ಆ್ಯಪ್ನಗರ

ಮುಂದುವರಿದ ಆನ್‌ಲೈನ್‌ ವಂಚನೆ, ಗಿಫ್ಟ್‌ ಸೋಗಿನಲ್ಲಿ 3.93 ಲಕ್ಷ ರೂ. ಟೋಪಿ

ನಗರದಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಮುಂದುವರಿದಿದ್ದು, ದುಬಾರಿ ಬೆಲೆಯ ಉಡುಗೊರೆ ಕಳುಹಿಸುವ ಸೋಗಿನಲ್ಲಿ ಸೈಬರ್‌ ಖದೀಮರು 40 ವರ್ಷದ ಮಹಿಳೆಯಿಂದ 3.93 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

Vijaya Karnataka 19 May 2018, 5:00 am
ಬೆಂಗಳೂರು: ನಗರದಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಮುಂದುವರಿದಿದ್ದು, ದುಬಾರಿ ಬೆಲೆಯ ಉಡುಗೊರೆ ಕಳುಹಿಸುವ ಸೋಗಿನಲ್ಲಿ ಸೈಬರ್‌ ಖದೀಮರು 40 ವರ್ಷದ ಮಹಿಳೆಯಿಂದ 3.93 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
Vijaya Karnataka Web continued online fraud rs 3 93 lakh reward for fraud gift
ಮುಂದುವರಿದ ಆನ್‌ಲೈನ್‌ ವಂಚನೆ, ಗಿಫ್ಟ್‌ ಸೋಗಿನಲ್ಲಿ 3.93 ಲಕ್ಷ ರೂ. ಟೋಪಿ


ಈ ಸಂಬಂಧ ಹೊರಮಾವು ಬಾಬುಸಪಾಳ್ಯದ ನಿವಾಸಿ ಮಹಿಳೆ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಮಹಿಳೆ, ಭಾರತ್‌ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗೆ ತನ್ನ ಸ್ವ-ವಿವರ ಅಪ್‌ಲೋಡ್‌ ಮಾಡಿದ್ದರು. ಮಂಜಿತ್‌ ಸಿಂಗ್‌ ಹೆಸರಿನಲ್ಲಿ ಮಹಿಳೆಯ ಸಂಪರ್ಕ ಪಡೆದ ವಂಚಕ ಫೋನ್‌ ಹಾಗೂ ಚಾಟಿಂಗ್‌ ಮಾಡಿ ವಿಶ್ವಾಸ ಗಳಿಸಿಕೊಂಡಿದ್ದ. ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿದ್ದಾನೆ. ವಿದೇಶದಿಂದ ನಿಮಗೆ ದುಬಾರಿ ಬೆಲೆಯ ಉಡುಗೊರೆ ಪಾರ್ಸೆಲ್‌ ಮಾಡಿದ್ದೇನೆ ಅದನ್ನು ಪಡೆದುಕೊಳ್ಳಿ ಎಂದು ಮಹಿಳೆಗೆ ನಂಬಿಸಿದ್ದ.

ಕೆಲ ದಿನಗಳಲ್ಲಿ ದಿಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿ ಎಂದು ಹೇಳಿಕೊಂಡ ಮಹಿಳೆಯೊಬ್ಬಳು, ವಂಚನೆಗೊಳಗಾದ ಮಹಿಳೆಗೆ ಕರೆ ಮಾಡಿ, ಮಂಜಿತ್‌ ಸಿಂಗ್‌ ಎಂಬುವರು ನಿಮಗೊಂದು ಉಡುಗೊರೆ ಕಳುಹಿಸಿದ್ದು, ಅದನ್ನು ಪಡೆದುಕೊಳ್ಳಲು ತೆರಿಗೆ ಕಟ್ಟಬೇಕು ಎಂದು ಹೇಳಿದ್ದಳು. ಅದನ್ನು ನಂಬಿದ ಮಹಿಳೆ ಅವರು ಹೇಳಿದ ಖಾತೆಗೆ ಹಣ ರವಾನೆ ಮಾಡಿದ್ದು, ಒಟ್ಟು 3.93 ಲಕ್ಷ ರೂ. ನೀಡಿದ್ದರು. ಕೊನೆಯಲ್ಲಿ ಮೊಬೈಲ್‌ ಸ್ವಿಚ್‌ ಆಗಿದ್ದು, ಈ ವೇಲೆ ಮಹಿಳೆಗೆ ವಂಚನೆ ಒಳಗಾಗಿರುವುದು ಗೊತ್ತಾಗಿದೆ. ಬಳಿಕ ಅವರು ಮೇ 16ರಂದು ಪೊಲೀಸ್‌ ದೂರು ನೀಡಿದ್ದಾರೆ.

ಖಾತೆ ವಿವರ ಹಾಗೂ ಫೋನ್‌ ಸಂಖ್ಯೆಯ ಮೂಲಕ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ