ಆ್ಯಪ್ನಗರ

ಬೆಂಗಳೂರು ಡ್ರಗ್ಸ್‌ ಪ್ರಕರಣ: ಕೇರಳ ಸಿಪಿಐ(ಎಂ) ಕಾರ್ಯದರ್ಶಿ ಬಾಲಕೃಷ್ಣ ಕೋಡಿಯೇರಿ ಪುತ್ರ ಅರೆಸ್ಟ್‌!

ಕಳೆದ ಶುಕ್ರವಾರ ಬಿನೇಶ್‌ ಕೋಡಿಯೇರಿ ನೋಟಿಸ್‌ ನೀಡಿದ್ದರು ಕೂಡ ಆರೋಗ್ಯ ಸಮಸ್ಯೆ ಹಿನ್ನೆಲೆ ತಪ್ಪಿಸಿಕೊಂಡಿದ್ದರು. ಆದರೆ ತನಿಖೆ ತೀವ್ರಗತಿಯಲ್ಲಿ ನಡೆಸುವ ಉದ್ದೇಶದಿಂದ ಇದೀಗ ಇಡಿ ಅಧಿಕಾರಿಗಳು ಹೈ ಪ್ರೊಫೈಲ್‌ ವ್ಯಕ್ತಿಯನ್ನು ಅರೆಸ್ಟ್‌ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ.

TIMESOFINDIA.COM 30 Oct 2020, 8:33 am
ಬೆಂಗಳೂರು: ಬೆಂಗಳೂರು ಡ್ರಗ್‌ ಕೇಸ್‌ಗೆ ಸಂಬಂಧಪಟ್ಟಂತೆ ಕೇರಳ ಸಿಪಿಐ(ಎಂ) ಕಾರ್ಯದರ್ಶಿ ಬಾಲಕೃಷ್ಣ ಕೋಡಿಯೇರಿ ಪುತ್ರ ಬಿನೀಶ್‌ ಕೋಡಿಯೇರಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂದೆ ಎರಡರಿಂದ ಮೂರು ಬಾರಿ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್‌ ನೀಡಿದ್ದರು. ಬಿನೀಶ್‌‌ ಕೋಡಿಯೇರಿ ಈ ಹಿನ್ನೆಲೆ ಬೆಂಗಳೂರಿನ ಇಡಿ ಕಚೇರಿಗೆ ಬಂದಿದ್ದರು. ಕಳೆದ ಶುಕ್ರವಾರ ನೀಡಿದ ನೋಟಿಸ್‌ಗೆ ಬಿನೀಶ್‌ ಆರೋಗ್ಯ ಸಮಸ್ಯೆಯ ಕಾರಣ ಹೇಳಿ ತಪ್ಪಿಸಿಕೊಂಡಿದ್ದರು.
Vijaya Karnataka Web Bineesh Kodiyeri
Bineesh Kodiyeri


ಆದರೆ ತನಿಖೆ ತೀವ್ರಗತಿಯಲ್ಲಿ ನಡೆಸುವ ಉದ್ದೇಶದಿಂದ ಇದೀಗ ಇಡಿ ಅಧಿಕಾರಿಗಳು ಹೈ ಪ್ರೊಫೈಲ್‌ ವ್ಯಕ್ತಿಯನ್ನು ಅರೆಸ್ಟ್‌ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ. ಇನ್ನು ಬೆಂಗಳೂರು ಡ್ರಗ್ಸ್‌ ಮಾಫಿಯಾಗೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಮೊಹಮ್ಮದ್‌ ಅನೂಪ್‌, ಬಿನೀಶ್‌ ಕೋಡಿಯೇರಿ ಜೊತೆ ಡ್ರಗ್ಸ್‌ ಸಂಬಂಧ ನಡೆಸಿದ ಹಣದ ವ್ಯವಹಾರಗಳ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಬಿನೀಶ್‌ ಕೋಡಿಯೇರಿಯನ್ನು ಅರೆಸ್ಟ್‌ ಮಾಡಲಾಗಿದೆ. ಇನ್ನು ಶುಕ್ರವಾರ ಬಿನೀಶ್ ಇಡಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಲಿದೆ. ಇತ್ತೀಚೆಗೆ ಸಿಸಿಬಿ ಪೊಲೀಸರು ಬೆಂಗಳೂರು ಡ್ರಗ್ಸ್‌ ದಂಧೆಯನ್ನು ಬೆಳಕಿಗೆ ತಂದಿತ್ತು. ಈ ಮಾಫಿಯಾದಲ್ಲಿ ಹಲವು ಹೈ ಪ್ರೊಫೈಲ್‌ ಜನರು ಭಾಗಿಯಗಿರುವುದನ್ನು ಇಡೀ ಜಗತ್ತಿಗೆ ತಿಳಿಯುವಂತೆ ಮಾಡಿದ್ದರು.

ವೇಶ್ಯಾವಾಟಿಕೆ ಹೆಸರಲ್ಲಿ ಹನಿಟ್ರ್ಯಾಪ್‌ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸ್‌ ಬಲೆಗೆ

ಇನ್ನು ಡ್ರಗ್ಸ್‌ ಕೇಸ್‌ನಲ್ಲಿ ಹವಾಲ ಹಣ ಬಳಕೆಯಾಗಿದೆ ಆರೋಪದ ಹಿನ್ನೆಲೆ ಇಡಿ ಕೂಡ ತನಿಖೆ ನಡೆಸುತ್ತಿದೆ. ಅಲ್ಲದೇ ಬಿನೀಶ್ ‌ 2015ರಲ್ಲಿ ಬೆಂಗಳೂರಿನಲ್ಲಿ ಕಂಪೆನಿಯೊಂದನ್ನು ತೆರೆದಿದ್ದು ಸದ್ಯ ಇದನ್ನು ಮುಚ್ಚಲಾಗಿದೆ. ಈ ಕಂಪೆನಿ ಮೂಲಕವೇ ಹಣದ ವ್ಯವಹಾರ ನಡೆಸಲಾಗಿದೆ ಎನ್ನುವ ಆರೋಪಗಳು ಕೂಡ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ