ಆ್ಯಪ್ನಗರ

ವಿದೇಶಿ ಕರೆನ್ಸಿ ಇದ್ದ ಪರ್ಸ್‌ ಮರಳಿಸಿದ ಚಾಲಕನಿಗೆ ಪ್ರಶಂಸೆ

ಕ್ಯಾಬ್‌ ಚಾಲಕ ಸಿ.ಆರ್‌.ವಿಶ್ವನಾಥ್‌ ಪ್ರಾಮಾಣಿಕತೆ ಮೆರೆದ ಚಾಲಕ. 140 ಅಮೆರಿಕನ್‌ ಡಾಲರ್‌, 400 ದುಬೈ ಧೀರಮ್‌, 2 ರೋಮನ್‌ ಕರೆನ್ಸಿ, 10 ಸಿಂಗಾಪುರ್‌ ಡಾಲರ್‌, 640 ರೂ. ಮತ್ತು ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳು ಇದ್ದ ಪರ್ಸ್‌ನ್ನು ಮಾಲೀಕರಿಗೆ ಚಾಲಕ ಒಪ್ಪಿಸಿದ್ದಾರೆ.

Vijaya Karnataka 17 Aug 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web purse


ನ್ಯೂಜಿಲ್ಯಾಂಡ್‌ ಪ್ರಜೆ ಕಾರಿನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂ. ಇದ್ದ ಪರ್ಸ್‌ನ್ನು ಮರಳಿಸಿದ ಕ್ಯಾಬ್‌ ಚಾಲಕನಿಗೆ ನಗರ ಪೊಲೀಸ್‌ ಆಯುಕ್ತರು ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದ್ದಾರೆ.

ಕ್ಯಾಬ್‌ ಚಾಲಕ ಸಿ.ಆರ್‌.ವಿಶ್ವನಾಥ್‌ ಪ್ರಾಮಾಣಿಕತೆ ಮೆರೆದ ಚಾಲಕ. 140 ಅಮೆರಿಕನ್‌ ಡಾಲರ್‌, 400 ದುಬೈ ಧೀರಮ್‌, 2 ರೋಮನ್‌ ಕರೆನ್ಸಿ, 10 ಸಿಂಗಾಪುರ್‌ ಡಾಲರ್‌, 640 ರೂ. ಮತ್ತು ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳು ಇದ್ದ ಪರ್ಸ್‌ನ್ನು ಮಾಲೀಕರಿಗೆ ಚಾಲಕ ಒಪ್ಪಿಸಿದ್ದಾರೆ.

ಕೆಲಸದ ಮೇಲೆ ನ್ಯೂಜಿಲ್ಯಾಂಡ್‌ನಿಂದ ಬೆಂಗಳೂರಿಗೆ ಬಂದಿದ್ದ ಕೆಲ್ವಿನ್‌ ಜಾನ್‌, ಆ.14ರಂದು ವಿಶ್ವನಾಥ್‌ ಅವರ ಕ್ಯಾಬ್‌ ಹತ್ತಿ ಮಧ್ಯಾಹ್ನ 12ರ ಸುಮಾರಿಗೆ ಬೆಳ್ಳಂದೂರು ಎಕೋಸ್ಪೇಸ್‌ ಬಳಿ ಇಳಿದಿದ್ದರು. ಹೋಗುವಾಗ ತಮ್ಮ ಪರ್ಸ್‌ನ್ನು ಕ್ಯಾಬ್‌ನಲ್ಲೇ ಮರೆತಿದ್ದರು. ಕೆಲ ಹೊತ್ತಿನ ಬಳಿಕ ಚಾಲಕ ವಿಶ್ವನಾಥ್‌ ಅವರು ಪರ್ಸ್‌ ಬಿಟ್ಟಿರುವುದನ್ನು ಗಮನಿಸಿದ್ದರು. ಮತ್ತೊಂದೆಡೆ ಕೆಲ್ವೀನ್‌ ಕೂಡ ಚಾಲಕನ ನಂಬರ್‌ಗೆ ಕರೆ ಮಾಡಿ ಪರ್ಸ್‌ ಕಾಣೆಯಾಗಿರುವ ಬಗ್ಗೆ ಮಾತನಾಡಿದ್ದಾರೆ. ಬ್ಯಾಗ್‌ ಅವರದೆ ಎಂಬುದು ದೃಢಪಟ್ಟ ನಂತರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕ್ಯಾಬ್‌ ಚಾಲಕರ ಸಂಘದ ಮುಖಂಡರಾದ ನಂದೀಶ್‌ ಮತ್ತು ವೆಂಕಟೇಶ್‌ ಸಮ್ಮುಖದಲ್ಲಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಮಾಲೀಕ ಕೆಲ್ವಿನ್‌ ಕೈಗೆ ಒಪ್ಪಿಸಿದರು.

ಕ್ಯಾಬ್‌ ಚಾಲಕ ವಿಶ್ವನಾಥ್‌ ಪ್ರಾಮಾಣಿಕತೆಯನ್ನು ಶ್ಲಾಘಿಸಿ, ಪ್ರಶಂಸನಾ ಪತ್ರವನ್ನು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ