ಆ್ಯಪ್ನಗರ

ಇಂದಿರಾ ನಗರ ಮೆಟ್ರೋ ನಿಲ್ದಾಣದಲ್ಲಿ ಬ್ಲೂಟೂತ್‌ ಪತ್ತೆ

ಇಂದಿರಾ ನಗರ ಮೆಟ್ರೊ ನಿಲ್ದಾಣದಲ್ಲಿ ಬ್ಲೂಟೂತ್‌ ಬೀಕಾನ್‌ ಉಪಕರಣ ಪತ್ತೆಯಾಗಿದ್ದು, ಈ ಸಂಬಂಧ ನಿಲ್ದಾಣದ ಸೆಕ್ಯುರಿಟಿ ಗಾರ್ಡ್‌ ವಿರುದ್ಧ ಇಂದಿರಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 17 Jul 2018, 11:27 am
ಬೆಂಗಳೂರು: ಇಂದಿರಾ ನಗರ ಮೆಟ್ರೊ ನಿಲ್ದಾಣದಲ್ಲಿ ಬ್ಲೂಟೂತ್‌ ಬೀಕಾನ್‌ ಉಪಕರಣ ಪತ್ತೆಯಾಗಿದ್ದು, ಈ ಸಂಬಂಧ ನಿಲ್ದಾಣದ ಸೆಕ್ಯುರಿಟಿ ಗಾರ್ಡ್‌ ವಿರುದ್ಧ ಇಂದಿರಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web bluetooth


ಜು.14ರಂದು ಬೆಳಗ್ಗೆ 4.48ರ ಸುಮಾರಿಗೆ ನಿಲ್ದಾಣದ 2ನೇ ಪ್ಲಾಟ್‌ಫಾರಂನಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಕೆಳಗೆ ಬ್ಲೂತ್‌ ಇರುವುದು ಭದ್ರತಾ ಸಿಬ್ಬಂದಿ ದೇವಯ್ಯ ಎಂಬುವರು ಪರಿಶೀಲನೆ ಮಾಡುವಾಗಿ ಪತ್ತೆಯಾಗಿದೆ. ಅದನ್ನು ತೆಗೆದುಕೊಂಡು ಸಿಸಿ ಕ್ಯಾಮೆರಾದಲ್ಲಿ ಪರಿಶೀಲನೆ ನಡೆಸಿದಾಗ ಡೆಲ್ಟಾ ಸರ್ವಿಸಸ್‌ನ ಸೆಕ್ಯುರಿಟಿ ಗಾರ್ಡ್‌ ಸರುಣ್‌ ಎಂಬಾತ ಅದನ್ನು ಅಂಟಿಸಿರುವುದು ಗೊತ್ತಾಗಿದೆ. ಈ ಸಂಬಂಧ ಸೆಕ್ಯುರಿಟಿ ಸಂಸ್ಥೆಯ ಮೇಲ್ವಿಚಾರಕ ಫಾರೂಕ್‌ ಹುಸೇನಿ ಎಂಬುವರು ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೆಟ್ರೊ ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯಿದೆ ಕಲಂ 62 ಮತ್ತು ಐಪಿಸಿ ಕಲಂ 283ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ''ಸೆಕ್ಯುರಿಟಿ ಗಾರ್ಡ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತನಗೇನು ಗೊತ್ತಿಲ್ಲ. ಅದನ್ನು ತಾನು ಇಟ್ಟಿಲ್ಲ ಎನ್ನುತ್ತಿದ್ದಾನೆ. ಹೀಗಾಗಿ, ಪರಿಶೀಲನೆ ನಡೆದಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಬ್ಲೂಟೂತ್‌ ಬೀಕಾನ್‌?

ಮೊಬೈಲ್‌ ಫೋನ್‌ ಮತ್ತು ಬ್ಲೂಟೂತ್‌ ಬೀಕಾನ್‌ನ ನಡುವೆ ಬ್ಲೂಟೂತ್‌ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ನಂತರ ಮೊಬೈಲ್‌ ಫೋನ್‌ನಿಂದಲೇ ಬ್ಲೂಟೂತ್‌ ಮೂಲಕ ಹಾಡು ಕೇಳುವುದು, ಧ್ವನಿವರ್ಧಕವಾಗಿ ಬಳಸಬಹುದು. ಅಲ್ಲದೇ, ಪತ್ತೆಯಾಗಿರುವ ಬ್ಲೂಟೂತ್‌ ಬೀಕಾನ್‌ ಸಮೀಪಕ್ಕೆ ಬರುವ ಎಲೆಕ್ಟ್ರಾನಿಕ್‌ ಸಾಧನಗಳ ಕುರಿತು ಮಾಹಿತಿಯನ್ನು ಕೂಡಾ ಸ್ವೀಕರಿಸಿ ಅದು ಲಿಂಕ್‌ ಆಗಿರುವ ಮೊಬೈಲ್‌ ಫೋನ್‌ಗಳಿಗೆ ಮಾಹಿತಿ ರವಾನೆ ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ, ಈ ಸಾಧನವನ್ನು ಮೆಟ್ರೊ ರೈಲು ನಿಲ್ದಾಣದಲ್ಲಿ, ಅದು ಕೂಡಾ ಸೀಟಿನ ಕೆಳಗೆ ಅಂಟಿಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ