾಗ ಪೊಲೀಸರು ಗುಂಡು ಹಾರಿಸಿದ್ದಾರೆ.

Vijaya Karnataka Web 13 Jan 2020, 8:29 am
ಬೆಂಗಳೂರು: ನಗರದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಇಬ್ಬರು ರೌಡಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಎರಡು ಕೊಲೆ ಮತ್ತು ಇತರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ರೌಡಿ ಶೀಟರ್‌ಗಳಾದ ಹಂದಿ ಮಹೇಶ್‌ ಮತ್ತು ಸತೀಶ್‌ ಮೇಲೆ ಮೈಕೋ ಲೇಔಟ್‌ನಲ್ಲಿ ಸಿಸಿಬಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
Vijaya Karnataka Web Bangalore CCB Police


ಸ್ವರಕ್ಷಣೆಗಾಗಿ ಇಬ್ಬರು ರೌಡಿಗಳ ಮೇಲೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ. ಬಿಟಿಎಂ ಕೆರೆಯ ಹತ್ತಿರ ಪೊಲೀಸರ ಕಣ್ಣಿಗೆ ಬಿದ್ದ ಸತೀಶ್‌ ಮತ್ತು ಹಂದಿ ಮಹೇಶ್‌ಗೆ ಶರಣಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸ್ವರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಇಬ್ಬರು ರೌಡಿಗಳ ಕಾಲುಗಳಿಗೆ ಗಾಯವಾಗಿದ್ದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಬಳಸುತ್ತಿದ್ದ ಸ್ವಿಫ್ಟ್‌ ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಹಂದಿ ಮಹೇಶ್‌ ಎರಡು ಕೊಲೆ ಪ್ರಕರಣಗಳನ್ನು ಎದುರಿಸುತ್ತಿದ್ದು, 29 ವರ್ಷದ ಸತೀಶ್‌ ಐದು ಅಪರಾಧ ಪ್ರಕರಣಗಳಲ್ಲಿ ಬಾಗಿಯಾಗಿದ್ದಾನೆ.

ಬೆಂಗ್ಳೂರಿಂದ ಗಡಿಪಾರಾದವರು ಬಾಂಗ್ಲಾದಿಂದ ಮತ್ತೆ ವಾಪಾಸ್‌!

ಆಸ್ಪತ್ರೆಗೆ ಆಗಮಿಸಿದ ಪೊಲೀಸ್‌ ಪೇದೆ ಸಂಗೀತಾ ಎಸ್‌ ಹಲಿಮನಿ ಅವರಿಗೆ ಮಗುವನ್ನು ನೋಡಿದ ತಕ್ಷಣ ಅವರ 10 ತಿಂಗಳ ಮಗಳು ನೆನಪಿಗೆ ಬಂದಿದ್ದಾಳೆ. ತಕ್ಷಣ ಎದೆ ಹಾಲುಣಿಸಿ, ಸ್ವಂತ ಅಮ್ಮನಂತೆ ಆರೈಕೆ ಮಾಡಿದ್ದಾರೆ. ಮುಂದೆ ಓದಿ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ