ಆ್ಯಪ್ನಗರ

ಕಟ್ಟಡ ನಿರ್ಮಾಣ ಪಕ್ಕದ ಫುಟ್‌ಪಾತ್‌ ಕುಸಿತ: ಇಬ್ಬರ ಸ್ಥಿತಿ ಗಂಭಿರ

ಕಟ್ಟಡ ನಿರ್ಮಾಣ ನಡೆಯುತ್ತಿದ್ದ ಜಾಗಕ್ಕೆ ಹೊಂದಿಕೊಂಡಿದ್ದ ಫುಟ್‌ಪಾತ್‌ ಕುಸಿದ ಪರಿಣಾಮ ನಾಲ್ವರು ಬೀದಿ ವ್ಯಾಪಾರಿಗಳು ಗಾಯಗೊಂಡಿರುವ ಘಟನೆ ಮಾರತ್‌ಹಳ್ಳಿ ಸಮೀಪದ ಕುಂದಲಹಳ್ಳಿ ಗೇಟ್‌ ಬಳಿ ನಡೆದಿದೆ.

Vijaya Karnataka 17 Aug 2018, 5:00 am
ಬೆಂಗಳೂರು: ಕಟ್ಟಡ ನಿರ್ಮಾಣ ನಡೆಯುತ್ತಿದ್ದ ಜಾಗಕ್ಕೆ ಹೊಂದಿಕೊಂಡಿದ್ದ ಫುಟ್‌ಪಾತ್‌ ಕುಸಿದ ಪರಿಣಾಮ ನಾಲ್ವರು ಬೀದಿ ವ್ಯಾಪಾರಿಗಳು ಗಾಯಗೊಂಡಿರುವ ಘಟನೆ ಮಾರತ್‌ಹಳ್ಳಿ ಸಮೀಪದ ಕುಂದಲಹಳ್ಳಿ ಗೇಟ್‌ ಬಳಿ ನಡೆದಿದೆ.
Vijaya Karnataka Web footpath sliding two injured
ಕಟ್ಟಡ ನಿರ್ಮಾಣ ಪಕ್ಕದ ಫುಟ್‌ಪಾತ್‌ ಕುಸಿತ: ಇಬ್ಬರ ಸ್ಥಿತಿ ಗಂಭಿರ


ಸಲಾರ್‌ಪುರಿಯಾ ಸಂಸ್ಥೆ ನಿರ್ಮಿಸುತ್ತಿರುವ ನಿರ್ಮಾಣ ಹಂತದ ಕಟ್ಟಡಕ್ಕೆ ಹೊಂದಿಕೊಂಡಿದ್ದ ಫುಟ್‌ಪಾತ್‌ ಕುಸಿದಿದ್ದರಿಂದ ಅದರ ಮೇಲೆ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಬಾಷಾ (45) ಮತ್ತು ನಾಜೀರಾ ಬೇಗಂ (40) ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸಮೀಪದ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಟ್ಟಡ ನಿರ್ಮಾಣ ವೇಳೆ 50 ಅಡಿ ಆಳಕ್ಕೆ ಕಂಪನಿ ಗುಂಡಿ ತೆಗೆದಿತ್ತು. ಇದರ ಪರಿಣಾಮವಾಗಿ ಕಟ್ಟಡಕ್ಕೆ ಹೊಂದಿಕೊಂಡಿದ್ದ ಫುಟ್‌ಪಾತ್‌ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಕಾರ್ಪೊರೇಟರ್‌ ಶ್ವೇತಾ ವಿಜಯಕುಮಾರ್‌ ಮತ್ತು ಬಿಬಿಎಂಪಿ ಅಧಿಕಾರಿಗಳು ಹಾಗೂ ಎಚ್‌ಎಎಲ್‌ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಸ್ಥಳೀಯರು ನೀಡಿದ ದೂರಿನ ಮೇರೆಗೆ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ನೋಟಿಸ್‌ಗೆ ತಡೆಯಾಜ್ಞೆ: ಕಟ್ಟಡ ನಿರ್ಮಾಣದ ವೇಳೆ ಸ್ಥಳದಲ್ಲಿ ಜಿಲೆಟಿನ್‌ ಸಿಡಿಸಿ ಬಂಡೆಗಳನ್ನು ಸಿಡಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿ ಬಿಬಿಎಂಪಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಬಿಬಿಎಂಪಿ ಕಂಪನಿಗೆ ನೋಟಿಸ್‌ ಜಾರಿ ಮಾಡಿತ್ತು. ಆದರೆ ಕಂಪನಿ ನೋಟಿಸ್‌ಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿತ್ತು. ಆಗಲೇ ಅಧಿಕಾರಿಗಳು ಕ್ರಮ ಜರುಗಿಸಿದ್ದರೆ ಇಂದು ಈ ಅನಾಹುತ ನಡೆಯುತ್ತಿರಲಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ