ಆ್ಯಪ್ನಗರ

ಇನ್‌ಸ್ಟಾಗ್ರಾಂ ಮೂಲಕ ಬಾಲಕನ ಸುಲಿಗೆ: ಆರೋಪಿ ಅರೆಸ್ಟ್, 5 ಲಕ್ಷ ರೂ. ವಶ

ಆರೋಪಿಯನ್ನು ವಿಶ್ವನಾಥ್ ಎಂದು ಗುರುತಿಸಲಾಗಿದ್ದು, ಆಕ್ಷೇಪಾರ್ಹ ಫೋಟೋಗಳನ್ನು ಶೇರ್ ಮಾಡುವ ಬೆದರಿಕೆ ಹಾಕುವ ಮೂಲಕ 17 ವರ್ಷದ ವಿದ್ಯಾರ್ಥಿಯಿಂದ ಆತ ಬರೋಬ್ಬರಿ ಸುಮಾರು 7 ಲಕ್ಷ ರೂಪಾಯಿ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದ. ಅದು ಕೂಡ ಕೇವಲ 2 ತಿಂಗಳಲ್ಲಿ.

Vijaya Karnataka Web 20 Apr 2019, 2:20 pm
ಬೆಂಗಳೂರು: ಅಪ್ರಾಪ್ತ ಬಾಲಕನ ಬೆತ್ತಲೆ ಪೋಟೋ ಇಟ್ಕೊಂಡು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Vijaya Karnataka Web Instagram


ಆರೋಪಿಯನ್ನು ವಿಶ್ವನಾಥ್ ಎಂದು ಗುರುತಿಸಲಾಗಿದ್ದು, ಆಕ್ಷೇಪಾರ್ಹ ಫೋಟೋಗಳನ್ನು ಶೇರ್ ಮಾಡುವ ಬೆದರಿಕೆ ಹಾಕುವ ಮೂಲಕ 17 ವರ್ಷದ ವಿದ್ಯಾರ್ಥಿಯಿಂದ ಆತ ಬರೋಬ್ಬರಿ ಸುಮಾರು 7 ಲಕ್ಷ ರೂಪಾಯಿ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದ. ಅದು ಕೂಡ ಕೇವಲ 2 ತಿಂಗಳಲ್ಲಿ.

ಕಳೆದ 10 ದಿನಗಳ ಹಿಂದೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ಸಲ್ಲಿಕೆಯಾಗಿದ್ದು , 21 ವರ್ಷದ ಆರೋಪಿಯನ್ನು ಗುರುತಿಸಿದ್ದ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು. ಮತ್ತೀಗ ಆತನ ಬಂಧನವಾಗಿದೆ.

ಏನಾಗಿತ್ತು?


ಇದೆಲ್ಲ ಆರಂಭವಾಗಿದ್ದು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ. ಅಪ್ರಾಪ್ತ ಯುವತಿ ಜತೆ ಇನ್‌ಸ್ಟಾಗ್ರಾಂನಲ್ಲಿ ಚಾಟ್ ಮಾಡುತ್ತಿದ್ದ ಬಾಲಕ ಆಕೆಯೊಂದಿಗೆ ಬೆತ್ತಲೆ ಫೋಟೋಗಳನ್ನು ಹಂಚಿಕೊಂಡಿದ್ದ.

ಇನ್ಸಾಟ್ರಾಗಾಂ ನೋಡುವಾಗ ಆರೋಪಿ ವಿಶ್ವನಾಥ್‌ಗೆ ಬಾಲಕಿ ಅಕೌಂಟ್ ಸಿಕ್ಕಿತ್ತು. ಅದನ್ನು ಹ್ಯಾಕ್ ಮಾಡಿದ್ದ ಆತ ಅದರಲ್ಲಿ ದೊರೆತ ಬಾಲಕನ ನಗ್ನ ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡ. ಇನ್‌ಸ್ಟಾಗ್ರಾಂನಲ್ಲಿ ಬೇರೆ ಖಾತೆ ಓಪನ್ ಮಾಡಿ ಅಪ್ರಾಪ್ತ ಬಾಲಕನಿಗೆ ಹಣಕ್ಕೆ ಬೇಡಿಕೆ ಇಟ್ಟ. 10 ಲಕ್ಷ ರೂಪಾಯಿ ನೀಡದಿದ್ದರೆ, ಎಲ್ಲವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಮತ್ತು ಕುಟುಂಬದವರಿಗೆ, ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ.

ಮರ್ಯಾದೆಗೆ ಅಂಜಿದ ವಿದ್ಯಾರ್ಥಿ ಜನವರಿ ತಿಂಗಳಿಂದ ಮನೆಯಲ್ಲಿಯೇ ಕಳ್ಳತನ ಮಾಡಲು ಆರಂಭಿಸಿದ. ಮಾರತಹಳ್ಳಿ ಹಸ್ ನಿಲ್ದಾಣದಲ್ಲಿ ಆರೋಪಿಯನ್ನು ಭೇಟಿಯಾದ ಆತ ಮೊದಲ ಕಂತಾಗಿ 50ಸಾವಿರ ರೂ ನೀಡಿದ. ಫೆಬ್ರವರಿ ತಿಂಗಳಲ್ಲಿ ಅದೇ ಸ್ಥಳದಲ್ಲಿ 1.5 ಲಕ್ಷ ನೀಡಿದ. ಬಳಿಕ 36,ಸಾವಿರ, ಬೆಳ್ಳಿಯ ಸಾಮಾನನ್ನು ನೀಡಿದ. ಮತ್ತೆ ಮತ್ತೆ ಬೆದರಿಕೆ ಹಾಕಿದಾಗ 4 ಲಕ್ಷ ರೂಪಾಯಿ ಮತ್ತು ಬೆಳ್ಳಿ ಸಾಮಾನನ್ನು ನೀಡಿದ. ಆರೋಪಿ ವಿಶ್ವನಾಥ್ ಹಂತ ಹಂತವಾಗಿ ಬಾಲಕನಿಂದ 7 ಲಕ್ಷ ಹಣ ಸುಲಿಗೆ ಮಾಡಿದ್ದ.

ಹಣ ಪಡೆದ ನಂತರವೂ ಮತ್ತೆ ಪುನಃ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದ. ಬಾಲಕನ ತಂದೆಗೆ ಮನೆಯಲ್ಲಿ ಕಳ್ಳತನವಾಗುತ್ತಿರುವುದು ಅರಿವಿಗೆ ಬಂತು. ವಿಚಾರಿಸಿದಾಗ ಬಾಲಕ ಎಲ್ಲವನ್ನು ಒಪ್ಪಿಕೊಂಡು, ಬಳಿಕ ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ.

ರಾಜಾಜಿನಗರ ಠಾಣೆ ಇನ್ಸ್ ಪೆಕ್ಟರ್ ರಾಮರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಹಣ ಕೊಡುವ ನೆಪದಲ್ಲಿ ಆರೋಪಿ ವಿಶ್ವನಾಥ್ ಕರೆಸಿ ಅರೆಸ್ಟ್ ಮಾಡಲಾಯಿತು.

ಆರೋಪಿಯಿಂದ 5 ಲಕ್ಷ ನಗದು ಹಾಗೂ ಬೆಳ್ಳಿ ವಸ್ತು ವಶಕ್ಕೆ ಪಡೆಯಲಾಗಿದ್ದು, ಸದ್ಯ ಅರೊಪಿಯನ್ನ ಪರಪ್ಪನ ಅಗ್ರಹಾರ ಜೈಲಿಗಟ್ಟಲಾಗಿದೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ