ಆ್ಯಪ್ನಗರ

ಕಂಠಪೂರ್ತಿ ಕುಡಿದಿದ್ದ ಗೆಳತಿ ಮೇಲೆ ಅತ್ಯಾಚಾರವೆಸಗಿದ ಗೆಳೆಯರಿಬ್ಬರ ಬಂಧನ

ಕಂಠಮಟ್ಟ ಕುಡಿದಿದ್ದ ಗೆಳತಿಯ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ಸಂತ್ರಸ್ತೆಯ ಇಬ್ಬರು ಗೆಳೆಯರನ್ನು ಬಂಧಿಸಿದ್ದಾರೆ.

Vijaya Karnataka Web 21 Jan 2020, 11:39 am
ಬೆಂಗಳೂರು: ಕಂಠಮಟ್ಟ ಕುಡಿದಿದ್ದ ಗೆಳತಿಯ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ಸಂತ್ರಸ್ತೆಯ ಇಬ್ಬರು ಗೆಳೆಯರನ್ನು ಬಂಧಿಸಿದ್ದಾರೆ.
Vijaya Karnataka Web bengaluru


ಕೇರಳ ಮೂಲದ ನಿಖಿಲ್‌(19) ಹಾಗೂ ಅಭಿನವ್‌(22) ಬಂಧಿತ ಆರೋಪಿಗಳು. ಜ.15ರಂದು ಪಬ್‌ನಲ್ಲಿ ಪಾರ್ಟಿ ಮಾಡಿದ ಬಳಿಕ ವಿಪರೀತ ನಶೆಯಲ್ಲಿದ್ದ ಗೆಳತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಈಕೆಯ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಒಬ್ಬರಾದ ಬಳಿಕ ಒಬ್ಬರು ಅತ್ಯಾಚಾರ ಎಸಗಿದ್ದಾಗಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇರೆಗೆ ಕ್ರಮ ಕೈಗೊಂಡ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಪ್ಪಿಸಿದ್ದಾರೆ.

ನಡೆದದ್ದೇನು?
ಯುವತಿ ಜತೆ ಆತ್ಮೀಯವಾಗಿದ್ದ ನಿಖಿಲ್‌, ತಾನೇ ಆಕೆಯನ್ನು ಪಬ್‌ಗೆ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿದ ಬಳಿಕ ಲೊಟ್ಟಗೊಲ್ಲ ಹಳ್ಳಿಯ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಇವರ ಜತೆಗೆ ಅಭಿನವ್‌ ಕೂಡ ಬಂದಿದ್ದ. ನಶೆ ಹೆಚ್ಚಾಗಿದ್ದರಿಂದ ಯುವತಿ ಸೀದಾ ಹೋಗಿ ಮಲಗಿ ಬಿಟ್ಟರು. ಬಳಿಕ ಆಕೆಯ ಮೇಲೆ ಮೊದಲು ನಿಖಿಲ್‌ ಅತ್ಯಾಚಾರ ಎಸಗಿದ್ದ. ಬಳಿಕ ಅಭಿನವ್‌ ಕೂಡ ಅತ್ಯಾಚಾರ ಮಾಡಿದ್ದ. ಅತ್ಯಾಚಾರದ ಬಳಿಕ ಅಭಿನವ್‌, ಸಂತ್ರಸ್ತೆ ಪಕ್ಕದಲ್ಲೇ ಮಲಗಿಬಿಟ್ಟಿದ್ದ. ಬೆಳಗ್ಗೆ ಎಚ್ಚರವಾದಾಗ ಸಂತ್ರಸ್ತೆಗೆ ಅರಿವಾಗಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು. ಮದ್ಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಎಸಗಲಾಗಿದೆ ಎಂದು ದೂರಿದ್ದರು. ಈ ದೂರಿನ ಆಧಾರದಲ್ಲಿಇಬ್ಬರೂ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ