ಆ್ಯಪ್ನಗರ

ದಂಪತಿ ಬಳಿಯಿಂದ 50 ಲಕ್ಷದ ಹಶೀಶ್‌ ವಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ದಂಪತಿ ಬಳಿ ಇದ್ದ 50 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

Vijaya Karnataka 27 Mar 2019, 5:00 am
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ದಂಪತಿ ಬಳಿ ಇದ್ದ 50 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
Vijaya Karnataka Web DRUNK AND DRIVE3


ಅನೂಜ್‌ ಕುಮಾರ್‌ ಮತ್ತು ಬಂಡಿತ್‌ ಸೌನಾ ಬಂಧಿತ ದಂಪತಿ. ಎರಡು ಟ್ರಾಲಿ ಸೂಟ್‌ಕೇಸ್‌ನ ಒಳಭಾಗದಲ್ಲಿ ಮಾದಕ ವಸ್ತು ಹಶೀಶ್‌ ಅನ್ನು ಅಡಗಿಸಿಟ್ಟು ಅವರು ಸಾಗಿಸಲು ಯತ್ನಿಸುತ್ತಿದ್ದರು. ಅನುಮಾನದ ಮೇಲೆ ಸೂಟ್‌ಕೇಸ್‌ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಮಾಲು ಜಪ್ತಿ ಮಾಡಿದ್ದಾರೆ. ಆರೋಪಿಗಳು ದೋಹಾಕ್ಕೆ ಮಾದಕ ವಸ್ತುವನ್ನು ಸಾಗಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ದಿಲ್ಲಿಯ ಡ್ರಗ್‌ ಪೆಡ್ಲರ್‌ಗಳು ದೋಹಾ, ಕತಾರ್‌ಗೆ ಮಾದಕ ವಸ್ತುಗಳನ್ನು ಸಾಗಿಸುವಂತೆ ದಂಪತಿಗೆ ಆಮಿಷ ಒಡ್ಡಿದ್ದರು. ಬರುವ ವೇಳೆ 50ಲಕ್ಷ ರೂ. ಮೊತ್ತದ ಚಿನ್ನ ತರುವಂತೆಯೂ ಸೂಚಿಸಿದ್ದರು. ಅದಕ್ಕಾಗಿ ಹಣ ನೀಡುವ ಜತೆಗೆ ವಿಮಾನದ ಟಿಕೆಟ್‌ಗಳನ್ನು ಉಚಿತ ಕೊಡಿಸಿದ್ದರು. ಬಂಡಿತಾ ಒಡಿಶಾ ಮೂಲದವರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅನೂಜ್‌ ವಾಣಿಜ್ಯ ಹಡಗೊಂದರ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದಾನೆ.

ದಿಲ್ಲಿಯಲ್ಲಿ ಹಶಿಶ್‌ ಸಂಗ್ರಹಿಸಿಕೊಂಡಿದ್ದ ಅವರಿಬ್ಬರು ರೈಲು ಮಾರ್ಗದ ಮೂಲಕ ಬೆಂಗಳೂರಿಗೆ ಬಂದು ಅಲ್ಲಿಂದ ದೋಹಾಕ್ಕೆ ಹೋಗಲು ಯತ್ನಿಸಿದ್ದರು. ಆರೋಪಿಗಳು ವಿದೇಶ ಪ್ರವಾಸಕ್ಕೆ ಹೋಗುವುದಾಗಿ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ