ಆ್ಯಪ್ನಗರ

ಮುಂದುವರಿದ ಸರಗಳ್ಳರ ಹಾವಳಿ

ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಬಸವೇಶ್ವರನಗರ ಮತ್ತು ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಮಹಿಳೆಯರ ಸರ ಅಪಹರಿಸಿದ್ದು ಬೆಳಕಿಗೆ ಬಂದಿದೆ.

Vijaya Karnataka Web 14 Aug 2017, 4:00 am

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಬಸವೇಶ್ವರನಗರ ಮತ್ತು ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಮಹಿಳೆಯರ ಸರ ಅಪಹರಿಸಿದ್ದು ಬೆಳಕಿಗೆ ಬಂದಿದೆ.

ಬಸವೇಶ್ವರ ನಗರದ ಶಂಕರಮಠ ವೃತ್ತದಲ್ಲಿ ರಸ್ತೆ ದಾಟಲು ನಿಂತಿದ್ದ ಸತ್ಯನಾರಾಯಣ ಲೇಔಟ್‌ ನಿವಾಸಿ ಪ್ರಭಾ (65) ಎಂಬುವರ ಗಮನ ಬೇರೆಡೆ ಸೆಳೆದ ದುಷ್ಕರ್ಮಿಯೊಬ್ಬ 60 ಗ್ರಾಂ ತೂಕದ ಸರ ಕಸಿದು ಪರಾರಿಯಾಗಿದ್ದಾನೆ.

ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭವೊಂದಕ್ಕೆ ತೆರಳುತ್ತಿದ್ದ ಪ್ರಭಾ ಅವರು, ಶನಿವಾರ ಸಂಜೆ 7.30ರ ಸುಮಾರಿಗೆ ಶಂಕರಮಠದ ಸಿಗ್ನಲ್‌ ದಾಟುವ ವೇಳೆ ಬಂದ ದುಷ್ಕರ್ಮಿ, ಮಾತನಾಡಿಸುವ ನೆಪದಲ್ಲಿ ಸರ ಕಿತ್ತುಕೊಂಡಿದ್ದಾನೆ. ಸಮೀಪದ ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಲಾಗಿದೆ. ಕೃತ್ಯಕ್ಕೂ ಮುನ್ನ ಆರೋಪಿ ಸಿಗ್ನಲ್‌ ಬಳಿ ಇರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದ. ಹೊರ ಬಂದ ಬಳಿಕ ಪ್ರಭಾ ಅವರು ನಿಂತಿರುವುದನ್ನು ಗಮನಿಸಿ ಸರ ಕಸಿದು ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ರೋಲ್ಡ್‌ ಗೋಲ್ಡ್‌ ಸರ ಅಪಹರಣ:: ಸುಬ್ರಮಣ್ಯ ನಗರದ ಮಿಲ್ಕ್‌ ಕಾಲೋನಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸುಕನ್ಯಾ ಎಂಬುವರ ರೊಲ್ಡ್‌ ಗೋಲ್ಡ್‌ ಸರ ಎಗರಿಸಿದ್ದಾರೆ.

ಸುಕನ್ಯಾ ಅವರು ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆ ಸಮೀಪದ ಅಂಗಡಿಗೆ ಹೋಗಿ ಮನೆಗೆ ವಾಪಸ್‌ ಆಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು, ಸುಕನ್ಯಾ ಅವರ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಹಿಳೆ ಧರಿಸಿದ್ದ ಸರದ ಮೌಲ್ಯ 1,500 ರುಪಾಯಿ ಎಂದು ಸುಬ್ರಹ್ಮಣ್ಯನಗರ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ