ಆ್ಯಪ್ನಗರ

ಸರ ಸಿಗದ್ದಕ್ಕೆ ಮಹಿಳೆಯ ಕುತ್ತಿಗೆ ಕೊಯ್ದ

ಸರ ಕದಿಯಲು ವಿಫಲನಾದ ಕಳ್ಳನೊಬ್ಬ ಮಹಿಳೆಯ ಕುತ್ತಿಗೆಗೆ ಬ್ಲೇಡ್‌ನಿಂದ ಇರಿದು ಗಾಯಗೊಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

Vijaya Karnataka 26 Dec 2018, 5:00 am
ಬೆಂಗಳೂರು: ಸರ ಕದಿಯಲು ವಿಫಲನಾದ ಕಳ್ಳನೊಬ್ಬ ಮಹಿಳೆಯ ಕುತ್ತಿಗೆಗೆ ಬ್ಲೇಡ್‌ನಿಂದ ಇರಿದು ಗಾಯಗೊಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
Vijaya Karnataka Web chain snatcher tried to cut women neck
ಸರ ಸಿಗದ್ದಕ್ಕೆ ಮಹಿಳೆಯ ಕುತ್ತಿಗೆ ಕೊಯ್ದ


ಯಶವಂತಪುರ ಮುತ್ಯಾಲನಗರದ ನಿವಾಸಿ ವಿನೋದ್‌(30) ಆರೋಪಿಯಾಗಿದ್ದು. ಸೋಲದೇವನಹಳ್ಳಿ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿನಾಯಕಲೇಔಟ್‌ ನಿವಾಸಿ ವನಜಾಕ್ಷಿ(49) ಎಂಬುವವರ ಸರ ಕಸಿಯಲು ಆರೋಪಿ ಯತ್ನಿಸಿದ್ದ.

ವನಜಾಕ್ಷಿ ಅವರು ಮನೆಯ ಪಕ್ಕದಲ್ಲೇ ಬೇಕರಿ ಇಟ್ಟುಕೊಂಡಿದ್ದಾರೆ. ಬೇಕರಿಗೆ ಆಗಾಗ ಬರುತ್ತಿದ್ದ ಆರೋಪಿ ವಿನೋದ್‌, ವನಜಾಕ್ಷಿ ಅವರ ಕತ್ತಿನಲ್ಲಿದ್ದ ಸರ ನೋಡಿದ್ದ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೇಕರಿಗೆ ಬಂದಿದ್ದ ಆತ, ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದಲ್ಲದೆ, ಸಿಗರೇಟ್‌ ಕೊಡುವಂತೆ ಕೇಳಿದ್ದ. ವನಜಾಕ್ಷಿ ಅವರು ಸಿಗರೇಟ್‌ ಕೊಡಲು ಹಿಂದಕ್ಕೆ ತಿರುಗಿದಾಗ ಸರ ಕಿತ್ತುಕೊಳ್ಳಲು ಯತ್ನಿಸಿದ್ದ. ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಅವರು ಜೋರಾಗಿ ಕೂಗಿಕೊಂಡಿದ್ದರು. ವಿಚಲಿತನಾದ ವಿನೋದ್‌ ಮತ್ತೊಂದು ಕೈಯಲ್ಲಿದ್ದ ಬ್ಲೇಡ್‌ನಿಂದ ಬ್ಲೇಡ್‌ನಿಂದ ವನಜಾಕ್ಷಿ ಅವರ ಕುತ್ತಿಗೆಗೆ ಇರಿದಿದ್ದ. ವನಜಾಕ್ಷಿ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು.

ವಿನೋದ್‌ ಅಂಗಡಿಗೆ ಬಂದಾಗ ವನಜಾಕ್ಷಿ ಅವರಲ್ಲಿ 'ನಾನು ನಿಮ್ಮ ಪತಿಯ ಸ್ನೇಹಿತ' ಎಂದು ಹೇಳಿಕೊಂಡಿದ್ದ. ಈ ಮಾಹಿತಿ ಮೇರೆಗೆ ಪೊಲೀಸರು ವಿನೋದನ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸತ್ಯ ಗೊತ್ತಾಗಿದೆ.

ಸಾಲ ತೀರಿಸಲು: ವಿನೋದ್‌ ಮುತ್ಯಾಲನಗರದಲ್ಲಿ ಬೇಕರಿ ತೆರೆದಿದ್ದು, ವ್ಯಾಪಾರ ಸರಿಯಾಗದ ಕಾರಣ ಮುಚ್ಚಿದ್ದ. ಈ ವೇಳೆ ಸ್ನೇಹಿತರಿಂದ ಸಾಲ ಪಡೆದಿದ್ದು, ಅದನ್ನು ತೀರಿಸುವ ಸಲುವಾಗಿ ಸರಕಳ್ಳತನಕ್ಕೆ ಇಳಿದಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ