ಆ್ಯಪ್ನಗರ

ಜೋಡಿ ಕೊಲೆ ಕೇಸ್‌ : ರೌಡಿ ಕಾಲಿಗೆ ಗುಂಡು ಹೊಡೆದು ಬಂಧನ

ಕುಮಾರಸ್ವಾಮಿ ಲೇಔಟ್‌ ಠಾಣೆಯ ರೌಡಿ ಶೀಟರ್‌ ಆಗಿರುವ ವಿನೋದ್‌ಕುಮಾರ್‌ ಅಲಿಯಾಸ್‌ ಕೋತಿ(27) ಮೇಲೆ ಎರಡು ಕೊಲೆ, 2 ಕೊಲೆಯತ್ನ ಸೇರಿ ಹಲವಾರು ಕೇಸುಗಳು ದಾಖಲಾಗಿವೆ. ಈತ 2017 ರಲ್ಲಿ ಕೊಲೆಯಾದ ರೌಡಿ ಶೀಟರ್‌ ಟ್ಯಾಬ್ಲೆಟ್‌ ರಘು ಸಹಚರನಾಗಿದ್ದು ಈ ಕೊಲೆಗೆ ಪ್ರತೀಕಾರವಾಗಿಯೇ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka 6 Sep 2019, 5:00 am
ವಿಕ ಸುದ್ದಿಲೋಕ ಬೆಂಗಳೂರು : ಆ.25ರ ರಾತ್ರಿ ಜೆ.ಪಿ.ನಗರದಲ್ಲಿ ನಡೆದಿದ್ದ ರೌಡಿ ಶೀಟರ್‌ ಸೇರಿ ಜೋಡಿಕೊಲೆ ಸಂಬಂಧ ದಕ್ಷಿಣ ಡಿಸಿಪಿ ವಿಭಾಗದ ಪೊಲೀಸರು ರೌಡಿ ಶೀಟರ್‌ ವಿನೋದ್‌ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
Vijaya Karnataka Web arrest


ಕುಮಾರಸ್ವಾಮಿ ಲೇಔಟ್‌ ಠಾಣೆಯ ರೌಡಿ ಶೀಟರ್‌ ಆಗಿರುವ ವಿನೋದ್‌ಕುಮಾರ್‌ ಅಲಿಯಾಸ್‌ ಕೋತಿ(27) ಮೇಲೆ ಎರಡು ಕೊಲೆ, 2 ಕೊಲೆಯತ್ನ ಸೇರಿ ಹಲವಾರು ಕೇಸುಗಳು ದಾಖಲಾಗಿವೆ. ಈತ 2017 ರಲ್ಲಿ ಕೊಲೆಯಾದ ರೌಡಿ ಶೀಟರ್‌ ಟ್ಯಾಬ್ಲೆಟ್‌ ರಘು ಸಹಚರನಾಗಿದ್ದು ಈ ಕೊಲೆಗೆ ಪ್ರತೀಕಾರವಾಗಿಯೇ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ಯಾಬ್ಲೆಟ್‌ ರಘು ಕೊಲೆ ಆಗುವ ದಿನ ರಘು ಕಾರಿನಲ್ಲೇ ಕುಳಿತಿದ್ದ ವಿನೋದ್‌ ಮೇಲೂ ಮಂಜ ಮತ್ತು ಸಹಚರರು ಹಲ್ಲೆ ನಡೆಸಿ ಕೈಗೆ ಮಚ್ಚಿನಿಂದ ಗಾಯಗೊಳಿಸಿದ್ದರು. ಇದೇ ಸೇಡಿಗಾಗಿ ಕಾತರಿಸುತ್ತಿದ್ದ ವಿನೋದ್‌ ಗ್ಯಾಂಗ್‌ ಕಟ್ಟಿದ್ದ. ಆ.25ರ ರಾತ್ರಿ 11.30 ರ ಸುಮಾರಿಗೆ ಜೆ.ಪಿ.ನಗರದಲ್ಲಿ ಮಂಜ ಮತ್ತು ಈತನ ಸಹಚರ ವರುಣ್‌ನ ಮೇಲೆ ದಾಳಿ ಮಾಡಿ ಕೊಲೆಗೈದಿದ್ದರು. ಈ ಪ್ರಕರಣದ ಉಳಿದೆಲ್ಲಾ ಆರೋಪಿಗಳು ಬಂಧಿತರಾದರೂ ವಿನೋದ್‌ ಮಾತ್ರ ತಲೆಮರೆಸಿಕೊಂಡಿದ್ದ. ಈತ ಗುರುವಾರ ನಸುಕಿನ ನಾಲ್ಕು ಗಂಟೆ ಸುಮಾರಿಗೆ ತಲಘಟ್ಟಪುರದ ನಾಗೇಗೌಡನಪಾಳ್ಯ ಬಳಿ ಅಡಗಿರುವ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಈತನ ಬಂಧನಕ್ಕೆ ಸುಬ್ರಮಣ್ಯಪುರ ಉಪವಿಭಾಗ ಎಸಿಪಿ ಟಿ. ಮಹದೇವ್‌ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಗುರುವಾರ ಬೆಳಗಿನ ಜಾವ 5 ಗಂಟೆಯಲ್ಲಿ ಬಂಧನಕ್ಕಾಗಿ ಪಿಎಸ್‌ಐ ನಾಗೇಶ್‌ ನೇತೃತ್ವದ ತಂಡ ಸುತ್ತುವರಿದಾಗ ಆರೋಪಿ ವಿನೋದ್‌ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತಕ್ಷಣ ಅಲರ್ಟ್‌ ಆದ ಪಿಎಸ್‌ಐ ನಾಗೇಶ್‌ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ 1 ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದರು. ಈ ಸೂಚನೆಗೂ ಬಗ್ಗದಿದ್ದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳು ವಿನೋದ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈತ ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ