ಆ್ಯಪ್ನಗರ

ಇನ್ಫೋಸಿಸ್‌ ಸಹ ಸಂಸ್ಥಾಪಕರ ಪುತ್ರಿಯ ಕ್ರೆಡಿಟ್‌ ಕಾರ್ಡ್‌ಗೇ ಕನ್ನ, 3 ಲಕ್ಷ ರೂ. ದೋಚಿದ ಖದೀಮರು!

ಇನ್ಫೋಸಿಸ್‌ ಸಹ ಸಂಸ್ಥಾಪಕರ ಮಗಳು, ಯುವ ಉದ್ಯಮಿ ಶ್ರುತಿ ಶಿಬುಲಾಲ್‌ ಅವರ ಕ್ರೆಡಿಟ್‌ ಕಾರ್ಡ್‌ನಿಂದ ಸೈಬರ್‌ ಖದೀಮರು, 3 ಲಕ್ಷ ರೂ. ದೋಚಿರುವ ಘಟನೆ ನಡೆದಿದೆ. ಈ ಸಂಬಂಧ ಜಯನಗರ ಠಾಣೆಗೆ ದೂರು ದಾಖಲಾಗಿದೆ.

Vijaya Karnataka Web 11 Dec 2019, 3:25 pm
ಬೆಂಗಳೂರು: ಇನ್ಫೋಸಿಸ್‌ ಸಹ ಸಂಸ್ಥಾಪಕ ಎಸ್‌.ಡಿ ಶಿಬುಲಾಲ್‌ ಅವರ ಪುತ್ರಿ, ಯುವ ಉದ್ಯಮಿ ಶ್ರುತಿ ಶಿಬುಲಾಲ್‌ ಅವರ ಕ್ರೆಡಿಟ್‌ ಕಾರ್ಡ್‌ನಿಂದ ಸೈಬರ್‌ ಖದೀಮರು, 3 ಲಕ್ಷ ರೂ. ದೋಚಿದ್ದಾರೆ.
Vijaya Karnataka Web shruti shibulal


ಈ ಸಂಬಂಧ ಶ್ರುತಿ ಅವರ ಇನ್ನೋವೇಷನ್‌ ಇನ್ವೆಸ್ಟ್‌ಮೆಂಟ್‌ ಮ್ಯಾನೇಜ್‌ಮೆಂಟ್‌ ಇಂಡಿಯಾ ಪ್ರೈ.ಲಿ ಕಂಪನಿಯ ಹಣಕಾಸು ವಿಭಾಗದ ಅಧಿಕಾರಿ ನಾಗೇಂದ್ರ ಪ್ರಶಾಂತ್‌ ಎಂಬುವವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ.

ಕಚೇರಿ ಸಂಬಂಧಿಸಿದ ಖರ್ಚುಗಳಿಗಾಗಿ ಕಾರ್ಡ್‌ ಅನ್ನು ಬಳಕೆ ಮಾಡಲಾಗುತ್ತಿತ್ತು. ಡಿ.2ರಂದು ಅಯರ್ಲೆಂಡ್‌ನಲ್ಲಿ ತಲಾ 60 ಸಾವಿರ ರೂ.ಯಂತೆ ಐದು ಹಂತಗಳಲ್ಲಿ ವಿದೇಶಿ ಹಣವನ್ನು ವಿತ್‌ ಡ್ರಾ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಏಕೈಕ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ ಮತ್ತೆ ಆರಂಭ

ಶ್ರುತಿ ಅವರು ಆ್ಯಕ್ಸಿಸ್‌ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಪಡೆದುಕೊಂಡಿದ್ದು, ಕಚೇರಿ ಬಳಕೆಯ ಉದ್ದೇಶಕ್ಕೆ ಅವರ ಕಂಪನಿ ಉದ್ಯೋಗಿ ಪ್ರಶಾಂತ್‌ ಅವರಿಗೆ 2014ರ ಸೆಪ್ಟೆಂಬರ್‌ ತಿಂಗಳಲ್ಲಿ ನೀಡಲಾಗಿತ್ತು. ಆದರೆ, ಕಾರ್ಡ್‌ ಪ್ರಶಾಂತ್‌ ಅವರ ಬಳಿ ಇದ್ದ ಸಂದರ್ಭದಲ್ಲೇ ಹಣವನ್ನು ದೋಚಲಾಗಿದೆ. ಅವರು ಯಾರೊಂದಿಗೂ ಕಾರ್ಡ್‌ ಮಾಹಿತಿ ಹಂಚಿಕೊಂಡಿಲ್ಲ. ಅಲ್ಲದೇ, ವಹಿವಾಟಿನ ಕುರಿತು ಒಟಿಪಿ ಸೇರಿದಂತೆ ಸಂದೇಶಗಳು ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಿಜ್ಜಾ ಆರ್ಡರ್‌ ಮಾಡಿ 2 ನಿಮಿಷದಲ್ಲಿ 95 ಸಾವಿರ ರೂ. ಕಳೆದುಕೊಂಡ ಟೆಕ್ಕಿ!

ಕ್ರೆಡಿಟ್‌ ಕಾರ್ಡ್‌ ಕ್ಲೋನಿಂಗ್‌ ಮಾಡಿ ಹಣ ವಿತ್‌ಡ್ರಾ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ, ಕಾರ್ಡ್‌ ಅನ್ನು ಈ ಹಿಂದೆ ಎಲ್ಲೆಲ್ಲಿಬಳಕೆ ಮಾಡಲಾಗಿದೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಸಂಬಂಧಪಟ್ಟ ಬ್ಯಾಂಕ್‌ನಿಂದ ಪಡೆಯಲಾಗುತ್ತಿದೆ. ಅಲ್ಲದೇ, ಸೈಬರ್‌ ಕ್ರೈಂ ಪೊಲೀಸರ ನೆರವನ್ನು ಪಡೆಯುತ್ತಿದ್ದೇವೆ ಎಂದು ಜಯನಗರ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ