ಆ್ಯಪ್ನಗರ

ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಪರಿಚಯ; ಮದುವೆಯಾಗಿ ನಂಬಿಸಿ ಬರೋಬ್ಬರಿ 25.25 ಲಕ್ಷ ದೋಚಿದ ಖದೀಮ ಅಂದರ್‌!

ಶಾದಿ ಡಾಟ್‌ ಕಾಮ್‌ನಲ್ಲಿ ಪರಿಚಯವಾಗಿ ಮದುವೆಯಾಗುತ್ತೇನೆ ಎಂದು ನಂಬಿಸಿ ಬರೋಬ್ಬರಿ 25.25 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮಹಿಳೆಯ ದೂರಿನ ಮೇರೆಗೆ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ. ಆತ ಇದೆ ರೀತಿ ಹಲವು ಮಹಿಳೆಯರು ಹಾಗೂ ಯುವತಿಯರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

Vijaya Karnataka Web 28 Nov 2020, 3:23 pm
ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿ ಹಣ ದೋಚುವ ಪ್ರಕರಣಗಳು ಆಗಾಗೇ ಬೆಳಕಿಗೆ ಬರುತ್ತಲೇ ಇದೆ. ಇದೀಗ ಬೆಂಗಳೂರು ಮೂಲದ ಮಹಿಳೆಯೊಬ್ಬರಿಗೆ ಮದುವೆ ಹೆಸರಿನಲ್ಲಿ ಖತರ್ನಾಕ್‌ ಖದೀಮನೊಬ್ಬ ಬರೋಬ್ಬರಿ 25.25 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ವಂಚಿಸಿದ ಆರೋಪಿಯನ್ನು ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.
Vijaya Karnataka Web ccb police arrested


ಘಟನೆ ಹಿನ್ನೆಲೆ ಏನು?
ಒಂದು ತಿಂಗಳ ಹಿಂದೆ ಶಾದಿ ಡಾಟ್‌ ಕಾಮ್‌ನಲ್ಲಿ ಮಹಿಳೆಯೊಬ್ಬರಿಗೆ ಸ್ವೈನ್‌ ರಾಜ್‌ ಕಿಶೋರ್‌ ಎಂಬಾತನ ಪರಿಚಯವಾಗಿದೆ. ತಾನು ಸಿವಿಲ್‌ ಇಂಜಿನಿಯರ್‌ ಎಂದು ಪುಂಗಿ ಬಿಟ್ಟು ಮಹಿಳೆಯನ್ನು ಮದುವೆಯಾಗುವುದಾಗಿ ಈತ ಭರವಸೆ ಕೊಟ್ಟಿದ್ದಾನೆ. ಹೀಗೆ ಇವರ ಸಂಪರ್ಕ ಇನ್ನಷ್ಟು ಗಟ್ಟಿಯಾಗಿದ್ದು ಫೋನ್‌, ವಿಡಿಯೋ ಕಾಲ್‌ ಹೀಗೆ ಇಬ್ಬರು ಮಾತನಾಡುತ್ತಿದ್ದರು. ಹೀಗೆ ಮಾತು ಸಂಬಂಧ ಮುಂದುವರಿಯುತ್ತಿದ್ದಂತೆ. ಸ್ವೈನ್‌ ರಾಜ್‌ ಕಿಶೋರ್‌ ಕೆಲಸದ ನಿಮಿತ್ತ ಮಲೇಷಿಯಾಗೆ ಹೋಗಲಿದ್ದೇನೆ ನಿಮಗೆ ಗಿಫ್ಟ್‌ ತರುತ್ತೇನೆ ಎಂದು ಮಹಿಳೆಯ ಬಳಿ ಹೇಳಿದ್ದಾನೆ.

ನಂತರ ನಾಟಕವಾಡಿದ ಈತ ತಾನು ಮಲೇಶಿಯಾದಲ್ಲಿದ್ದೇನೆ ಆದರೆ ತನ್ನ ಅಕೌಂಟ್‌ ಸೆಕ್ಯೂರಿಟಿ ಕಾರಣಕ್ಕೆ ಸ್ಥಗಿತಗೊಂಡಿದೆ. ಕಾಮಗಾರಿಯ ವಸ್ತುಗಳನ್ನು ಖರೀದಿಸಲು ಅಗತ್ಯವಾಗಿ ಹಣ ಬೇಕಿದೆ ಎಂದು ಮಹಿಳೆ ಬಳಿ ಕತೆ ಕಟ್ಟಿದ್ದಾನೆ. ಇದನ್ನು ನಂಬಿದ ಮಹಿಳೆ, ರಾಜ್‌ ಕಿಶೋರ್‌ ನೀಡಿದ ಆತನ ಗೆಳೆಯನ ಅಕೌಂಟ್‌ಗೆ 25.25 ಲಕ್ಷ ಹಣ ಕಳುಹಿಸಿಕೊಟ್ಟಿದ್ದಾಳೆ. ಹೀಗೆ ಹಣ ಕಳುಹಿಸಿದ ನಂತರ ಆತನ ಫೋನ್‌, ಸಾಮಾಜಿಕ ಜಾಲತಾಣವೆಲ್ಲವೂ ಬ್ಲಾಕ್‌ ಆಗಿ ಬಿಟ್ಟಿದೆ.

ತಾನು ಮೋಸ ಹೋಗಿರುವುದು ತಿಳಿದ ಮಹಿಳೆ ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯ ಎಲ್ಲಾ ಮಾಹಿತಿ ಕಲೆ ಹಾಕಿದ ಪೊಲೀಸರು ತಂಡ ರಚಿಸಿ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ. ಹೀಗಿರುವಾಗ ದೆಹಲಿಯಲ್ಲಿ ಆರೋಪಿಯ ಜಾಡು ಸಿಕ್ಕಿದೆ. ಈ ಹಿನ್ನೆಲೆ ನವೆಂಬರ್‌ 23ರಂದು ದೆಹಲಿಗೆ ತೆರಳಿದ ಪೊಲೀಸರು ಆತನನ್ನು ಅರೆಸ್ಟ್‌ ಮಾಡಿಕೊಂಡು ಬಂದಿದ್ದಾರೆ.

ಮನೆ ಮುಂದೆ ToLet ಬೋರ್ಡ್‌ ಹಾಕುವ ಮುನ್ನ ಎಚ್ಚರ..! ಚಾಲಾಕಿ ಕಳ್ಳಿ ಸುಮ್ನೆ ಬಿಡಲ್ಲ..!

ಅಲ್ಲದೇ ಆತನ ನಿಜ ಹೆಸರು ಬ್ರೈಟ್‌ ಬಿನ್ ಮುದಖಾಸ್‌ ಎಂದು ತಿಳಿದುಬಂದಿದೆ. ಸದ್ಯ ಆತನನ್ನು ಬೆಂಗಳೂರಿಗೆ ಕರೆತಂದಿರುವ ಪೊಲೀಸರಿಗೆ ಬೆಚ್ಚಿಬೀಳಿಸುವ ಮಾಹಿತಿ ಲಭ್ಯವಾಗಿದೆ. ಆತನ ಹಿಂದೆ ದೊಡ್ಡ ಜಾಲ ಇದೆ ಎಂದು ತಿಳಿದಿದೆ. ಇದೇ ರೀತಿ ವೈವಾಹಿಕ ಜಾಲತಾಣದಲ್ಲಿ ಅನೇಕ ಮಹಿಳೆ, ಯುವತಿಯರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಆತನಿಂದ 8 ಲಕ್ಷ ಹಣ ಹಾಗೂ ಫೋನ್‌, ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ