ಆ್ಯಪ್ನಗರ

ಕುಲಸಚಿವರ ಸಹಿ ನಕಲು : ಕಾಲೇಜಿನ ಮುಖ್ಯಸ್ಥ ಸೆರೆ

ಪಿಯುಸಿಯಲ್ಲಿ ಫೇಲಾದವರಿಗೂ ಡಿಗ್ರಿ ಕೊಡಿಸುವುದಾಗಿ ನಂಬಿಸಿ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿ ವಂಚನೆ.

ವಿಕ ಸುದ್ದಿಲೋಕ 21 Apr 2017, 8:24 am

ಬೆಂಗಳೂರು: ಪಿಯುಸಿಯಲ್ಲಿ ಫೇಲಾದವರಿಗೂ ಡಿಗ್ರಿ ಕೊಡಿಸುವುದಾಗಿ ನಂಬಿಸಿ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿ ವಂಚಿಸಿದ್ದ ಆಕಾಶ್‌ ಇಂಟರ್‌ನ್ಯಾಷನಲ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌(ಎಐಬಿಎಂ) ಸಂಸ್ಥೆಯ ಆಡಳಿತ ಮಂಡಳಿ ಮುಖ್ಯಸ್ಥ ಸಾದಿಕ್‌ ಜಾಫರ್‌ನನ್ನು ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ವಿವಿಯ ಸಂಯೋಜಿತಗೊಂಡಿರುವ ಈ ಸಂಸ್ಥೆ ಮಲ್ಲತ್ತಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆ ವಿರುದ್ಧ ಫೋರ್ಜರಿ ಸಹಿ ಮಾಡಿರುವ ಬಗ್ಗೆ ಬೆಂಗಳೂರು ವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವರು ನೀಡಿದ್ದ ದೂರು ಆಧರಿಸಿ ಜಾಫರ್‌ನನ್ನು ಬಂಧಿಸಲಾಗಿದೆ. ಇತರೆ ಮುಖ್ಯಸ್ಥ ರಾದ ಶಹನವಾಜ್‌, ಟ್ರಸ್ಟಿಗಳಾದ ಸರ್ಫ್‌ರಾಜ್‌, ಇಸ್ಮಾಯಿಲ್‌ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಟುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸ್ಥೆಯ ಸುಳ್ಳು ಭರವಸೆಯನ್ನು ನಂಬಿ ಪ್ರಥಮ ವರ್ಷದ ಪದವಿಗೆ ದಾಖಲಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರಾದರೂ ಫಲಿತಾಂಶ ಮಾತ್ರ ಪ್ರಕಟ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿ ಪೋಷಕರಿಂದ ಪ್ರತಿಭಟನೆ ನಡೆದಿತ್ತು. ಬಳಿಕ ಬೆಂಗಳೂರು ವಿವಿಗೂ ಫಲಿತಾಂಶ ಪ್ರಕಟವಾಗದಿರುವುದಕ್ಕೆ ಪೋಷಕರು ಕಾರಣ ಕೇಳಿದ್ದ ವೇಳೆ ಕುಲಸಚಿವರ ಪೋರ್ಜರಿ ಸಹಿ ಮಾಡಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಿದ್ದು ಗಮನಕ್ಕೆ ಬಂದಿತ್ತು.

Vijaya Karnataka Web duplicate signature college head arrest
ಕುಲಸಚಿವರ ಸಹಿ ನಕಲು : ಕಾಲೇಜಿನ ಮುಖ್ಯಸ್ಥ ಸೆರೆ


ನಿಮ್ಮ ಕಾಲೇಜಿನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ವಿದ್ಯಾರ್ಥಿ ಪೋಷಕರಿಗೆ ತಿಳಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಕಾಲೇಜಿನ ವಂಚನೆ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ