ಆ್ಯಪ್ನಗರ

ಪ್ರೇಯಸಿಗಾಗಿ ಬೈಕ್‌ ಕದಿಯುತ್ತಿದ್ದವ ಬಂಧನ

ಜಾಲಿ ರೈಡ್‌ ಮತ್ತು ಮೋಜಿನ ಜೀವನಕ್ಕಾಗಿ ಬೈಕ್‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 8 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

Vijaya Karnataka 5 Oct 2018, 9:02 am
ಬೆಂಗಳೂರು: ಜಾಲಿ ರೈಡ್‌ ಮತ್ತು ಮೋಜಿನ ಜೀವನಕ್ಕಾಗಿ ಬೈಕ್‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 8 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
Vijaya Karnataka Web accused arrested


ಬೊಮ್ಮನಹಳ್ಳಿಯ ಕಾರ್ತಿಕ್‌ ಅಲಿಯಾಸ್‌ ಕಾಕ(26) ಬಂಧಿತ.

ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಕಾರಣ, ಕಾರ್ತಿಕ್‌ನಿಂದ ಪತ್ನಿ ದೂರವಾಗಿದ್ದಳು. ಹೀಗಾಗಿ, ಆರೋಪಿ ಮತ್ತೊಬ್ಬ ಯುವತಿಯನ್ನು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಜಾಲಿರೈಡ್‌ ಹೋಗಲು ಪಲ್ಸರ್‌ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ . ಒಮ್ಮೆ ಹೋದ ಬೈಕ್‌ನಲ್ಲಿ ಮತ್ತೆ ಹೋಗಲು ಪ್ರೇಯಸಿ ಇಷ್ಟ ಪಡುತ್ತಿರಲಿಲ್ಲ. ಅದರಲ್ಲೂ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ಗಳಲ್ಲಿ ಸುತ್ತಾಡಲು ಆಸೆ ಪಡುತ್ತಿದ್ದಳು. ಆಕೆಯ ಆಸೆಯನ್ನು ಈಡೇರಿಸಲು ಪಲ್ಸರ್‌ಗಳನ್ನೇ ಕದ್ದು ಲಾಂಗ್‌ ರೈಡ್‌ ಹೋಗುತ್ತಿದ್ದೆ ಎಂದು ಆರೋಪಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ