ಆ್ಯಪ್ನಗರ

ಮಗನಿಗೆ ಆಟವಾಡಲು ಮೊಬೈಲ್‌ ಕೊಟ್ಟು ತಗ್ಲಾಕೊಂಡ ಅಪ್ಪ !

ಪತಿಯ ಅಕ್ರಮ ಸಂಬಂಧ ಪುತ್ರನಿಂದ ಬಯಲಾಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಸದ್ಯ ಪತ್ನಿ ಪೊಲೀಸರ ಕದ ತಟ್ಟಿದ್ದು ಆರೋಪಿ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

TIMESOFINDIA.COM 20 Jul 2019, 1:02 pm
ಬೆಂಗಳೂರು: ಮಗನಿಗೆ ಆಟವಾಡಲು ಮೊಬೈಲ್‌ ಫೋನ್‌ ನೀಡಿದ ತಂದೆ ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಕಡಿದುಕೊಳ್ಳುವಂತಾಗಿದೆ. 43 ವರ್ಷದ ತಂದೆ ಹೊಂದಿದ್ದ ಅಕ್ರಮ ಸಂಬಂಧವನ್ನು 14 ವರ್ಷದ ಪುತ್ರ ಬಯಲುಗೊಳಿಸಿದ್ದು, ತನ್ನ ತಾಯಿಗೆ ತಿಳಿಸಿದ್ದಾನೆ.
Vijaya Karnataka Web game playing in mobile


ಈ ಸಂಬಂಧ 39 ವರ್ಷದ ಮಹಿಳೆ ನಂದಿನಿ (ಹೆಸರು ಬದಲಾಯಿಸಲಾಗಿದೆ) ತನ್ನ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ಆರೋಪವನ್ನೂ ಮಾಡಿದ್ದಾರೆ. ಬೆಂಗಳೂರಿನ ಬನಶಂಕರಿ ಮೂರನೇ ಹಂತದ ನಿವಾಸಿಯಾಗಿರುವ ಆಕೆ ಸಿ.ಕೆ.ಅಚ್ಚುಕಟ್ಟು ಪೊಲೀಸರ ಗಮನಕ್ಕೆ ತಂದಿದ್ದಾರೆ.

ತಂದೆಯ ಮೊಬೈಲ್‌ನಲ್ಲಿ ಆಟವಾಡುತ್ತಿದ್ದ 14 ವರ್ಷದ ಪುತ್ರ ತನ್ನ ತಂದೆಯ ಪ್ರೇಯಸಿಯೊಂದಿಗೆ ನಡೆದ ಆಡಿಯೋ ಸಂಭಾಷಣೆಗಳನ್ನೂ, ಅಶ್ಲೀಲ ಚಿತ್ರಗಳನ್ನೂ ನೋಡಿದ್ದು, ಇದನ್ನು ತನ್ನ ತಾಯಿಯ ಗಮನಕ್ಕೆ ತಂದಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು, ಈ ಸಂಬಂಧ ಮಾಹಿತಿ ನೀಡಿರುವ ಸಿ.ಕೆ.ಅಚ್ಚುಕಟ್ಟು ಪೊಲೀಸರು, ನಂದಿನಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಟ್ಯೂಷನ್‌ ಅನ್ನೂ ಕೂಡ ನಡೆಸುತ್ತಾರೆ. ಜುಲೈ 11 ರಂದು ಸಾಮಾಜಿಕ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಪತಿ ನಾಗರಾಜು ಎಂ. ತನ್ನ ಮಗನಿಗೆ ಫೋನ್‌ ನೀಡಿದರು. ಆ ವೇಳೆ ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿದ್ದ ಬಾಲಕ, ಆಕಸ್ಮಿಕವಾಗಿ ಫೋನ್‌ ರೆಕಾರ್ಡರ್‌ ತೆರೆದು ನೋಡಿದಾಗ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಸಂಭಾಷಣೆಗಳು ಹಾಗೂ ಅಶ್ಲೀಲ ಸಂದೇಶಗಳು, ಆಡಿಯೋಗಳನ್ನು ನೋಡಿದ. ತನ್ನ ತಂದೆ ಹಾಗೂ ಮತ್ತೊಬ್ಬ ಮಹಿಳೆಯೊಂದಿಗಿನ ಈ ಸಂಭಾಷಣೆಗಳನ್ನು ನೋಡಿದ ಬಳಿಕ ತಕ್ಷಣ ತನ್ನ ತಾಯಿಗೆ ತೋರಿಸಿದ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಪತಿ ನನ್ನ ಮೇಲೆ ಹಲ್ಲೆ, ಬೆದರಿಕೆ ನಡೆಸಿದರು: ಪತ್ನಿ
ಈ ಬಗ್ಗೆ ನಂದಿನಿ ತನ್ನ ಪತಿಯನ್ನು ಪ್ರಶ್ನೆ ಮಾಡಿದಾಗ ಆತ ಹಲ್ಲೆ ನಡೆಸಿದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಕುಟುಂಬ ಸದಸ್ಯರಿಗೇನಾದರೂ ತಿಳಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ವಿಚಾರಣೆಗೆಂದು ಪೊಲೀಸ್‌ ಠಾಣೆಗೆ ಬರಲು ಮಹಿಳೆ ವಿಳಂಬ ಮಾಡುತ್ತಿರುವುದರಿಂದ ಈ ಕೇಸಿನ ವಿಚಾರಣೆ ಇನ್ನೂ ನಡೆಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ದೂರು ಹಿಂಪಡೆಯುವಂತೆ ನಾಗರಾಜ್‌ ಕುಟುಂಬಸ್ಥರು ಆಕೆಗೆ ಹೇಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ