ಆ್ಯಪ್ನಗರ

ನೀರಾ ಇಳಿಸುತ್ತಿದ್ದ ಅಡ್ಡೆ ಮೇಲೆ ದಾಳಿ

ಪರವಾನಗಿ ಪಡೆಯದೆ ಅಕ್ರಮವಾಗಿ ನೀರಾ ಇಳಿಸಿ, ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಶುಕ್ರವಾರ ದಾಳಿ ನಡೆಸಿದ ಅಬಕಾರಿ ...

Vijaya Karnataka 24 Mar 2018, 5:00 am
ಬೆಂಗಳೂರು: ಪರವಾನಗಿ ಪಡೆಯದೆ ಅಕ್ರಮವಾಗಿ ನೀರಾ ಇಳಿಸಿ, ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಶುಕ್ರವಾರ ದಾಳಿ ನಡೆಸಿದ ಅಬಕಾರಿ ಪೊಲೀಸರು ತಮಿಳುನಾಡು ಮೂಲದ ದಂಪತಿಯನ್ನು ಬಂಧಿಸಿದರು. ಅಲ್ಲದೇ 75 ಲೀಟರ್‌ ನೀರಾ ಮತ್ತು ಮಡಕೆಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web excise department officers attacked on neera shop
ನೀರಾ ಇಳಿಸುತ್ತಿದ್ದ ಅಡ್ಡೆ ಮೇಲೆ ದಾಳಿ


ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಅವರ ಆದೇಶದಂತೆ ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ಬೆಟ್ಟ ಹಲಸೂರು ಸಮೀಪದ ಸೊಣ್ಣಪ್ಪನಹಳ್ಳಿಯಲ್ಲಿ ಅಕ್ರಮವಾಗಿ ನೀರಾ ಇಳಿಸಿ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಪೊಲೀಸರು ದಿಢೀರ್‌ ದಾಳಿ ನಡೆಸಿದರು. ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ, ತಮಿಳುನಾಡಿನ ಕೃಷ್ಣಗಿರಿಯ ಶೇಖರ್‌ ಮತ್ತು ಆತನ ಪತ್ನಿ ಅಮುದಾ ಎಂಬುವವರನ್ನು ಬಂಧಿಸಿದರು.

ಸೊಣ್ಣಪ್ಪನಹಳ್ಳಿಯ ಕೆಂಪಮ್ಮ, ರವಿಕಲಾ, ತಿಪ್ಪಮ್ಮ, ನಾರಾಯಣಪ್ಪ , ಶ್ಯಾಂಸುಂದರ್‌ ಅವರಿಗೆ ಸೇರಿದ 5.24 ಎಕರೆ ತೆಂಗಿನ ತೋಟದಲ್ಲಿ ಅಕ್ರಮವಾಗಿ ನೀರಾ ಇಳಿಸಲಾಗುತ್ತಿತ್ತು. ಬಂಧಿತ ಶೇಖರ್‌ ಮತ್ತು ಅಮುದಾ ಪ್ರತಿದಿನ 22 ತೆಂಗಿನ ಮರಗಳಿಂದ 70-75 ಲೀಟರ್‌ನಷ್ಟು ನೀರಾ ಇಳಿಸಿ ಮಾರಾಟ ಮಾಡುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ