ಆ್ಯಪ್ನಗರ

9ನೇ ತರಗತಿಯಲ್ಲಿ ಪಾಸ್‌ ಮಾಡಿಸಲು 50 ಸಾವಿರ ರೂ. ಲಂಚ!

ಒಂಬತ್ತನೇ ತರಗತಿಯಲ್ಲಿ ಫೇಲಾಗಿದ್ದ ವಿದ್ಯಾರ್ಥಿಯನ್ನು ಪಾಸು ಮಾಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ವಂಚಕ

Vijaya Karnataka 28 Sep 2017, 3:34 pm

ಬೆಂಗಳೂರು: ಒಂಬತ್ತನೇ ತರಗತಿಯಲ್ಲಿ ಫೇಲಾಗಿದ್ದ ವಿದ್ಯಾರ್ಥಿಯನ್ನು ಪಾಸು ಮಾಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ವಂಚಕನ ವಿರುದ್ಧ ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Vijaya Karnataka Web boy wanted to gets exam passed cheated
9ನೇ ತರಗತಿಯಲ್ಲಿ ಪಾಸ್‌ ಮಾಡಿಸಲು 50 ಸಾವಿರ ರೂ. ಲಂಚ!


ಅಲ್ವಿನ್‌ ಎನ್ನುವವನು ಹಣ ಪಡೆದು ವಂಚಿಸಿದವ. ಬಿಷಪ್‌ಕಾಟನ್‌ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಕಾರ್ತಿಕ್‌ ಎನ್ನುವ ವಿದ್ಯಾರ್ಥಿ ಅಂತಿಮ ಪರೀಕ್ಷೆಯಲ್ಲಿ ಫೇಲಾಗಿದ್ದ. ಈತನನ್ನು ಪಾಸ್‌ ಮಾಡಿಸುವುದಾಗಿ ಹೇಳಿ ಆಲ್ವಿನ್‌ ಎಂಬಾತ ಹಣ ಕೇಳಿದ್ದ. ಈ ವಿಷಯವನ್ನು ಕಾರ್ತಿಕ್‌ ತನ್ನ ಮನೆಯಲ್ಲೂ ತಿಳಿಸಿದ್ದಲ್ಲದೆ 50 ಸಾವಿರ ರೂವನ್ನು ಆಲ್ವಿನ್‌ಗೆ ಕೊಟ್ಟಿದ್ದ. ಆದರೆ ಹಣ ಪಡೆದ ನಂತರ ಆತ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಲ್ವಿನ್‌ಗೆ ಬಿಷಪ್‌ ಕಾಟನ್‌ ಶಾಲೆಯ ಪರೀಕ್ಷಾ ವಿಭಾಗದಲ್ಲಿ ಯಾರೂ ಪರಿಚಯ ಇರಲಿಲ್ಲ. ಆದರೂ ಸುಳ್ಳು ಹೇಳಿ ಹಣ ಪಡೆದಿದ್ದ. ಹಣ ಪಡೆದ ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಎಂದು ಆರೋಪಿಸಲಾಗಿದೆ.

Boy wanted to gets exam passed Cheated

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ