ಆ್ಯಪ್ನಗರ

ಬೈಕ್‌ ಕಳ್ಳರ ಬಂಧನ

ಮನೆ ಮುಂದೆ ಪಾರ್ಕಿಂಗ್‌ ಮಾಡಿದ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಅವರಿಂದ 5 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

Vijaya Karnataka 18 Aug 2018, 5:00 am
ಬೆಂಗಳೂರು: ಮನೆ ಮುಂದೆ ಪಾರ್ಕಿಂಗ್‌ ಮಾಡಿದ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಅವರಿಂದ 5 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
Vijaya Karnataka Web bike theft


ಮಾಗಡಿ ಮುಖ್ಯ ರಸ್ತೆ ಮಾಚೋಹಳ್ಳಿ ನಿವಾಸಿ ರವಿಕಿರಣ್‌(24) ಮತ್ತು ಹಾರೋಹಳ್ಳಿಯ ರಾಜೀವ್‌ ಕುಮಾರ್‌(21) ಬಂಧಿತರು. ಇವರ ಬಂಧನದಿಂದ ನಗರದ ವಿವಿಧ ಠಾಣೆಗಳ 11 ಪ್ರಕರಣಗಳು ಪತ್ತೆಯಾಗಿವೆ.

ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ರವಿಕಿರಣ್‌ಗೆ ರಾಜೀವ್‌ ಕುಮಾರ್‌ ಪರಿಚಯವಿದ್ದು. ಹಣ ಮಾಡುವ ಆಸೆಗೆ ಬಿದ್ದ ಅವರಿಬ್ಬರು ಜತೆ ಸೇರಿಕೊಂಡು ವಾಹನ ಕಳ್ಳತನಕ್ಕೆ ಇಳಿಸಿದ್ದರು. ದುಬಾರಿ ಬೆಲೆಯ ಕೆಟಿಎಂ ಡ್ಯೂಕ್‌, ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಹೆಚ್ಚಾಗಿ ಕದಿಯುತ್ತಿದ್ದರು. ಕದ್ದ ಬೈಕ್‌ ಅನ್ನು ಮಾಚೋಹಳ್ಳಿಯ ರವಿಕಿರಣ್‌ ಮನೆ ಸಮೀಪದ ಮಳಿಗೆಯೊಂದಕ್ಕೆ ತೆಗೆದುಕೊಂಡು ಹೋಗಿ ನಂಬರ್‌ ಪ್ಲೇಟ್‌ ಬದಲಾಯಿಸುವ ಜತೆಗೆ ಸಂಪೂರ್ಣವಾಗಿ ನವೀಕರಣ ಮಾಡುತ್ತಿದ್ದರು. ಬಳಿಕ ಪೊಲೀಸರು ಜಪ್ತಿ ಮಾಡಿದ ಬೈಕ್‌ಗಳೆಂದು ಹೇಳಿ ಕಡಿಮೆ ಬೆಲೆ ಮಾರುತ್ತಿದ್ದರು. ದುಬಾರಿ ಬೈಕ್‌ ಕಡಿಮೆಗೆ ಸಿಗುವ ಕಾರಣ ಜನ ಅವುಗಳನ್ನು ಖರೀದಿ ಮಾಡುತ್ತಿದ್ದರು. ಕಳ್ಳತನದ ಹಣದಲ್ಲಿ ಅವರಿಬ್ಬರೂ ಮೋಜಿನ ಜೀವನ ಮಾಡುತ್ತಿದ್ದರು.

ಹಳೇ ಆರೋಪಿ: ಬೈಕ್‌ ಕಳ್ಳತನ ಪ್ರಕರಣದಲ್ಲಿ ಈ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ರವಿಕಿರಣ್‌ನನ್ನು ಬಂಧಿಸಿದ್ದರು. ಕೆಲವೇ ತಿಂಗಳಲ್ಲಿ ಜಾಮೀನಿನ ಮೇಲೆ ಹೊರ ಬಂದ ಆತ ಹಳೆ ಚಾಳಿ ಮುಂದುವರಿಸಿದ್ದ. ಬೈಕ್‌ ಕಳ್ಳತನವಾದ ಬಗ್ಗೆ ವ್ಯಕ್ತಿಯೊಬ್ಬರು ಇತ್ತೀಚೆಗೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿ ತುಮಕೂರು ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ರವಿಕಿರಣ್‌ನಿಂದ ಖರೀದಿಸಿರುವುದು ಗೊತ್ತಾಗಿದೆ. ಆತ ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ