ಆ್ಯಪ್ನಗರ

ಮಹಿಳೆ ಮೇಲೆ ಹಲ್ಲೆ: ರೌಡಿಶೀಟರ್‌ ಯಶಸ್ವಿನಿ ವಿರುದ್ಧ ದೂರು ದಾಖಲು

ಲೇಡಿ ರೌಡಿ ಶೀಟರ್‌ ಯಶಸ್ವಿನಿ ತನ್ನ ಐದು ಮಂದಿ ಸಹಚರರ ಜತೆ ಸೇರಿಕೊಂಡು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 7 Feb 2019, 5:00 am
ಬೆಂಗಳೂರು: ಲೇಡಿ ರೌಡಿ ಶೀಟರ್‌ ಯಶಸ್ವಿನಿ ತನ್ನ ಐದು ಮಂದಿ ಸಹಚರರ ಜತೆ ಸೇರಿಕೊಂಡು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web case against rowdysheeter yashaswini
ಮಹಿಳೆ ಮೇಲೆ ಹಲ್ಲೆ: ರೌಡಿಶೀಟರ್‌ ಯಶಸ್ವಿನಿ ವಿರುದ್ಧ ದೂರು ದಾಖಲು


ಲಲಿತಾ ರಮೇಶ್‌ ಹಲ್ಲೆಗೆ ಒಳಗಾದವರು. ಗಂಗಮ್ಮನ ಗುಡಿ ಮುಖ್ಯ ರಸ್ತೆಯಲ್ಲಿರುವ ನೀಲಗಿರಿ ತೋಪಿನ ಸಮೀಪ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀರಾಮಸೇನೆಯ ಮಹಿಳಾ ಅಧ್ಯಕ್ಷೆ ಆಗಿರುವ ಈಕೆಯ ವಿರುದ್ಧ ನ್ಯಾಯಾಲಯದಲ್ಲಿ ಹಲವಾರು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಫೆ.13 ರಂದು ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಲಲಿತಾ ರಮೇಶ್‌ ಸಾಕ್ಷ್ಯ ನುಡಿಯಲು ಬರುವವರಿದ್ದರು. ಇವರು ತಮ್ಮ ವಿರುದ್ಧ ಸಾಕ್ಷಿ ನುಡಿದರೆ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ಸಾಕ್ಷ್ಯ ನುಡಿಯದಂತೆ ಬೆದರಿಸುವ ದೃಷ್ಟಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಗಂಗಮ್ಮನ ಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ