ಆ್ಯಪ್ನಗರ

ಕಾಳಸಂತೆ ಸಿಗರೇಟು ಗೋದಾಮಿನ ಮೇಲೆ ಸಿಸಿಬಿ ದಾಳಿ

ವಿದೇಶದಿಂದ ತೆರಿಗೆ ಕಟ್ಟದೇ ಸಿಗರೇಟ್‌ಗಳನ್ನು ತರಿಸಿ ಶೇಖರಿಸಿ ಇಟ್ಟಿದ್ದ ಗೋದಾಮು ಮತ್ತು ಮಾರಾಟಗಾರರ ಮೇಲೆ ಸಿಸಿಬಿ ಪೊಲೀಸರು ದಾಳಿ ಆರಂಭಿಸಿದ್ದಾರೆ.

Vijaya Karnataka 28 Mar 2018, 5:00 am
ಬೆಂಗಳೂರು: ವಿದೇಶದಿಂದ ತೆರಿಗೆ ಕಟ್ಟದೇ ಸಿಗರೇಟ್‌ಗಳನ್ನು ತರಿಸಿ ಶೇಖರಿಸಿ ಇಟ್ಟಿದ್ದ ಗೋದಾಮು ಮತ್ತು ಮಾರಾಟಗಾರರ ಮೇಲೆ ಸಿಸಿಬಿ ಪೊಲೀಸರು ದಾಳಿ ಆರಂಭಿಸಿದ್ದಾರೆ.
Vijaya Karnataka Web ccb attacks on cigarettes warehouse
ಕಾಳಸಂತೆ ಸಿಗರೇಟು ಗೋದಾಮಿನ ಮೇಲೆ ಸಿಸಿಬಿ ದಾಳಿ


ಮೊದಲ ಹಂತವಾಗಿ ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ವಿಭಾಗದಲ್ಲಿ ದಾಳಿ ಆರಂಭಿಸಲಾಗಿದ್ದು, ಸಿಟಿ ಮಾರ್ಕೆಟ್‌ನಲ್ಲಿ ಅಕ್ರಮ ಸಿಗರೇಟ್‌ ಗೋದಾಮಿನ ಮೇಲೆ ದಾಳಿ ಮಾಡಿ ಶ್ರೀ ಏಜೆನ್ಸೀಸ್‌ನ ಮಾಲೀಕ ಅಶೋಕ್‌ ವೆಂಟಕರಮಣ ಶೆಟ್ಟಿ ಎಂಬಾತನನ್ನು ಬಂಧಿಸಿದ್ದಾರೆ.

ನಗರದಾದ್ಯಂತ ಕಾಳಸಂತೆಯಲ್ಲಿ ವಿದೇಶಿ ಸಿಗರೇಟ್‌ಗಳ ಮಾರಾಟ ನಡೆಯುತ್ತಿದೆ ಎನ್ನುವ ಮಾಹಿತಿ ಸಂಗ್ರಹಿಸಿರುವ ಸಿಸಿಬಿ ಪೊಲೀಸರು ಸಿಟಿ ಮಾರ್ಕೆಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಹಳೇ ತಗರುಪೇಟೆಯಲ್ಲಿರುವ ಅಪೋಲೋ ಕಾಂಪ್ಲೆಕ್ಸ್‌ ಮೇಲೆ ದಾಳಿ ನಡೆಸಿದ್ದಾರೆ. ಇದೇ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀ ಏಜೆನ್ಸೀಸ್‌ನಲ್ಲಿ ವಿದೇಶಿ ಸಿಗರೇಟ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಇಲ್ಲಿಂದ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಸಿಗರೇಟ್‌ಗಲನ್ನು ಜಪ್ತಿ ಮಾಡಲಾಗಿದೆ.

ಆರೋಪಿಯು ಭಾರತ ಸರಕಾರದ ಪರವಾನಗಿ ಪಡೆದಿರುವ ಸಿಗರೇಟಿನ ಪ್ಯಾಕ್‌ಗಳ ಜತೆಗೆ ಕಳ್ಳ ಮಾರ್ಗದ ಮೂಲಕ ತರಿಸಿದ ಸಿಗರೇಟುಗಳನ್ನೂ ಮಾರಾಟ ಮಾಡುತ್ತಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ